
ನವದೆಹಲಿ(ನ.22): ದೇಶದ ರಾಜಧಾನಿ ದೆಹಲಿಯ ಬಿಡಿ ಮಾರ್ಗದಲ್ಲಿ ಗಂಗಾ, ಯಮುನಾ, ಸರಸ್ವತಿ ಹೆಸರಿನ ಮೂರು ಟವರ್ ನಿರ್ಮಿಸಲಾಗಿದ್ದು, ಇದರಲ್ಲಿ ಸಂಸದರ 76 ನಿವಾಸಗಳನ್ನು ನಿರ್ಮಿಸಲಾಗಿದೆ. ಸಂಸದರ ಈ ನೂತನ ನಿವಾಸವನ್ನು ಪಿಎಂ ಮೋದಿ ನವೆಂಬರ್ 23ರರಂದು ಉದ್ಘಾಟಿಸಲಿದ್ದಾರೆ. ಇದಕ್ಕೂ ಮುನ್ನ ಪಿಎಂ ಮೋದಿ ನಾರ್ಥ್ ಎವೆನ್ಯೂನಲ್ಲಿ ಸಂಸದರಿಗಾಗಿ ನಿರ್ಮಿಸಲಾದ ಡ್ಯೂಪ್ಲೆಕ್ಸ್ ಕಟ್ಟಡವನ್ನು ಉದ್ಘಾಟಿಸಿದ್ದಾರೆ.
76 ಫ್ಲಾಟ್‌ಗಳಿಗೆ 213 ಕೋಟಿ ರೂ.
ಸಂಸದರ ಫ್ಲಾಟ್‌ನಲ್ಲಿ ನಾಲ್ಕು ಬೆಡ್ ರೂಂ ಹೊರತುಪಡಿಸಿ ಪ್ರತ್ಯೇಕವಾದ ಆಫೀಸ್ ಕೂಡಾ ಇದೆ. ಅಲ್ಲದೇ ಸಂಸದರ ಇಬ್ಬರು ಸಿಬ್ಬಂದಿಗೆ ಪ್ರತ್ಯೇಕ ಕ್ವಾಟ್ರಸ್ ಕೂಡಾ ಇದೆ. ಇದರಲ್ಲಿ ಎರಡು ಬಾಲ್ಕನಿ, ಎರಡು ಹಾಲ್, ನಾಲ್ಕು ಟಾಯ್ಲೆಟ್ ಕೂಡಾ ಇದೆ. ಅಲ್ಲದೇ ಪೂಜೆ ನಡೆಸಲು ಪ್ರತ್ಯೇಕ ದೇವರ ಮನೆ ಇದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಈ 76 ನಿವಾಸ ನಿರ್ಮಿಸಲು 213 ಕೋಟಿ ರೂ. ವೆಚ್ಚವಾಗಿದೆ. ಹೀಗಿದ್ದರೂ ಇದಕ್ಕಾಗಿ ಮೀಸಲಿಟ್ಟಟಿದ್ದ 30 ಕೋಟಿ ರೂ. ಮೊತ್ತ ಉಳಿದಿದೆ.
ಕಟ್ಟಡದಲ್ಲಿ ಎಲ್ಲಾ ಸಂಸದರಿಗೂ ಸಿಗಲಿದೆ ಈ ಸೌಲಭ್ಯ:
ಈ ಎಲ್ಲಾ ಮನೆಗಳೂ ಗ್ರೀನ್ ಬಿಲ್ಡಿಂಗ್ ಕಾನ್ಸೆಪ್ಟ್‌ನಂತೆ ನಿರ್ಮಿಸಲಾಗಿದೆ. ಪ್ರತಿ ಟವರ್‌ನಲ್ಲೂ ನಾಲ್ಕು ಲಿಫ್ಟ್ ಇವೆ. ಅಲ್ಲದೇ ಎರಡೂ ಕಡೆ ಮೆಟ್ಟಿಲುಗಳಿವೆ. ಸುರಕ್ಷತೆ ವಿಚಾರದಲ್ಲಿ ಈ ಮೂರೂ ಕಟ್ಟಡಗಳು ಫುಲ್‌ಫ್ರೂಫ್ ಆಗಿವೆ. ಪ್ರತಿಯೊಂದು ಕಡೆ ಸಿಸಿಟಿವಿ ಕ್ಯಾಮೆರಾಗಳಿವೆ. ಬೆಂಕಿ ಅವಘಡದಿಂದ ರಕ್ಷಿಸಿಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆ ಇದೆ. ಪ್ರತಿ ಟವರ್ ಮೇಲೂ ಸೋಲಾರ್ ಪ್ಯಾನೆಲ್ ಇದೆ. ಬೇಸ್ಮೆಂಟ್ ಹಾಗೂ ಗ್ರೌಂಡ್ ಫ್ಳೊಒರ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ. ಪಪ್ರತಿ ಫ್ಲೋರ್‌ನಲ್ಲೂ ಫ್ಯಾನ್, ಎಸಿ, ಸೋಲಾರ್ ಲ್ಯಾಂಪ್ ವ್ಯವಸ್ಥೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ