Godhra Train Burning Case: ಗೋಧ್ರಾ ರೈಲಿನ ಮೇಲೆ ಕಲ್ಲು ತೂರಿದ್ದ ವ್ಯಕ್ತಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು!

By Santosh Naik  |  First Published Dec 15, 2022, 3:30 PM IST

2002ರಲ್ಲಿ ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ಹಚ್ಚಲಾಗಿತ್ತು. ಇದರಲ್ಲಿ 59 ಕರಸೇವಕರು ಸಾವು ಕಂಡಿದ್ದರು. ಈ ವೇಳೆ ರೈಲಿನ ಮೇಲೆ ಕಲ್ಲು ತೂರಿದ್ದ ವ್ಯಕ್ತಿಗೆ ಸುಪ್ರೀಂ ಕೋರ್ಟ್‌ 17 ವರ್ಷಗಳ ಬಳಿಕ ಜಾಮೀನು ನೀಡಿದೆ.


ನವದೆಹಲಿ (ಡಿ.15): ಗೋಧ್ರಾ ಹತ್ಯಾಕಾಂಡದ ಅಪರಾಧಿಗಳಲ್ಲಿ ಒಬ್ಬನಾದ ಫಾರೂಕ್‌ಗೆ ಸುಪ್ರೀಂ ಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ. ಜೀವಾವಧಿ ಶಿಕ್ಷೆಯ ವಿರುದ್ಧ ಅಪರಾಧಿಯ ಸಲ್ಲಿಸಿದ್ದ ಮೇಲ್ಮನವಿ 2018 ರಿಂದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿತ್ತು. ಫಾರೂಕ್‌ 2004ರಿಂದ ಜೈಲಿನಲ್ಲಿದ್ದಾನೆ ಎಂದು ಸುಪ್ರೀಂ ಕೋರ್ಟ್‌ಗೆ ಈ ವೇಳೆ ತಿಳಿಸಲಾಗಿದೆ. ಕಳೆದ 17 ವರ್ಷಗಳಿಮದ ಫಾರೂಕ್‌ ಜೈಲಿನಲ್ಲಿದ್ದಾನೆ. ಆ ಕಾರಣಕ್ಕಾಗಿ ಇವರಿಗೆ ಜಾಮೀನು ನೀಡಬೇಕು ಎಂದು ವಾದ ಮಾಡಲಾಗಿದೆ. ಆದರೆ, ಈ ಜಾಮೀನನ್ನು ವಿರೋಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಇದು ದೇಶದ ಅತ್ಯಂತ ಘೋರ ಅಪರಾಧಗಳಲ್ಲಿ ಒಂದು. ಜನರನ್ನು ಬೋಗಿಗಳಲ್ಲಿ ಬಂಧಿಸಿ ಅವರನ್ನು ಜೀವಂತವಾಗಿ ಸುಟ್ಟುಹಾಕಲಾಗಿತ್ತು. ಸಾಮಾನ್ಯ ಸಂದರ್ಭಗಳಲ್ಲಿ ಕಲ್ಲು ತೂರಾಟವು ಕಡಿಮೆ ಗಂಭೀರ ಅಪರಾಧವಾಗಬಹುದು, ಆದರೆ ಇದು ವಿಭಿನ್ನ ಪ್ರಕರಣ" ಎಂದು ಹೇಳಿದರು.

ಏನಿದು ವಿಚಾರ: 2022ರ ಫೆಬ್ರವರಿ 27 ರಂದು, ಗೋಧ್ರಾ ನಿಲ್ದಾಣದಲ್ಲಿ ಗುಂಪೊಂದು ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಕೋಚ್‌ಗೆ ಬೆಂಕಿ ಹಚ್ಚಿತು. ಈ ಘಟನೆಯಲ್ಲಿ 59 ಕರಸೇವಕರು ಸುಟ್ಟು ಕರಕಲಾದರು. ಇದಾದ ನಂತರ 2002ರಲ್ಲಿ ಗುಜರಾತ್‌ನಲ್ಲಿ ಗಲಭೆ ನಡೆದಿತ್ತು. ಆರೋಪಿ ಫಾರೂಕ್ ಮೇಲೆ ಕಲ್ಲುತೂರಾಟ ನಡೆಸಿ ಕೊಲೆ ಮಾಡಿದ ಪ್ರಕರಣ ಸಾಬೀತಾಗಿದೆ. ಆ ಬಳಿಕ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಗೋಧ್ರಾ ಘಟನೆಯ ನಂತರ ನಡೆದ ವಿಚಾರಣೆಯಲ್ಲಿ ಸುಮಾರು 9 ವರ್ಷಗಳ ನಂತರ 31 ಜನರನ್ನು ದೋಷಿಗಳೆಂದು ಘೋಷಿಸಲಾಗಿತ್ತು. 2011ರಲ್ಲಿ ಎಸ್‌ಐಟಿ ನ್ಯಾಯಾಲಯ 11 ಅಪರಾಧಿಗಳಿಗೆ ಮರಣದಂಡನೆ ಹಾಗೂ 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಅಕ್ಟೋಬರ್ 2017 ರಲ್ಲಿ, ಗುಜರಾತ್ ಹೈಕೋರ್ಟ್ 11 ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತನೆ ಮಾಡಿತ್ತು ಅದರಲ್ಲಿ ದೋಷಿ ಫಾರೂಕ್ ಕೂಡ ಒಬ್ಬರು.

ಇದಕ್ಕೂ ಮುನ್ನ 2022ರ ಮೇ 13 ರಂದು, ಮತ್ತೊಬ್ಬ ಅಪರಾಧಿ ಅಬ್ದುಲ್ ರಹಮಾನ್ ಧಂತಿಯಾ ಕಂಕಟ್ಟೊ ಜಂಬೂರೊಗೆ 6 ತಿಂಗಳ ಕಾಲ ಜಾಮೀನು ನೀಡಲಾಯಿತು. ರೆಹಮಾನ್ ಅವರ ಪತ್ನಿಗೆ ಟರ್ಮಿನಲ್ ಕ್ಯಾನ್ಸರ್ ಮತ್ತು ಅವರ ಪುತ್ರಿಯರು ಮಾನಸಿಕ ಅಸ್ವಸ್ಥರಾಗಿದ್ದಾರೆ. ನವೆಂಬರ್ 11 ರಂದು, ಅವರ ಜಾಮೀನನ್ನು 2023ರ ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ.

ಇಂದಿನ ವಿಚಾರಣೆಯಲ್ಲಿ ಆಗಿದ್ದೇನು?: ಸರ್ಕಾರದ ಪರ ವಾದ ಮಂಡಿಸಿದ ಎಸ್‌ಜಿ, ವಿಷಯವು ಅಂತಿಮ ವಿಚಾರಣೆಗೆ ಸಿದ್ಧವಾಗಿದೆ. ಈಗ ಕಾಲಮಿತಿಯ ವಿಚಾರಣೆಗೂ ವಿಶೇಷ ಪೀಠಗಳಿವೆ. ಇದನ್ನು ಸಹ ಪಟ್ಟಿ ಮಾಡಬಹುದು. ಇದಕ್ಕೆ ಉತ್ತರಿಸಿದ ಸಿಜೆಐ ಚಂದ್ರಚೂಡ್‌, ಇದನ್ನು ನೀವು ಮಾಡಬಹುದು.  ನಿಮ್ಮ ಜೂನಿಯರ್‌ಗಳಿಗೆ ಹೇಳಿಕೆ ಸಿದ್ಧಪಡಿಸಲು ಹೇಳಿ ಮತ್ತು ಅದನ್ನು ರಿಜಿಸ್ಟ್ರಾರ್ ಪುನೀತ್ ಸೆಹಗಲ್ ಅವರಿಗೆ ಕಳುಹಿಸಲು ಹೇಳಿ. ನಾನು ಖಂಡಿತವಾಗಿಯೂ ಅದನ್ನು ಪರಿಶೀಲಿಸುತ್ತೇನೆ ಎಂದರು.

Godhra Train Burning Case: ಸುಪ್ರೀಂ ವಿಚಾರಣೆ ವೇಳೆ ಅಪರಾಧಿಗಳ ಜಾಮೀನಿಗೆ ಗುಜರಾತ್ ಸರ್ಕಾರ ವಿರೋಧ

Tap to resize

Latest Videos

ಇದಕ್ಕೂ ಮುನ್ನ ಡಿಸೆಂಬರ್ 2ರಂದು 2002ರ ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ವಿಚಾರಣೆ ನಡೆದಿತ್ತು. ಸಿಜೆಐ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರ ಪೀಠವು ಈ ಹಗರಣದಲ್ಲಿ ಯಾವ ಆರೋಪಿಗಳ ಪಾತ್ರವಿದೆ ಎಂದು ಗುಜರಾತ್ ಸರ್ಕಾರದಿಂದ ಮಾಹಿತಿ ಕೇಳಿತ್ತು. ಅಪರಾಧಿ ಫಾರೂಕ್‌ನ ಜಾಮೀನು ಅರ್ಜಿಯೂ ಪೀಠಕ್ಕೆ ತಲುಪಿತ್ತು.

ಗೋಧ್ರಾ ರೈಲಿಗೆ ಬೆಂಕಿ ಕೇಸ್‌: ಮತ್ತೊಬ್ಬನಿಗೆ ಜೀವಾವಧಿ ಶಿಕ್ಷೆ

ಎಸ್‌ಜಿ ವಿಚಾರಣೆಯನ್ನು ಜನವರಿಗೆ ಮುಂದೂಡಲು ಈ ವೇಳೆ ಕೇಳಿದ್ದರು. ಸರ್ಕಾರ ಎರಡನೇ ಬಾರಿಗೆ ಮುಂದೂಡಿಕೆಯನ್ನು ಬಯಸುತ್ತಿರುವುದರಿಂದ ಚಳಿಗಾಲದ ರಜೆಯ ಮೊದಲು ಅದನ್ನು ಆಲಿಸುವಂತೆ ಫಾರೂಕ್ ಅವರ ವಕೀಲರು ಪೀಠವನ್ನು ಕೇಳಿದರು. ಸಾಲಿಸಿಟರ್ ಜನರಲ್ ಕೂಡ, ‘‘ಜಾಮೀನು ಅರ್ಜಿಗಳ ವಿಚಾರಣೆ ಇತ್ಯರ್ಥ ಮಾಡಿದರೆ ಎಲ್ಲವೂ ಸರಿಯಾಗುತ್ತದೆ' ಎಂದು ಹೇಳಿದ್ದರು. ಇದರಿಂದಾಗಿ ಪೀಠ ಜಾಮೀನು ಅರ್ಜಿಗಳನ್ನು ಪರಿಗಣಿಸುವುದಾಗಿ ಪೀಠ ಹೇಳಿತ್ತು.

click me!