ಹಮೀದ್ ಅನ್ಸಾರಿಗೆ ಹಿಂದುತ್ವದ ಅರ್ಥ ತಿಳಿಸಿದ ದೇವೇಂದ್ರ ಫಡ್ನವೀಸ್!

By Suvarna NewsFirst Published Nov 22, 2020, 2:36 PM IST
Highlights

ಬಿಜೆಪಿ ಹಿರಿಯ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ| ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿಕೆ ಬೆನ್ನಲ್ಲೇ ಫಡ್ನವಿಸ್ ಉತ್ತರ

ಮಹಾರಾ‍ಷ್ಟ್ರ(ನ.22): ಬಿಜೆಪಿ ಹಿರಿಯ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಶನಿವಾರದಂದು ಮಾತನಾಡುತ್ತಾ ಹಿಂದುತ್ವ ಅಂದ್ರೆ ಸಹಿಷ್ಣುತೆ ಎಂದಿದ್ದಾರೆ. ಬಿಜೆಪಿ ನಾಯಕ ಫಡ್ನವೀಸ್ ಈ ಹೇಳಿಕೆಯನ್ನು ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ದೇಶದ ವಿಚಾರವಾಗಿ ನೀಡಿದ್ದ ಹೇಳಿಕೆ ಬೆನ್ನಲ್ಲೇ ನೀಡಿದ್ದಾರೆ ಎಂಬುವುದು ಉಲ್ಲೇಖನೀಯ.

ಅನ್ಸಾರಿ ದೇಶದ್ರೋಹದ ತನಿಖೆಗೆ ರಾ ಮಾಜಿ ಅಧಿಕಾರಿಗಳ ಆಗ್ರಹ!

ಹೌದು ಹಮೀದ್ ಅನ್ಸಾರಿ ತಾವು ನೀಡಿದ್ದ ಹೇಳಿಕೆಯಲ್ಲಿ ಕೊರೋನಾ ವೈರಸ್ ಮಹಾಮಾರಿ ಬಾಧಿಸುವುದಕ್ಕೂ ಮೊದಲೇ ಭಾರತದ ಸಮಾಜ ಧಾರ್ಮಿಕ ಮತಾಂಧತೆ ಮತ್ತು ಆಕ್ರಮಣಕಾರಿ ರಾಷ್ಟ್ರೀಯತೆ ಹೀಗೆ ಎರಡು ವಿಚಾರಗಳಿಗೆ ಬಲಿಯಾಗಿದೆ ಎಂದಿದ್ದರು. 

ಅನ್ಸಾರೆಇಯವರ ಈ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಚರ್ಚಾ ಕಾರ್ಯಕ್ರಮದಲ್ಲಿ ಫಡ್ನವೀಸ್‌ಗೆ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಈ ವೇಳೆ ಉತ್ತರಿಸಿದ ಮಾಜಿ ಸಿಎಂ ಹಿಂದುತ್ವ ಯಾವತ್ತೂ ಮತಾಂಧತೆಯಿಂದ ತುಂಬಿಕೊಂಡಿಲ್ಲ. ಅದು ಸಹಿಷ್ಣುತೆಯುಳ್ಳದ್ದಾಗಿದೆ. ಹಿಂದುತ್ವ ಅಂದ್ರೆ ಈ ದೇಶದಲ್ಲಿ ಜೀವನ ಸಾಗಿಸುವ ಪ್ರಾಚೀನ ಶೈಲಿಯಾಗಿದೆ. ಹಿಂದೂಗಳು ಯಾವತ್ತೂ, ಯಾರ ಮೇಲೂ ಅಥವಾ ಯಾವುದಾದರೂ ದೇಶ, ರಾಜ್ಯದ ಮೇಲೆ ದಾಳಿ ನಡೆಸಿಲ್ಲ. ಯಾವತ್ತೂ ಸಹಿಷ್ಣುತೆಯನ್ನೇ ತೋರಿಸಿದ್ದೇವೆ. ಹೀಗಾಗೇ ಭಾರತದಲ್ಲಿ ವಿವಿಧ ಜಾತಿಯ ಹಾಗೂ ಪಂಥಗಳನ್ನು ಪಾಲಿಸುವ ಮಂದಿ ಶಾಂತಿಯಿಂದ ಜೀವಿಸುತ್ತಿದ್ದಾರೆ ಎಂದಿದ್ದಾರೆ. 

ಹಮಾರಿ ಮೇಡಂ ಮಹಾನ್: ಸುಷ್ಮಾ ಹೊಗಳಿದ ಅನ್ಸಾರಿ ತಾಯಿ!

ಇನ್ನು ಕೊರೋನಾ ವೈರಸ್ ಮಹಾಮಾರಿ ನಡುವೆಯೂ ಮಹಾರಾಷ್ಟ್ರದ ಕೆಲ ನಗರಗಳಲ್ಲಿ 9 ರಿಂದ 12 ನೇ ತರಗತಿ ಆರಂಭಿಸುವ ನಿರ್ಧಾರದ ಕುರಿತಾಗಿಯೂ ಫಡ್ನವೀಸ್ ಅನಿಸಿಕೆ ಕೇಳಲಾಗಿದೆ. ಹೀಗಿರುವಾಗ ಮಹಾರಾಷ್ಟ್ರೆದ ವಿಪಕ್ಷ ನಾಯಕ ಈ ವಿಚಾರವಾಗಿ ಗಂಭೀರವಾಗಿ ಯೋಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ಇತರ ರಾಜ್ಯಗಳಲ್ಲಿ ಏನಾಗುತ್ತಿದೆ ಎಂದು ಗಮನಿಸಬೇಕು. ಅನೇಕ ಕಡೆ ಶಾಲೆ ಪುನಾರಂಭಗೊಂಡಲ್ಲಿ ಕೊರೋನಾ ಪ್ರಕರಣಗಳೂ ಹೆಚ್ಚಾಗಿವೆ ಎಂದಿದ್ದಾರೆ. 

click me!