25 ಸಂಸದರೊಂದಿಗೆ ಅಮಿತ್ ಶಾ ಮಹತ್ವದ ಸಭೆ; ಸಂಪುಟ ವಿಸ್ತರಣೆ ಸಾಧ್ಯತೆ!

By Suvarna NewsFirst Published Jun 15, 2021, 2:18 PM IST
Highlights
  • ಪ್ರಧಾನಿ ನರೇಂದ್ರ ಮೋದಿ ಸಭೆ ಬೆನ್ನಲ್ಲೇ ಸಂಸದರೊಂದಿಗೆ ಅಮಿತ್ ಶಾ ಸಭೆ
  • 2a5 ಸಂಸದರ ಜೊತೆಗೆ ಮಹತ್ವದ ಸಭೆ ನಡೆಸಿದ ಗೃಹ ಸಚಿವ ಅಮಿತ್ ಶಾ
  • ಸಂಪುಟ ವಿಸ್ತರಣೆ ಮಾತುಗಳ ಕೇಳಿಬರುತ್ತಿರುವ ಬೆನ್ನಲ್ಲೇ ಮಹತ್ವ ಪಡೆದುಕೊಂಡ ಸಭೆ

ನವದೆಹಲಿ(ಜೂ.15): ಕೇಂದ್ರದಲ್ಲಿ ಸಂಪುಟ ವಿಸ್ತರಣೆ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ನಡೆಯುತ್ತಿರುವ ಕೆಲ ಬೆಳವಣಿಗೆಗಳು ಸಂಪುಟ ವಿಸ್ತರಣೆಯನ್ನು ಪುಷ್ಠೀಕರಿಸುತ್ತಿದೆ. ಜೂ. 14 ರಂದು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸಚಿವರ ಜೊತೆ ಸಭೆ ನಡೆಸಿದ್ದಾರೆ. ಇದೀಗ ಗೃಹ ಮಂತ್ರಿ ಅಮಿತ್ ಶಾ, 25 ಸಂಸದರು ಹಾಗೂ ಸಚಿವರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ.

ಕೇಂದ್ರ ಸಚಿವ ಸಂಪುಟಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಎಂಟ್ರಿ?

ಉತ್ತರ ಪ್ರದೇಶ, ಗುಜರಾತ್, ಮಧ್ಯ ಪ್ರದೇಶ, ರಾಜಸ್ಥಾನ ಸೇರಿದಂತೆ ಕೆಲ ರಾಜ್ಯಗಳ ಯುವ ಸಂಸದರು ಹಾಗೂ ಸಚಿವರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಕೆಲ ಯುವ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ಕೆಲ ಮಾಹಿತಿಗಳು ಹೊರಬಿದ್ದಿವೆ. ಆದರೆ ಸಂಪುಟ ವಿಸ್ತರಣೆ ಕುರಿತು ಬಿಜೆಪಿ, ಹಾಗೂ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿಲ್ಲ.

ಪ್ರಧಾನಿ ಕೆಲ ಸಚಿವರ ಜೊತೆ ಸಭೆ ನಡೆಸಲಿದ್ದಾರೆ. ಕಳೆದೆರಡು ವರ್ಷದಲ್ಲಿನ ಸಾಧನೆ, ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಪ್ರೋಗ್ರೆಸ್ ಕಾರ್ಡ್ ಕುರಿತು ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಸದಾನಂದ ಗೌಡ, ವಿ ಮುರಳೀಧರನ್ ಸೇರಿದಂತೆ ಪ್ರಮುಖ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ.

ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಲಕ್ಷದ್ವೀಪದಲ್ಲಿ ನೋ ಚೇಂಜಸ್: ಅಮಿತ್ ಶಾ...

ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಸಣ್ಣ ಮಟ್ಟದಲ್ಲಿ ಸಂಪುಟ ಸರ್ಜರಿ ಮಾಡಲಿದೆ ಅನ್ನೋ ಮಾತುಗಳು ಬಲವಾಗುತ್ತಿದೆ. ಶುಕ್ರವಾರ ಮೋದಿ ನಡೆಸಿದ ಸಭೆ ಸಂಪುಟ ವಿಸ್ತರಣೆ ಮಾತಿಗೆ ಪುಷ್ಠಿ ನೀಡಿತ್ತು. ಇದಾದ ಬಳಿಕ  ಮೋದಿ ಹಾಗೂ ಅಮಿತ್ ಶಾ,  ಬಿಜೆಪಿ ಸಂಸಸದರೂ, ಸಚಿವರ ಜೊತೆ 5 ಸಭೆಗಳನ್ನು ನಡೆಸಿದ್ದಾರೆ.

click me!