
ಮುಂಬೈ (ಜು.22) ಮದುವೆ ಅಷ್ಟೇ ಬೇಗ ವಿಚ್ಛೇದನ ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಡಿವೋರ್ಸ್ ವೇಳೆ ಕೋರ್ಟ್‌ನಲ್ಲಿ ನೀಡುವ ಕಾರಣ, ಜೀವನಾಂಶ ಬೇಡಿಕೆಗಳು ಹಲವು ಭಾರಿ ಸುದ್ದಿಯಾಗುತ್ತದೆ. ಇದೀಗ ಮಹಿಳೆಯೊಬ್ಬರು ವಿಚ್ಚೇದನ ವೇಳೆ ಪತಿಯಿಂದ ಜೀವನಾಂಶವಾಗಿ ದುಬಾರಿ ಬೇಡಿಕೆ ಇಟ್ಟಿದ್ದಾಳೆ. ಈಕೆಯ ಬೇಡಿಕೆ ನೋಡಿ ಒಂದು ಕ್ಷಣ ಸುಪ್ರೀಂ ಕೋರ್ಟ್ ನ್ಯಾಯಾಧೀಶರೇ ಒಂದು ಕ್ಷಣ ಸ್ಥಬ್ಧರಾಗಿದ್ದಾರೆ. ಕಾರಣ ವಚ್ಛೇದನ ವೇಳೆ ಜೀವನಾಂಶವಾಗಿ ಪತಿಯಿಂದ ಕೇಳಿದ್ದ ಬರೋಬ್ಬರಿ 12 ಕೋಟಿ ರೂಪಾಯಿ, ಮುಂಬೈನಲ್ಲಿ ಐಷಾರಾಮಿ ಮನೆ ಹಾಗೂ BMW ಕಾರು.
ಸುಪ್ರೀಂ ಕೋರ್ಟ್ ಖಡಕ್ ಪ್ರಶ್ನೆ
ಮದುವೆಯಾಗಿ 18ನೇ ತಿಂಗಳಿಗೆ ಸತಿ ಪತಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಕೆಲ ದಿನಳಿಂದ ಡಿವೋರ್ಸ್ ಅರ್ಜಿ ವಿಚಾರಣೆ ನಡೆಯುತ್ತಿದೆ. ಈ ಪೈಕಿ ಪತ್ನಿ ಕೇಳುತ್ತಿರುವ ಜೀವನಾಂಶ ಹಾಗೂ ವಾದ ಎಲ್ಲರ ಗಮನ ಸೆಳೆದಿದೆ. ದುಬಾರಿ ಜೀವನಾಂಶ ಬೇಡಿಕೆಗೆ ಪತ್ನಿ ಕಾರಣವನ್ನು ನೀಡಿದ್ದಾರೆ. ಆದರೆ ಈ ಜೀವನಾಂಶ ಕೇಳಿದ ಸುಪ್ರೀಂ ಕೋರ್ಟ್ ಜಡ್ಜ್ ಖಡಕ್ ಪ್ರಶ್ನೆ ಕೇಳಿದ್ದಾರೆ. ಮದುವೆಯಾಗಿ ಕೇವಲ 18 ತಿಂಗಳು ಆಗಿದೆ ಅಷ್ಟೇ, ನೀವು ವಿದ್ಯಾವಂತರೀದ್ದೀರಿ, ಈ ರೀತಿ ಕೇಳುವ ಬದಲು ನೀವೇ ದುಡಿದು ಗಳಿಸಬಹುದಲ್ಲವೇ ಎಂದು ಸುಪ್ರೀಂ ಕೋರ್ಟ್ ಜಡ್ಜ್ ಪ್ರಶ್ನಿಸಿದ್ದಾರೆ.
ಕೇವಲ 18 ತಿಂಗಳ ಸಂಸಾರ, 18 ಕೋಟಿಗೂ ಹೆಚ್ಚು ಜೀವನಾಂಶ
ಪತ್ನಿಯ ಜೀವನಾಂಶ ಬೇಡಿಕೆ ಕುರಿತು ನ್ಯಾಯಾಧೀಶರು ಚರ್ಚಿಸಿದ್ದಾರೆ. ಕೇವಲ 18 ತಿಂಗಳು ಸಂಸಾರ ಮಾಡಿ ಇದೀಗ 12 ಕೋಟಿ ರೂಪಾಯಿ, ಮುಂಬೈನಲ್ಲಿ ಮನೆ ಹಾಗೂ ಕಾರು ಕೇಳುತ್ತಿದ್ದೀರಿ. ಮದುವೆಗೂ ಮೊದಲು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತೀದ್ದೀರಿ. ನೀವು ಎಂಬಿಎ ಕೂಡ ಮಾಡಿದ್ದೀರಿ. ನೀವು ಮದುವೆಯಾದ ಮೇಲೆ ಕೆಲಸಕ್ಕೆ ಹೋಗುವುದಿಲ್ಲ ಅನ್ನೋ ನಿರ್ಧಾರ ನೀವೇ ನಿರ್ಧಾರ ತೆಗೆದುಕೊಂಡಿದ್ದೀರಿ. ನಿಮ್ಮ ಅನುಭವ, ವಿದ್ಯಾಭ್ಯಾಸಕ್ಕೆ ಬೆಂಗಳೂರು, ಹೈದರಾಬಾದ್‌ನಲ್ಲಿ ಉತ್ತಮ ಕೆಲಸ ಸಿಗಲಿದೆ. ಆದರೆ ನೀವು ಜೀವನಾಂಶ ಬೇಡಿಕೆ ಇಡುತ್ತೀದ್ದೀರಿ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
ಪತಿ ಅತೀ ಶ್ರೀಮಂತರು
ಪತ್ನಿಯ ಈ ದುಬಾರಿ ಬೇಡಿಕೆಗೆ ಹಿಂದಿನ ಕಾರಣ ಕೇಳಿ ಹಲವರು ಅಚ್ಚರಿಗೊಂಡಿದ್ದಾರೆ. ಈಕೆಯ ಬೇಡಿಕೆಯನ್ನು ಸಮರ್ಥಿಸಿಕೊಳ್ಳಲ ನೀಡಿದ ಕಾರಣ ಪತಿ ತುಂಬಾ ಶ್ರೀಮಂತರು ಎಂದಿದ್ದಾರೆ. ಅವರಿಗೆ ನಾನು ಕೇಳಿದ ಜೀವನಾಂಶ ಮೊತ್ತ ಹೊರೆಯಾಗುವುದಿಲ್ಲ ಎಂದಿದ್ದಾರೆ. ಇದೀಗ ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ