ಡಿಸ್ಚಾರ್ಜ್ ಆದ ಕೊರೊನಾ ಸೋಂಕಿತರಿಗೆ ಗಿಡ ಬೆಳೆಸಿ ಎಂದ ವೈದ್ಯರು

By Suvarna NewsFirst Published Apr 26, 2021, 11:51 AM IST
Highlights

ಕೊರೋನಾದಿಂದ ಗುಣಮುಖರಾಗಿ ಡಿಸ್ಜಾರ್ಜ್ ಆದರವರಿಗೆ ಗಿಡ ನೆಡುವಂತೆ ಹೇಳಿದ ವೈದ್ಯರು | ನಿಮಗೆ ಆಕ್ಸಿಜನ್ ಸಿಕ್ಕಿತು, ಅದನ್ನು ಪ್ರಕೃತಿಗೆ ಮರಳಿಸಿ

ನಾಗ್ಪುರ(ಏ.26): ಕೊರೋನಾ ಎರಡನೇ ಅಲೆಯಲ್ಲಿ ಜೀವವಾಯುವಿನ ಮಹತ್ವವವನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಸದ್ಯ ಹಣ, ಆಡಂಬರ ಯಾವುದೂ ಬೇಡ, ಬೇಕಾಗಿರೋದು ಒಂದೇ, ಆಮ್ಲಜನಕ ಮಾತ್ರ. ಬಹಳಷ್ಟು ಆಸ್ಪತ್ರೆಗಳು ಗಂಭೀರ ಸ್ಥಿತಿಯಲ್ಲಿರೋ ಸೋಂಕಿತರನ್ನು ರಕ್ಷಿಸಲು ಆಕ್ಸಿಜನ್ ಇಲ್ಲದೆ ಪರದಾಡುತ್ತಿವೆ.

ಆಕ್ಸಿಜನ್ ಸಿಕ್ಕಿ ಜೀವ ಉಳಿದವರು ಅದೃಷ್ಟವಂತರು. ಅಷ್ಟರ ಮಟ್ಟಿಗೆ ಆಕ್ಸಿಜನ್ ಕೊರತೆ ತಲೆದೋರಿದೆ. ಇಂತಹ ಸಂದರ್ಭದಲ್ಲಿ ಕೊರೋನಾದಿಂದ ಗುಣಮುಖರಾಗಿ ಮನೆಗೆ ಹೊರಟವರಿಗೆ ವಿಶೇಷ ಸೂಚನೆ ನೀಡಿದೆ ನಾಗ್ಪುರದ ಆಸ್ಪತ್ರೆ. ನೀವು ಬಳಸಿದ ಆಮ್ಲಜನಕವನ್ನು ಪ್ರಕೃತಿಗೆ ಮರಳಿಸಿ ಎಂದಿದ್ದಾರೆ ವೈದ್ಯರು.

Latest Videos

'ಹೆದರಬೇಡಿ, ಕೊರೋನಾ ಚೈನ್ ನಾವು ಬ್ರೇಕ್ ಮಾಡ್ಲೇಬೇಕು'..!

ನೀವು ಗುಣಮುಖರಾಗಲು 144000 ಲೀಟರ್ ಆಕ್ಸಿಜನ್ ಬಳಸಿದ್ದಾರೆ. ಈಗ 10 ಗಿಡ ನೆಟ್ಟು ಅದನ್ನು ಪ್ರಕೃತಿಗೆ ಮರಳಿಸಿ. ಇದು ನಾಗ್ಪುರದ ಆಸ್ಪತ್ರೆಯಲ್ಲಿ ಡಿಸ್ಚಾರ್ಜ್ ಆಗಿ ಹೊರಟ ಕೊರೋನಾ ಸೋಂಕಿತನ ಡಿಸ್ಚಾರ್ಜ್ ಸಮ್ಮರಿಯಲ್ಲಿ ಬರೆಯಲಾಗಿದ್ದ ವಿಚಾರ. ಐಸಿಯುವಿನಲ್ಲಿ ಒಂದು ವಾರ ಕಳೆದು 41 ವರ್ಷದ ಮಹಿಳೆ ಗುಣಮುಖರಾಗಿದ್ದರು.

ಈ ವರ್ಷ ಇನ್ನೂ 10 ಕ್ಕೂ ಹೆಚ್ಚು ಮರಗಳನ್ನು ನೆಡಲು ಮತ್ತು ಸಂರಕ್ಷಿಸಲು ನಾನು ನಿರ್ಧರಿಸಿದ್ದೇನೆ ಎಂದಿದ್ದಾರೆ ಈಕೆ. ಏಪ್ರಿಲ್ 22 ರಂದು ಗೆಟ್ ವೆಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಮಹಿಳೆ, ಆಮ್ಲಜನಕದ ವೆಚ್ಚ ಮತ್ತು ಪ್ರಾಮುಖ್ಯತೆಯನ್ನು ಕೊರೋನಾ ನನಗೆ ಮನವರಿಕೆ ಮಾಡಿಕೊಟ್ಟಿತು ಎಂದಿದ್ದಾರೆ.

click me!