
ಶಿಮ್ಲಾ: ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯಲ್ಲಿ ಬಸ್ ಮೇಲೆ ಗುಡ್ಡ ಕುಸಿದು 18 ಜನರು ಮೃತಪಟ್ಟಿರುವ ಆಘಾತಕಾರಿ ಘಟನೆ ಮಂಗಳವಾರ ನಡೆದಿದೆ. ಸಾವಿನ ಸಂಖ್ಯೆ ಏರುವ ಭೀತಿಯಿದೆ. 35 ಜನರಿದ್ದ ಬಸ್ ಮರೋ ತನ್‌ನಿಂದ ಕಲೌಲ್‌ವರೆಗೆ ಪ್ರಯಾಣಿಸುತ್ತಿತ್ತು. ಜಿಲ್ಲೆಯ ಬಾಲ್ಲು ಬ್ರಿಜ್ ಬಳಿ ಬರುವಾಗಿ ದಿಢೀರನೆ ಗುಡ್ಡ ಕುಸಿದು, ಬಸ್ಸಿನ ಮೇಲೆ ಕಲ್ಲು, ಮಣ್ಣು ಬಿದ್ದಿದೆ.
ಅದರ ರಭಸಕ್ಕೆ ಬಸ್ಸು ಸಂಪೂರ್ಣವಾಗಿ ಮಣ್ಣಿನಲ್ಲಿ ಹೂತುಹೋಗಿದೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು ವಿಪತ್ತು ನಿರ್ವಹಣಾ ಪಡೆಗಳು ಧಾವಿಸಿ, ರಾತ್ರಿಯಾದರೂ ಲೈಟ್ ಹಾಕಿಕೊಂಡ ರಕ್ಷಣಾ ಕಾರ್ಯ ಆರಂಭಿಸಿವೆ. ಒಂದು ಮಗುವನ್ನು ರಕ್ಷಿಸಲಾಗಿದ್ದು, ಬಸ್ಸಿನಲ್ಲಿ ಇದ್ದ ಇನ್ನೂ ಸುಮಾರು 15 ಜನರ ರಕ್ಷಣಾ ಕಾರ್ಯ ನಡೆಯುತ್ತಿದೆ. ಇಡೀ ಗುಡ್ಡವೇ ಕುಸಿದು ಬಸ್ಸಿನ ಮೇಲೆ ಬಿದ್ದಿದ್ದರಿಂದ ಅನಾಹುತ ತೀವ್ರವಾಗಿದೆ. ರಕ್ಷಣಾ ಕಾರಾರಯಚರಣೆಗೆ ಕೂಡ ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೋದಿ, ಮುರ್ಮು ಆಘಾತ: ರಾಷ್ಟ್ರಪತಿ ದ್ರೌಪದಿ ಮುರ್ಮು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಹಿಮಾಚಲ ಸಿಎಂ ಸುಖು ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ತುರ್ತು ರಕ್ಷಣಾ ಕಾರ್ಯಕ್ಕೆ ಸೂಚಿಸಿದ್ದಾರೆ. ಸುಖು ಅವರು ರಕ್ಷಣಾ ಕಾರ್ಯದ ಖುದ್ದು ಉಸ್ತುವಾರಿ ಹೊತ್ತು ಎಲ್ಲದರ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ