ಹಿಂದೂಗಳ ನಿರಾಶ್ರಿತ ಕೇಂದ್ರ ಬಂಧನ ಕೇಂದ್ರವಾಗಿ ಬದಲು! ಮಮತಾ ಸರ್ಕಾರದಿಂದ ಅಮಾನವೀಯ ವರ್ತನೆ !

Published : Apr 20, 2025, 05:54 AM ISTUpdated : Apr 20, 2025, 07:17 AM IST
ಹಿಂದೂಗಳ ನಿರಾಶ್ರಿತ ಕೇಂದ್ರ ಬಂಧನ ಕೇಂದ್ರವಾಗಿ ಬದಲು! ಮಮತಾ ಸರ್ಕಾರದಿಂದ ಅಮಾನವೀಯ ವರ್ತನೆ !

ಸಾರಾಂಶ

ಮುರ್ಷಿದಾಬಾದ್‌ನಲ್ಲಿ ನಡೆದ ವಕ್ಫ್‌ ತಿದ್ದುಪಡಿ ವಿಧೇಯಕ ವಿರೋಧಿ ಗಲಭೆಯಿಂದಾಗಿ ಮನೆ-ಮಠ ತೊರೆದು ನೆರೆಯ ಮಾಲ್ಡಾದ ನಿರಾಶ್ರಿತರ ಕೇಂದ್ರದಲ್ಲಿ ಉಳಿದುಕೊಂಡಿರುವ ಹಿಂದೂಗಳನ್ನು ಪಶ್ಚಿಮ ಬಂಗಾಳ ಸರ್ಕಾರ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ. ನಿರಾಶ್ರಿತ ಕೇಂದ್ರವನ್ನು ಬಂಧನ ಕೇಂದ್ರವನ್ನಾಗಿ ಪರಿವರ್ತಿಸಿದೆ. ನಿರಾಶ್ರಿತ ಕೇಂದ್ರದಲ್ಲಿರುವವರಿಗೆ ಹೊರಗಿನವರನ್ನು ಭೇಟಿಯಾಗಲೂ ಅವಕಾಶ ನೀಡುತ್ತಿಲ್ಲ, ಅವರ ಪರಿಸ್ಥಿತಿ ನೋಡಲು ಬಿಡುತ್ತಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.

ಕೋಲ್ಕತಾ (ಏ.20): ಮುರ್ಷಿದಾಬಾದ್‌ನಲ್ಲಿ ನಡೆದ ವಕ್ಫ್‌ ತಿದ್ದುಪಡಿ ವಿಧೇಯಕ ವಿರೋಧಿ ಗಲಭೆಯಿಂದಾಗಿ ಮನೆ-ಮಠ ತೊರೆದು ನೆರೆಯ ಮಾಲ್ಡಾದ ನಿರಾಶ್ರಿತರ ಕೇಂದ್ರದಲ್ಲಿ ಉಳಿದುಕೊಂಡಿರುವ ಹಿಂದೂಗಳನ್ನು ಪಶ್ಚಿಮ ಬಂಗಾಳ ಸರ್ಕಾರ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ. ನಿರಾಶ್ರಿತ ಕೇಂದ್ರವನ್ನು ಬಂಧನ ಕೇಂದ್ರವನ್ನಾಗಿ ಪರಿವರ್ತಿಸಿದೆ. ನಿರಾಶ್ರಿತ ಕೇಂದ್ರದಲ್ಲಿರುವವರಿಗೆ ಹೊರಗಿನವರನ್ನು ಭೇಟಿಯಾಗಲೂ ಅವಕಾಶ ನೀಡುತ್ತಿಲ್ಲ, ಅವರ ಪರಿಸ್ಥಿತಿ ನೋಡಲು ಬಿಡುತ್ತಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಸುವೇಂದು ಅಧಿಕಾರಿ ಅವರು, ಧುಲಿಯಾನ್‌ ಮತ್ತು ಷಂಷೇರ್‌ಗಂಜ್‌ನಲ್ಲಿ ನಡೆದ ಗಲಭೆಯಿಂದಾಗಿ ಮನೆ-ಮಠ ತೊರೆದು ಮಹಿಳೆಯರು ಮತ್ತು ಮಕ್ಕಳು ಬೈಶನಾಬ್‌ನಗರ್‌ನ ಹೈಸ್ಕೂಲ್‌ನಲ್ಲಿ ಆಶ್ರಯ ಪಡೆದಿದ್ದಾರೆ. ಇವರ ಜತೆಗೆ ರಾಜ್ಯ ಸರ್ಕಾರ ಅಮಾನವೀಯವಾಗಿ ವರ್ತಿಸುತ್ತಿದೆ. ಮಾಧ್ಯಮ, ಸ್ವಯಂಸೇವಾ ಸಂಸ್ಥೆಗಳ ಜತೆ ಮಾತನಾಡದಂತೆ ನೋಡಿಕೊಳ್ಳುತ್ತಿದೆ. ಅವರಿಗೆ ಕಳಪೆ ಆಹಾರ ನೀಡಲಾಗುತ್ತಿದೆ. ಸ್ಥಳೀಯ ಎನ್‌ಜಿಒಗಳು ನೀಡಿದ ಆಹಾರವಸ್ತುಗಳನ್ನು ವಿತರಿಸಲೂ ಪೊಲೀಸರು ಅಡ್ಡಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಹಿಂದೂ-ಮುಸ್ಲಿಂ ಸಂಘರ್ಷ ನಡೆಯಲು ಬಿಡೋಲ್ಲ: ಮುರ್ಷಿದಾಬಾದ್ ಹಿಂಸಾಚಾರಕ್ಕೆ ಬಿಜೆಪಿ ಕಾರಣ ಎಂದ ಮಮತಾ!

ಮುರ್ಷಿದಾಬಾದ್‌ ಹಿಂಸಾಚಾರದಿಂದ ಹಿಂದೂಗಳು ಗಂಭೀರ ಸ್ಥಿತಿಯಲ್ಲಿ ನಿರಾಶ್ರಿತರಾಗಿದ್ದಾರೆ,  ಗಲಭೆಗಳು, ಆಸ್ತಿಪಾಸ್ತಿ ನಾಶ ಮತ್ತು ಜೀವನಕ್ಕೆ ಕಾಡುತ್ತಿರುವ ಭೀತಿಯಿಂದಾಗಿ ಅನೇಕ ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತಾಗಿದೆ.ಆದರೆ ಈ ನಿರಾಶ್ರಿತ ಕೇಂದ್ರವೇ ಈಗ ಜೈಲಿನಂತಾಗಿದೆ. ಸರಿಯಾದ ಊಟ ವಸತಿ ಸೌಲಭ್ಯವಿಲ್ಲದೆ ಮಕ್ಕಳು ವಯಸ್ಕರು ನರಳಾಡುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ