ದೆಹಲಿ ಜೈಪುರದ ನಡುವೆ ದೇಶದ ಮೊದಲ ಎಲೆಕ್ಟ್ರಿಕ್‌ ಹೈವೇ: ಏನಿದು ಎಲೆಕ್ಟ್ರಿಕ್‌ ಹೈವೇ?

By Kannadaprabha NewsFirst Published Sep 14, 2023, 9:46 AM IST
Highlights

ದೇಶದಲ್ಲೇ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್‌ ಹೈವೇ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ದೆಹಲಿ ಮತ್ತು ಜೈಪುರದ ನಡುವೆ ಎಲೆಕ್ಟ್ರಿಕ್‌ ಹೈವೇ ನಿರ್ಮಾಣ ಮಾಡುವುದು ನನ್ನ ಕನಸು ಎಂದು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ನವದೆಹಲಿ: ದೇಶದಲ್ಲೇ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್‌ ಹೈವೇ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ದೆಹಲಿ ಮತ್ತು ಜೈಪುರದ ನಡುವೆ ಎಲೆಕ್ಟ್ರಿಕ್‌ ಹೈವೇ ನಿರ್ಮಾಣ ಮಾಡುವುದು ನನ್ನ ಕನಸು ಎಂದು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಬುಧವಾರ ಹೇಳಿದ್ದಾರೆ.

ಆಟೋಮೋಟಿವ್‌ ಬಿಡಿಭಾಗಗಳ ಉತ್ಪಾದಕರ (Automotive Parts Manufacturers Association) ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ನಿತಿನ್‌ ಗಡ್ಕರಿ (Nitin Gadkari), ‘ಎಲೆಕ್ಟ್ರಿಕ್‌ ಹೈವೇ ಆರ್ಥಿಕವಾಗಿ ಅಭಿವೃದ್ಧಿಯನ್ನು ಉಂಟುಮಾಡಲಿದೆ. ನಾನು ಇಂಧನ ಸಚಿವಾಲಯದ (Ministry of Energy) ಜೊತೆ ಚರ್ಚೆ ನಡೆಸಿದ್ದೇನೆ. ಯುನಿಟ್‌ 3.5 ರು.ನಂತೆ ವಿದ್ಯುತ್‌ ಒದಗಿಸಲು ಅವರು ಒಪ್ಪಿಗೆ ಸೂಚಿಸಿದ್ದಾರೆ. ವಾಣಿಜ್ಯಾತ್ಮಕವಾಗಿ ವಿದ್ಯುತ್‌ ಬೆಲೆ ಯುನಿಟ್‌ಗೆ 11 ರು. ಇದೆ. ಸರ್ಕಾರದ ಸಂಸ್ಥೆಗೆ ಕಡಿಮೆ ದರದಲ್ಲಿ ವಿದ್ಯುತ್‌ ಒದಗಿಸುವುದು ಇಂಧನ ಸಚಿವಾಲಯಕ್ಕೆ ಕಷ್ಟವಾಗುವುದಿಲ್ಲ. ಈ ಹೈವೇಗಳಲ್ಲಿ ವಿದ್ಯುತ್‌ ಕೇಬಲ್‌ಗಳನ್ನು ಅಳವಡಿಸುವುದಕ್ಕೆ ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಲಾಗುವುದು. ಇದು ಹೆಚ್ಚಿನ ಹೂಡಿಕೆಯನ್ನು ಸೆಳೆಯುತ್ತದೆ. ಪ್ರಾಯೋಗಿಕವಾಗಿ ನಾಗಪುರದಲ್ಲಿ ನಾವು ಎಲೆಕ್ಟ್ರಿಕ್‌ ಹೈವೇ (highways) ನಿರ್ಮಾಣ ಮಾಡಲಿದ್ದೇವೆ ಎಂದು ಅವರು ಹೇಳಿದರು.

ಲಘು ವಾಹನ ಪರವಾನಗಿ ಇದ್ದರೆ ಸರಕು ವಾಹನ ಚಾಲನೆ ಸಾಧ್ಯವೇ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಪ್ರಶ್ನೆ

ಏನಿದು ಎಲೆಕ್ಟ್ರಿಕ್‌ ಹೈವೇ?:

ರೈಲು ಮಾರ್ಗದಲ್ಲಿ ಮೇಲ್ಭಾಗದಲ್ಲಿ ವಿದ್ಯುತ್‌ ತಂತಿಗಳನ್ನು (Electric wires) ಅಳವಡಿಸಿರುವಂತೆ ಈ ಹೈವೇ ಮೇಲ್ಭಾಗದಲ್ಲೂ ವಿದ್ಯುತ್‌ ತಂತಿಗಳನ್ನು ಅಳವಡಿಸಲಾಗುತ್ತದೆ. ಈ ಮಾರ್ಗದಲ್ಲಿ ಸಾಗುವ ವಾಹನಗಳು ಇದರಿಂದ ವಿದ್ಯುತ್‌ ಪಡೆದುಕೊಳ್ಳುವ ಮೂಲಕ ತಮ್ಮ ಸಂಚಾರವನ್ನು ನಡೆಸಬಹುದಾಗಿದೆ. ಈ ವ್ಯವಸ್ಥೆ ಈಗಾಗಲೇ ಸ್ವೀಡನ್‌ (Sweden) ಮತ್ತು ನಾರ್ವೆಗಳಲ್ಲಿ (Norway) ಜಾರಿಯಲ್ಲಿದೆ.

ಕಾರುಗಳಿಗೆ 6 ಏರ್‌ಬ್ಯಾಗ್‌ ನಿಮಯ ಕಡ್ಡಾಯವಿಲ್ಲ

ಕಾರುಗಳಲ್ಲಿ 6 ಏರ್‌ಬ್ಯಾಗ್‌ಗಳು ಇರಲೇಬೇಕೆಂಬ ನಿಯಮವನ್ನು ಸರ್ಕಾರವು ಕಡ್ಡಾಯಗೊಳಿಸುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ (Union Road Transport and Highways Minister) ನಿತಿನ್ ಗಡ್ಕರಿ ಹೇಳಿದ್ದಾರೆ. ಬುಧವಾರ ಇಲ್ಲಿ ನಡೆದ ಎಸಿಎಂಇ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ ಕಾರುಗಳಿಗೆ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲು ಸರ್ಕಾರ ಬಯಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಾಗದ ರಹಿತ ಕೋರ್ಟ್‌ಗೆ 7210 ಕೋಟಿ ರೂ : ಇ-ಕೋರ್ಟ್ಸ್ 3ನೇ ಹಂತದ ಯೋಜನೆಗೆ ಅನುಮೋದನೆ

ಪ್ರಯಾಣಿಕರ ಸುರಕ್ಷತಾ ಹಿತದೃಷ್ಟಿಯಿಂದ 2023ರ ಅಕ್ಟೋಬರ್‌ನಿಂದ ಎಲ್ಲಾ ಪ್ರಯಾಣಿಕ ಕಾರುಗಳಲ್ಲಿ (passenger safety) ಕಡ್ಡಾಯವಾಗಿ 6 ಗೇರ್‌ಬ್ಯಾಗ್‌ಗಳನ್ನು ಅಳವಡಿಸಲೇಬೇಕೆಂಬ ನಿಯಮ ಜಾರಿ ಮಾಡುವುದಾಗಿ ಸರ್ಕಾರ ಕಳೆದ ವರ್ಷ ಪ್ರಸ್ತಾಪಿಸಿತ್ತು. ಹೀಗಾಗಿ ಅಕ್ಟೋಬರ್‌ 1ರಿಂದ ಈ ನಿಯಮ ಜಾರಿಯಾಗಲಿದೆ ಎನ್ನಲಾಗಿತ್ತು. ಯಾವುದೇ ಅಪಘಾತ ಅಥವಾ ಘರ್ಷಣೆ ಸಂಭವಿಸಿದ ಸಂದರ್ಭದಲ್ಲಿ ಕಾರುಗಳಲ್ಲಿ ಅಳವಡಿಸಲಾದ ಏರ್‌ಬ್ಯಾಗ್‌ಗಳು (Airbags) ಪ್ರಯಾಣಿಕನ ದೇಹದ ಸುತ್ತ ತೆರೆದುಕೊಳ್ಳುತ್ತದೆ. ಇದು ವಾಹನ ಮತ್ತು ಮಾನವನ ನಡುವೆ ದಪ್ಪನಾದ ಗಾಳಿ ತುಂಬಿದ ಬಲೂನಿನಂತೆ ತೆರೆದುಕೊಂಡು ವಾಹನಕ್ಕೆ ದೇಹ ಬಡಿದು ಗಂಭೀರ ಗಾಯಗಳಾಗುವುದನ್ನು ತಪ್ಪಿಸುತ್ತದೆ.

click me!