ಎಲ್ಲ ಮರೆತು ದಂಗೆಯೆಬ್ಬಿಸಿ ಇದೀಗ ತಂದೆಯ ಆರೋಗ್ಯ ನೆನಪಾಯಿತೇ? ಆರೋಪಿಗೆ ಕೋರ್ಟ್ ಪ್ರಶ್ನೆ!

Suvarna News   | Asianet News
Published : Jun 25, 2020, 05:51 PM IST
ಎಲ್ಲ ಮರೆತು ದಂಗೆಯೆಬ್ಬಿಸಿ ಇದೀಗ ತಂದೆಯ ಆರೋಗ್ಯ ನೆನಪಾಯಿತೇ? ಆರೋಪಿಗೆ ಕೋರ್ಟ್ ಪ್ರಶ್ನೆ!

ಸಾರಾಂಶ

ಕೊರೋನಾ ವೈರಸ್ ವಕ್ಕರಿಸುವ ಮೊದಲು ದೇಶದಲ್ಲಿ ಪೌರತ್ವ ಕಾಯ್ದೆ ವಿರುದ್ಧ ದಂಗೆ ತೀವ್ರವಾಗಿತ್ತು. ದೆಹಲಿಯಲ್ಲಿ ನಡೆದ ದಂಗೆಯಲ್ಲಿ ಶಾರುಖ್ ಫಠಾಣ್ ಪಿಸ್ತೂಲ್ ಹಿಡಿದು ಪೊಲೀಸರತ್ತ ಗಂಡಿ ಹಾರಿಸಿದ ಅರೆಸ್ಟ್ ಆಗಿರುವ ಆರೋಪಿ ಶಾರುಖ್ ಪಠಾಣ್ ಇದೀಗ  ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಕೋರ್ಟ್ ಈತನಿಗೆ ಜಾಮೀನು ನೀಡಲು ನಿರಾಕರಿಸಿದೆ. ಇಷ್ಟೇ ಅಲ್ಲ ಈತನ ಮನವಿಗೆ ಖಡಕ್ ತಿರುಗೇಟು ನೀಡಿದೆ.

ದೆಹಲಿ(ಜೂ.25): ಪೌರತ್ವ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಉದ್ದೇಶ ಪೂರ್ವಕವಾಗಿ ನಡೆದ ಹಿಂಸಾಚಾರ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ದಂಗೆಯೆಬ್ಬಿಸಿದ, ದಂಗೆಗೆ ಪ್ರಚೋದನೆ ನೀಡಿದ, ಪಾಲ್ಗೊಂಡ ಹಲವರು ಪೊಲೀಸರ ಅತಿಥಿಯಾಗಿದ್ದಾರೆ. ಇದರಲ್ಲಿ ಪಿಸ್ತೂಲ್ ಹಿಡಿದು ದಂಗೆಗೆ ಮತ್ತಷ್ಟು ತುಪ್ಪ ಸುರಿದ ಆರೋಪಿ ಶಾರುಖ್ ಪಠಾಣ್ ತನಗೆ ಜಾಮೀನು ನೀಡುವಂತೆ ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದ. ಆದರೆ ಕೋರ್ಟ್ ಈ ಈತನ ಮನವಿಯನ್ನು ತಿರಸ್ಕರಿಸಿದೆ.

ದೆಹಲಿ ಹಿಂಸಾಚಾರ; 'ಜೈಲಿನಲ್ಲೇ ಹೆರಿಗೆ ಮಾಡಿಸ್ತೆವೆ, ಇದೇನು ವಿಶೇಷ ಪ್ರಕರಣ ಅಲ್ಲ'...

ದೆಹಲಿ ದಂಗೆಯ ಹಲವು ಆರೋಪಿಗಳು ಜೈಲಿನಿಂದ ಹೊರಬರಲು ಹಲವು ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಇದೀಗ ಪಿಸ್ತೂಲ್ ಶೂರ ಶಾರುಖ್ ಪಠಾಣ್ ತನ್ನ ವಕೀಲರ ಮೂಲಕ ಜಾಮೀನು ನೀಡುವಂತೆ ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದ.  ಶಾರುಖ್ ಪಠಾಣ್ 76 ವರ್ಷದ ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅವರನ್ನು ನೋಡಿಕೊಳ್ಳಲು, ತಂದೆಯ ಆರೈಕೆ ಮಾಡಲು ಯಾರೂ ಇಲ್ಲ. ಹೀಗಾಗಿ ಮಾನವೀಯತೆ ಆಧಾರದಲ್ಲಿ ಜಾಮೀನು ನೀಡಬೇಕು ಎಂದು ಶಾರುಖ್ ಪಠಾಣ್ ವಕೀಲರು ಮನವಿ ಮಾಡಿದ್ದಾರೆ.

ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯಾಗೆ ಜಾಮೀನು.

ಜಾಮಿಯಾ ವಿದ್ಯಾರ್ಥಿ ಸಫೂರ ಜರ್ಗರ್‌ಗೆ ಮಾನವೀಯತೆ ಆಧಾರದಲ್ಲಿ ಕೋರ್ಟ್ ಜಾಮೀನು ನೀಡಿದೆ. ಈ ಪ್ರಕರಣವನ್ನು ಉಲ್ಲೇಖಿಸಿ, ಶಾರುಖ್ ಪಠಾಣ್ ಜಾಮೀನಿಗೆ ಮನವಿ ಮಾಡಿದ್ದಾನೆ. ಮನವಿ ಆಲಿಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್, ಜಾಮೀನು ನೀಡಲು ನಿರಾಕರಿಸಿದ್ದಾರೆ. ದೆಹಲಿ ದಂಗೆಯೆಬ್ಬಿಸಿದ ಸಂದರ್ಭದಲ್ಲಿ ತಂದೆ ತಾಯಿ, ಬಂಧು ಬಳಕ, ಇತರರ ಜೀವನ ಯಾವುದರ ಕುರಿತು ಚಿಂತಿಸಿದ ನಿಮಗ, ಈಗ ತಂದೆಯ ಆರೋಗ್ಯ ನೆನಪಾಯಿತೇ ಎಂದು ಪ್ರಶ್ನಿಸಿದ್ದಾರೆ.

ದಂಗೆ ಮೂಲಕ ಹೀರೋ ಆಗಲು ಹೊರಟವರು ಕಾನೂನು ಎದುರಿಸಲೇಬೇಕು. ತಪ್ಪು ಮಾಡುವಾಗ ಪೋಷಕರ ಮೇಲೆ ಇಲ್ಲದ ಕಾಳಜಿ ಈಗ ಯಾಕೆ? ಎಂದು ಕೋರ್ಟ್ ಪ್ರಶ್ನಿಸಿದೆ. ಈ ಮೂಲಕ ಶಾರುಖ್ ಪಠಾಣ್ ಜಾಮೀನು ಅರ್ಜಿಯನ್ನು ತಳ್ಳಿ ಹಾಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ