'ಕೈ' ಮೀರಿದ ಪ್ರತಿಭಟನೆ; ಐವರು ಕಾಂಗ್ರೆಸ್ ಶಾಸಕರು ವಿಧಾನಸಭೆಯಿಂದ ಅಮಾನತು!

By Suvarna NewsFirst Published Feb 26, 2021, 8:28 PM IST
Highlights

ಗರ್ವನರ್ ಭಾಷಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್‌ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯಪಾಲರನ್ನು ತಡೆದ ಕಾಂಗ್ರೆಸ್ ಶಾಸಕರನ್ನು ಅಮಾನತು  ಮಾಡಲಾಗಿದೆ.

ಹಿಮಾಚಲ ಪ್ರದೇಶ(ಫೆ.26):  ವಿರೋಧ ಪಕ್ಷದ ನಾಯಕ ಸೇರಿದಂತೆ ಐವರು ಕಾಂಗ್ರೆಸ್ ಶಾಸಕರನ್ನು ರಾಜ್ಯಪಾಲರು ವಿಧಾನಸಭೆಯಿಂದ ಅಮಾನತು ಮಾಡಿದ್ದಾರೆ. ಈ ಘಟನೆ ನಡೆದಿರುವುದು ಹಿಮಾಚಲ ಪ್ರದೇಶದಲ್ಲಿ. ರಾಜ್ಯಪಾಲ ಬಂಡಾರು ದತ್ತಾತ್ರೆಯ ಅವರ ಭಾಷಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ, ರಾಜ್ಯಪಾಲರನ್ನು ಸದನದ ಆವರಣದಿಂದ ಹೊರಹೋಗದಂತೆ ತಡೆದಿದ್ದಾರೆ. ಈ ನಡೆಗೆ ಇದೀಗ ಬೆಲೆ ತೆತ್ತಿದ್ದಾರೆ.

ಡಿಕೆಶಿ ನಿರ್ಧಾರಕ್ಕೆ ಸಿದ್ದು ಬಣ ಸಿಡಿಮಿಡಿ: ಸಿದ್ದು ಕೇಳದೆ ನಿರ್ಧಾರ, ಕ್ರಮಕ್ಕೆ ಪಟ್ಟು!.

ಬಂಡಾರು ದತ್ತಾತ್ರೆಯ ಭಾಷಣ ಮುಗಿಸಿ ಸದನದಿಂದ ಹೊರಹೋಗಲು ಮುಂದಾದಾಗ, ಕಾಂಗ್ರೆಸ್ ತೀವ್ರ ಪ್ರತಿಭಟನೆ ನಡೆಸಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ವಿರೋಧ ಪಕ್ಷ ನಾಯಕ ಮುಕೇಶ್ ಅಗ್ನಿಹೋತ್ರಿ ಸೇರಿದಂತೆ ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ಅಡ್ಡಿಪಡಿಸಿದ್ದಾರೆ. 

ದತ್ತಾತ್ರೆಯ ಅವರ ವಾಹನ ತೆರಳಲು ಕಾಂಗ್ರೆಸ್ ನಾಯಕರು ಅಡ್ಡಿಪಡಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯಪಾಲರು ಮುಕೇಶ್ ಅಗ್ನಿಹೋತ್ರಿ ಸೇರಿದಂತೆ ಐವರು ಕಾಂಗ್ರೆಸ್ ಶಾಸಕರನ್ನು ಅಮಾನತು ಮಾಡಿದ್ದಾರೆ.

ಮುಕೇಶ್ ಅಗ್ನಿಹೋತ್ರಿ ಜೊತೆಗೆ ಇನ್ನು ನಾಲ್ವರು ಕಾಂಗ್ರೆಸ್ ಶಾಸಕರಾದ ಸುಂದರ್ ಸಿಂಗ್ ಠಾಕೂರ್, ಸತ್ಪಾಲ್ ಸಿಂಗ್ ರೈಜಾಡಾ,  ವಿನಯ್ ಕುಮಾರ್ ಮತ್ತು  ಹರ್ಷವರ್ಧನ್ ಚೌಹಾನ್ ಸೇರಿದ್ದಾರೆ.

click me!