ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದ ಕೆಲಸವನ್ನು ಗಮನಿಸಲು ಕೇಂದ್ರ ರಚಿಸಿದ ಸಮಿತಿ ಬಗ್ಗೆ ಮಾಹಿತಿ ನೀಡಲು ಗೃಹ ಸಚಿವಾಲಯ ನಿರಾಕರಿಸಿದೆ. ಈ ಬಗ್ಗೆ ಯಾವುದೇ ಕಾನೂನು ರೀತಿಯ ಕಾರಣವನ್ನು ನೀಡಲಾಗಿಲ್ಲ.
ನವದೆಹಲಿ(ಜು.13): ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದ ಕೆಲಸವನ್ನು ಗಮನಿಸಲು ಕೇಂದ್ರ ರಚಿಸಿದ ಸಮಿತಿ ಬಗ್ಗೆ ಮಾಹಿತಿ ನೀಡಲು ಗೃಹ ಸಚಿವಾಲಯ ನಿರಾಕರಿಸಿದೆ. ಈ ಬಗ್ಗೆ ಯಾವುದೇ ಕಾನೂನು ರೀತಿಯ ಕಾರಣವನ್ನು ನೀಡಲಾಗಿಲ್ಲ.
ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಕೆಲಸವನ್ನು ಗಮನಿಸಿಕೊಳ್ಳಲು ರಚಿಸಲಾದ ಸಮಿತಿಯ ಸದಸ್ಯರ ಕುರಿತಾದ ಮಾಹಿತಿ ನೀಡುವಂತೆ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರ ನೀಡದೆ ನಿರಾಕರಿಸಲಾಗಿದೆ.
undefined
ರಾಮಮಂದಿರ ನಿರ್ಮಾಣ ಎಲ್ಲಿಗೆ ಬಂತು? ಸಣ್ಣ ಅಪ್ಡೇಟ್
ಆರ್‌ಟಿಐ ಕಾಯ್ದೆ 2005ರ ಅಡಿಯಲ್ಲಿ ಸೆಕ್ಷನ್ 8ರ ಪ್ರಕಾರ ನೀವು ಕೇಳಿದ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಅರ್ಜಿಗೆ ಉತ್ತರಿಸಲಾಗಿದೆ. ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಲಾದ ಒಂದು ಪುಟದ ಮಾಹಿತಿಯನ್ನು ಗೃಹ ಸಚಿವಾಲಯದ ಸಹಕಾರ್ಯದರ್ಶಿ ವಿ.ಎಸ್ ರಾಣಾ ಗಾಝೀಯಾಬಾದ್‌ನ ಸಾಮಾಜಿಕ ಕಾರ್ಯಕರ್ತ ಸುಶೀಲ್ ರಾಘವ್‌ಗೆ ಓದಿ ಹೇಳಿದ್ದಾರೆ.
ಆರ್‌ಟಿಐ ಕಾಯ್ದೆ ಪ್ರಕಾರ ಮಾಹಿತಿ ನೀಡಬಹುದಾದ ಮತ್ತು ಮಾಹಿತಿ ನೀಡಬಾರದ ವಿಚಾರಗಳ ಬಗ್ಗೆ ವಿವರಿಸಲಾಗಿದೆ. ಆದರೆ ಗೃಹ ಸಚಿವಾಲಯ ಯಾವುದೇ ಕಾರಣವನ್ನೂ ನೀಡದೆ ಅರ್ಜಿಗೆ ಉತ್ತರಿಸಲು ನಿರಾಕರಿಸಿದೆ.
ಅಯೋಧ್ಯೆ ರಾಮಮಂದಿರಕ್ಕೆ ಅಡಿಗಲ್ಲು ಮುಂದೂಡಿಕೆ: ಕೊನೆ ಕ್ಷಣದಲ್ಲಿ ಆಗಿದ್ದೇನು?
ರಾಮನ ವಂಶಸ್ಥ ಎನ್ನಲಾದ ಸುಶೀಲ್ ರಾಘವ್ ಸಮಿತಿಯ ಸದಸ್ಯರ ಬಗ್ಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ತಂಡದ ಸದಸ್ಯರು, ಅವರನ್ನು ಆಯ್ಕೆ ಮಾಡಿಕೊಂಡ ಮಾನದಂಡ, ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಾಗಿದ್ದರೆ ಅದರ ಪ್ರತಿ, ಯೋಜನೆಯ ವೆಚ್ಚ, ಗುರಿಗಳು ಹಾಗೂ ಉದ್ದೇಶಗಳನ್ನು ತಿಳಿಸುವಂತೆ ಅರ್ಜಿಯಲ್ಲಿ ಕೇಳಲಾಗಿತ್ತು.
ಈ ಪ್ರಶ್ನೆಗಳನ್ನು ಹೊರತುಪಡಿಸಿ, ಆರು ತಿಂಗಳು ಹಿಂದೆ ಸಲ್ಲಿಸಲಾದ ಅರ್ಜಿಗೆ ಉತ್ತರ ನೀಡಬೇಕೆಂದು ಒತ್ತಾಯಿಸಿದ್ದರು. ತಮ್ಮನ್ನೂ ಸಮಿತಿ ಸದಸ್ಯರಾಗಿ ಆಯ್ಕೆ ಮಾಡುವ ಬಗ್ಗೆ ಏನು ಉತ್ತರವಿದೆ ಎಂದು ಕೇಳಿದ್ದರು.
ರಾಮಮಂದಿರ ನಿರ್ಮಾಣ ಶುರು, ರಾಮ ಜಪ ಮಾಡಿದ ಪ್ರಮೋದ್ ಮುತಾಲಿಕ್ ಒಂದೇ ಮಾತು
ತಮ್ಮ ಮನವಿಯಲ್ಲಿ ತಾವು ಶ್ರೀರಾಮ ವಂಶಕ್ಕೆ ಸೇರಿದವರು ಎಂದೂ ರಾಘವ್ ಹೇಳಿದ್ದರು. ಸರ್ ನೇಮ್ ರಘು ಶ್ರೀರಾಮನ ಪೂರ್ವಜರ ರಘು ವಂಶದಿಂದಲೇ ಬಂದಿದೆ ಎಂದೂ ಹೇಳಿಕೊಂಡಿದ್ದರು.