ಹೆಸರು ಬದಲಾಯಿಸುತ್ತಿದೆ ಫೇರ್ & ಲವ್ಲಿ ಕ್ರೀಮ್; ಕಾರಣವಾಯ್ತು ಅಮೆರಿಕದ ಘಟನೆ!

By Suvarna NewsFirst Published Jun 25, 2020, 6:32 PM IST
Highlights

ಭಾರತ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿ ಫೇರ್ ಅಂಡ್ ಲವ್ಲಿ ಕ್ರೀಮ್ ಜನಪ್ರಿಯ. ಬಹುತೇಕ ಎಲ್ಲರೂ ಒಮ್ಮೆಯಾದರೂ ಈ ಕ್ರೀಮ್ ಬಳಸಿ ಪರೀಕ್ಷೆ ಮಾಡಿದ್ದಾರೆ. ಇದೀಗ ಫೇರ್ ಅಂಡ್ ಲವ್ಲಿ ಕ್ರೀಮ್ ಹೆಸರು ಬದಲಾಯಿಸುತ್ತಿದೆ. ಈ ಹೆಸರು ಬದಲಾಣೆಗೆ ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಘಟನೆ ಕಾರಣ.
 

ನವದೆಹಲಿ(ಜೂ.25): ಹಿಂದುಸ್ಥಾನ್ ಯುನಿಲಿವರ್ ಕಂಪನಿಯ ಫೇರ್ ಅಂಡ್ ಲವ್ಲಿ ಕ್ರೀಮ್ ಬಳಸದವರು ಕಡಿಮೆ. ಇಷ್ಟು ಜನಪ್ರಿಯವಾಗಿರುವ ಫೇರ್ ಅಂಡ್ ಲವ್ಲಿ ಇದೀಗ ಹೆಸರು ಬದಲಾಯಿಸುತ್ತಿದೆ. ಕಳೆದ ಕೆಲದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಫೇರ್ ಅಂಡ್ ಲವ್ಲಿ ಕ್ರೀಮ್ ಹೆಸರಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಹಿಂದುಸ್ಥಾನ್ ಲಿವರ್ ಕಂಪನಿ ಫೇರ್ ಅಂಡ್ ಲವ್ಲಿ ಹೆಸರು ಬದಲಾಯಿಸಲು ನಿರ್ಧರಿಸಿದೆ.

ಕೊನೆಗೂ ತನ್ನ ಸುಂದರ ಗುಂಗುರು ಕೂದಲಿನ ರಹಸ್ಯ ಬಾಯಿಬಿಟ್ಟ ಸಾಯಿ ಪಲ್ಲವಿ

ಅಮೆರಿಕದಲ್ಲಿ ನಡೆದ ಜನಾಂಗೀಯ ನಿಂದನೆ ಇದಕ್ಕೆ ಕಾರಣವಾಗಿದೆ. ಕಪ್ಪು ವರ್ಣೀಯನ ಹತ್ಯೆ ಬಳಿಕ ವಿಶ್ವದೆಲ್ಲೆಡೆ ಹೋರಾಟ ತೀವ್ರಗೊಂಡಿತು. ಬ್ಲಾಕ್ ಲೀವ್ಸ್ ಮ್ಯಾಟರ್ಸ್ (Black Lives Matter) ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ತೀವ್ರಗೊಂಡಿತ್ತು. ವರ್ಣವನ್ನೇ ಕೇಂದ್ರವಾಗಿಟ್ಟು ಕೊಂಡು ಹೊರಬಂದ ಫೇರ್ ಲವ್ಲಿ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು.

 

We’re committed to a skin care portfolio that's inclusive of all skin tones, celebrating the diversity of beauty. That’s why we’re removing the words ‘fairness’, ‘whitening’ & ‘lightening’ from products, and changing the Fair & Lovely brand name.https://t.co/W3tHn6dHqE

— Unilever #StaySafe (@Unilever)

ಹೀರೋಯಿನ್ ತರ ಕಾಣ್ಬೇಕಂದ್ರೆ ಈ ಮೇಕಪ್‌ ಪ್ರಾಡಕ್ಟ್‌ ಮಿಸ್ ಮಾಡದೇ ಇಟ್ಕೊಳ್ಳಿ!

ಸತತ ಟೀಕೆ, ವಿರೋಧಗಳಿಂದ ಹಿಂದುಸ್ಥಾನ್ ಲಿವರ್ ಕಂಪನಿ ಇದೀಗ ಫೇರ್ ಅಂಡ್ ಲವ್ಲಿ ಹೆಸರು ಬದಲಾಯಿಸಲು ನಿರ್ಧರಿಸಿದೆ.  ಈ ಹೆಸರು ಅಪ್ರಸ್ತುತವಾಗಿದೆ. ಎಲ್ಲಾ ವರ್ಣೀಯ ತ್ವಚೆಗೆ ಹೊಂದುವ, ಸೌಂದರ್ಯ ವರ್ಧಕವಾಗಿದೆ. ಹೀಗಾಗಿ ಕೇವಲ ಹೆಸರಿನಿಂದ ಟೀಕೆ ಎದುರಿಸುವ ಬದಲು ಹೊಸ ಹೆಸರು ಇಡುವುದಾಗಿ ಹಿಂದುಸ್ಥಾನ್ ಯುನಿಲಿವರ್ ಮುಖ್ಯಸ್ಥ ಸಂಜೀವ್ ಮುಖ್ಯಸ್ಥ ಹೇಳಿದ್ದಾರೆ.

click me!