ಮಂಜುಗಡ್ಡೆ ಕಟ್‌ ಮಾಡಿ ಹುಟ್ಟುಹಬ್ಬ ಆಚರಿಸಿದ ಹೆಮ್ಮೆಯ ಯೋಧರು..!

Published : Jul 13, 2020, 01:06 PM ISTUpdated : Jul 13, 2020, 01:37 PM IST
ಮಂಜುಗಡ್ಡೆ ಕಟ್‌ ಮಾಡಿ ಹುಟ್ಟುಹಬ್ಬ ಆಚರಿಸಿದ ಹೆಮ್ಮೆಯ ಯೋಧರು..!

ಸಾರಾಂಶ

ಮಂಜುಗಡ್ಡೆಯನ್ನು ಕೇಕ್‌ ನಂತೆ ಮಾಡಿ ಸೈನಿಕರೊಬ್ಬರು ಚಾಕುವಿನಿಂದ ಕಟ್ ಮಾಡಿದ್ದಾರೆ. ಈ ವಿಡಿಯೋ ದೇಶದ ಜನರ ಹೃದಯವನ್ನು ಗೆದ್ದಿದೆ. ಈ ಕ್ಷಣವನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೊಂಡಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಜಮ್ಮು(ಜು.13): ಮೈಕೊರೆಯುವ ಚಳಿಯಲ್ಲಿ ಗಡಿಯಲ್ಲಿ ನಿಂತು ದೇಶ ಕಾಯುವ ವೀರಯೋಧರೊಬ್ಬರ ಹುಟ್ಟುಹಬ್ಬದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಸಹಯೋಧರೊಂದಿಗೆ ಸೈನಿಕನೊಬ್ಬರ ಹುಟ್ಟು ಹಬ್ಬದ ಸಂಭ್ರಮದ 14 ಸೆಕೆಂಡ್‌ಗಳ ವಿಡಿಯೋವನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಂಜುಗಡ್ಡೆಯನ್ನು ಕೇಕ್‌ ನಂತೆ ಮಾಡಿ ಸೈನಿಕರೊಬ್ಬರು ಚಾಕುವಿನಿಂದ ಕಟ್ ಮಾಡಿದ್ದಾರೆ. ಈ ವಿಡಿಯೋ ದೇಶದ ಜನರ ಹೃದಯವನ್ನು ಗೆದ್ದಿದೆ. ಇದು ಸೈನಿಕನೊಬ್ಬರು ಹುಟ್ಟುಹಬ್ಬದ ಕ್ಷಣ. ಚೀಸ್ ಕೇಕ್ ಮರೆತು ಬಿಡಿ, ಅದ್ಭುತವಾದ ಮಂಜಿನ ಕೇಕ್‌ನ್ನು ಒಮ್ಮೆ ನೋಡಿ. ಅವರ ಸಂಯಮ ಹಾಗೂ ತ್ಯಾಗವನ್ನು ಹೊಗಳಲು ಪದಗಳು ಸಾಲುತ್ತಿಲ್ಲ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. 

ಸಂಪೂರ್ಣ ಲಾಕ್‌ಡೌನ್‌: ಡಿಸಿಗಳ ಜೊತೆ ವಿಡಿಯೋ ಸಂವಾದ, ಸಿಎಂ ಬಿಎಸ್‌ವೈ ಪ್ರತಿಕ್ರಿಯೆ

ದೇಶಭಕ್ತಿಯಿಂದ ಲಕ್ಷಾಂತರ ಮಂದಿ ತಮ್ಮ ಜೀವದ ಹಂಗು ತೊರೆದು ದೇಶ ಸೇವೆ ಮಾಡಲು ಭಾರತೀಯ ಸೇನೆಯನ್ನು ಸೇರುತ್ತಾರೆ. ಅವರ ನಿಸ್ವಾರ್ಥ ಸೇವೆಗೆ ಸುವರ್ಣ ನ್ಯೂಸ್‌.ಕಾಂ ವತಿಯಿಂದ ಬಿಗ್ ಸಲ್ಯೂಟ್.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬ್ಯಾಂಕ್ ಆಫ್ ಬರೋಡಾ ನೇಮಕಾತಿ: ಸ್ಥಳೀಯ ಭಾಷೆ ಬಲ್ಲ 2482 ಅಧಿಕಾರಿಗಳ ನೇಮಕಾತಿಗೆ ಅರ್ಜಿ
ಇಂಟರ್ನೆಟ್‌ ಇಲ್ಲದ ಕೀಪ್ಯಾಡ್‌ ಫೋನಲ್ಲಿ ಯುಪಿಐ '123ಪೇ' ಸೇವೆ; ಫೋನ್‌ಪೇನಿಂದಚಾಲನೆ