VHP ಶೋಭಾಯಾತ್ರೆ ಮೇಲೆ ಕಲ್ಲೆಸೆಯಲು ಬಳಸಿದ್ದ ಹೋಟೆಲ್‌, ಅಂಗಡಿ ಧ್ವಂಸ

Published : Aug 07, 2023, 09:33 AM IST
VHP ಶೋಭಾಯಾತ್ರೆ ಮೇಲೆ ಕಲ್ಲೆಸೆಯಲು ಬಳಸಿದ್ದ ಹೋಟೆಲ್‌, ಅಂಗಡಿ ಧ್ವಂಸ

ಸಾರಾಂಶ

ಹರ್ಯಾಣದ ನೂಹ್‌ ಪಟ್ಟಣದಲ್ಲಿ ಜು.31ರಂದು ನಡೆದ ಕೋಮು ಸಂಘರ್ಷದಲ್ಲಿ ಭಾಗಿಯಾದವರಿಗೆ ಸೇರಿದ ಅಂಗಡಿ ಮತ್ತು ಇತರ ಕಟ್ಟಡಗಳನ್ನು ನೆಲಸಮಗೊಳಿಸುವ ಅಧಿಕಾರಿಗಳ ಕಾರ್ಯ ಭಾನುವಾರವೂ ಮುಂದುವರೆದಿತ್ತು

ಗುರುಗ್ರಾಮ: ಹರ್ಯಾಣದ ನೂಹ್‌ ಪಟ್ಟಣದಲ್ಲಿ ಜು.31ರಂದು ನಡೆದ ಕೋಮು ಸಂಘರ್ಷದಲ್ಲಿ ಭಾಗಿಯಾದವರಿಗೆ ಸೇರಿದ ಅಂಗಡಿ ಮತ್ತು ಇತರ ಕಟ್ಟಡಗಳನ್ನು ನೆಲಸಮಗೊಳಿಸುವ ಅಧಿಕಾರಿಗಳ ಕಾರ್ಯ ಭಾನುವಾರವೂ ಮುಂದುವರೆದಿತ್ತು. ವಿಶ್ವ ಹಿಂದೂ ಪರಿಷದ್‌ನ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ ನಡೆಸಿದ್ದವರೆಲ್ಲರು ಅಂದು ಸೇರಿದ್ದ 3 ಅಂತಸ್ತಿನ ಸಹಾರಾ ಎಂಬ ಹೋಟೆಲ್‌ ಅನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಘರ್ಷಣೆ ವೇಳೆ ಉದ್ರಿಕ್ತರು ಇದೇ ಹೋಟೆಲ್‌ನಲ್ಲಿ ಜಮಾಯಿಸಿದ್ದರು ಹಾಗೂ ಆ ವೇಳೆ ಪೊಲೀಸರು ಮತ್ತು ಇತರರ ಮೇಲೆ ಕಲ್ಲು ತೂರಾಟ ನಡೆಸಿದ್ದರು ಹಾಗೂ ಇವು ಅತಿಕ್ರಮ ಮಾಡಿ ನಿರ್ಮಿಸಿರುವ ಕಟ್ಟಡಗಳಾಗಿವೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಇಲ್ಲಿನ ವೈದ್ಯಕೀಯ ಕಾಲೇಜು ಬಳಿ ಇರುವ ಹಲವಾರು ಅಂಗಡಿಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಶನಿವಾರವಷ್ಟೇ 24ಕ್ಕೂ ಹೆಚ್ಚು ಔಷಧ ಅಂಗಡಿಗಳನ್ನು ಕೆಡವಲಾಗಿತ್ತು. ಆದರೆ ‘ಯಾವುದೇ ಅಂಗಡಿ ಮಾಲೀಕರಿಗೆ ನೋಟಿಸ್‌ ನೀಡದೇ ಅಧಿಕಾರಿಗಳು ಕಟ್ಟಡಗಳನ್ನು ನೆಲಸಮಗೊಳಿಸುತ್ತಿದ್ದಾರೆ’ ಎಂದು ಮಾಲೀಕರು ದೂರಿದ್ದಾರೆ. ಆದರೆ ಎಲ್ಲರಿಗೂ ನೋಟಿಸ್‌ ನೀಡಲಾಗಿದೆ. ಇವೆಲ್ಲ ಗಲಭೆಯಲ್ಲಿ ಭಾಗಿಯಾಗಿದ್ದವರ ಅಕ್ರಮ ಕಟ್ಟಡಗಳು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹರ್ಯಾಣ ಕೋಮು ಗಲಭೆ: ಪೊಲೀಸರೇ ಉದ್ರಿಕ್ತರ ಮೊದಲ ಟಾರ್ಗೆಟ್‌?

ಇನ್ನು ನಗರಗಳಲ್ಲಿನ ಕಫä್ರ್ಯ ಅವಧಿಯನ್ನು ಮುಂಜಾನೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿಸ್ತರಿಸಲಾಗಿದೆ. ಅಲ್ಲದೇ ನೂಹ್‌ ಮತ್ತು ಪಲ್ವಾಲ್‌ ಜಿಲ್ಲೆಗಳಲ್ಲಿ ಸರ್ಕಾರ ವಿಧಿಸಿರುವ ಇಂಟರ್‌ನೆಟ್‌ ನಿಷೇಧ ಆದೇಶವನ್ನು ಆ.8ರವರೆಗೆ ವಿಸ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನೂಹ್‌ನಲ್ಲಿ ನಡೆದ ಕೋಮು ಸಂಘರ್ಷದಲ್ಲಿ ಒಟ್ಟು 6 ಮಂದಿ ಸಾವನ್ನಪ್ಪಿದ್ದರು.

ಹರ್ಯಾಣದಲ್ಲಿ ಮುಂದುವರೆದ ಹಿಂಸೆ, ಅಂಗಡಿ ಮೇಲೆ ದಾಳಿ

ಪಾಣಿಪತ್‌: ಕಳೆದ ಜು.31ರಂದು ಹರ್ಯಾಣದಲ್ಲಿ ಆರಂಭವಾದ ಕೋಮುಗಲಭೆ ತಣ್ಣಗಾಗುವ ಲಕ್ಷಣ ಕಂಡುಬರುತ್ತಿಲ್ಲ. ಭಾನುವಾರ ಉದ್ರಿಕ್ತರ ಗುಂಪೊಂದು ಪಾಣಿಪತ್‌ನಲ್ಲಿ ಏಕಾಏಕಿ ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿ ಪರಾರಿಯಾಗಿದೆ. ಹೀಗಾಗಿ ನಗರದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನೆಲೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಹೆಚ್ಚಿನ ಪೊಲಿಸರನ್ನು ನಿಯೋಜಿಸಲಾಗಿದೆ.

ಮುಖಗವಸು ಧರಿಸಿಕೊಂಡು ಬೈಕ್‌ನಲ್ಲಿ ಬಂದ 20-25ರ ವಯೋಮಾನದ ಗುಂಪೊಂದು ಏಕಾಏಕಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ದಾಂಧಲೆ ಎಬ್ಬಿಸಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡ ಕೆಲವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣ ಸಂಬಂಧ 15 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನೂಹ್‌ ಹಿಂಸಾಚಾರದಲ್ಲಿ ಬಲಿಯಾದ ವ್ಯಕ್ತಿಯೊಬ್ಬನಿಗೆ ಸೇರಿದ ಚಿಕನ್‌ ಅಂಗಡಿಯನ್ನು ಗುಂಪೊಂದು ಧ್ವಂಸಗೊಳಿಸಿತ್ತು. ಅದರ ಬೆನ್ನಲ್ಲೇ ಭಾನುವಾರ ಮತ್ತೆ ಹಿಂಸಾಚಾರದ ಘಟನೆ ನಡೆದಿದೆ.

ಹರಿಯಾಣ ಕೋಮುಗಲಭೆಯಲ್ಲಿ ನಾಲ್ವರ ಸಾವು, ನುಹ್‌ ಜಿಲ್ಲೆಯಲ್ಲಿ ಎರಡು ದಿನ ಕರ್ಫ್ಯೂ!

ನೂಹ್‌ನಲ್ಲಿ ವಿಎಚ್‌ಪಿ ಆಯೋಜಿಸಿದ್ದ ಶೋಭಾಯಾತ್ರೆ ವೇಳೆ ದುಷ್ಕರ್ಮಿಗಳು ಕಲ್ಲು ಎಸೆದು ತಡೆಯೊಡ್ಡಿದ್ದರು. ಬಳಿಕ ರಾಜ್ಯದಲ್ಲಿ ಹಿಂಸಾಚಾರ ನಡೆದು 6 ಜನರು ಸಾವನ್ನಪ್ಪಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?