* ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಗ್ರಾಮದಲ್ಲಿ ಮತ್ತೆ ನೂಕುನುಗ್ಗಲು
* ಆನಂದಯ್ಯನ ಕೊರೋನಾ ಔಷಧಕ್ಕೆ ಮತ್ತೆ ಮುಗಿಬಿದ್ದ ಜನ
* ನೂಕುನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ಔಷಧ ವಿತರಣೆಗೆ ತಡೆ
ನೆಲ್ಲೂರು(ಜೂ.08): ಕೊರೋನಾಕ್ಕೆ ರಾಮಬಾಣ ಎಂದು ಹೇಳಲಾಗುತ್ತಿರುವ ಆನಂದಯ್ಯನ ‘ಹಳ್ಳಿ ಮದ್ದು’ ಪಡೆಯಲು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಗ್ರಾಮದಲ್ಲಿ ಮತ್ತೆ ನೂಕುನುಗ್ಗಲು ಆರಂಭವಾಗಿದೆ. ಸೋಮವಾರದಿಂದ ಔಷಧ ವಿತರಣೆಗೆ ನಿರ್ಧಾರ ಮಾಡಲಾಗಿತ್ತಾದರೂ, ಭಾನುವಾರವೇ ಭಾರೀ ಪ್ರಮಾಣದಲ್ಲಿ ಜನರು ಹಳ್ಳಿಗೆ ಆಗಮಿಸಿದ್ದರು.
ನೆರೆಯ ಜಿಲ್ಲೆಗಳಿಂದ ಭಾರೀ ಪ್ರಮಾಣದಲ್ಲಿ ಆಗಮಿಸಿದ್ದ ಜನರು ಆನಂದಯ್ಯನ ಸೋದರ ನಾಗರಾಜು ಮೂಲಕ ಔಷಧಿ ಪಡೆದುಕೊಂಡಿದ್ದಾರೆ. ಆದರೆ ಈ ವೇಳೆ ಭಾರೀ ನೂಕುನುಗ್ಗಲು ಉಂಟಾಗಿ ವಿಷಯ ಪೊಲೀಸರ ಕಿವಿಗೆ ತಲುಪಿದ್ದು, ಅವರು ಸ್ಥಳಕ್ಕೆ ಧಾವಿಸಿ ಜನರನ್ನು ಚದುರಿಸಿದ್ದಾರೆ.
ಈ ಮುನ್ನ ಮೇ 21ರಂದು ಆನಂದಯ್ಯನ ಹಳ್ಳಿ ಮದ್ದು ಪಡೆಯಲು ಜನರು ಕಷ್ಣಪಟ್ಟಣಂ ಗ್ರಾಮಕ್ಕೆ ಮುಗಿಬಿದ್ದಿದ್ದು, ಭಾರೀ ಸುದ್ದಿಯಾಗಿತ್ತು.ಆ ಬಳಿಕ ಔಷಧಿಯನ್ನು ಪರೀಕ್ಷಿಸಿದ್ದ ತಜ್ಞರ ಸಮಿತಿ ಅದರಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ಕೊರೋನಾ ರೋಗಿಗಳ ಚಿಕಿತ್ಸೆಗೆ ಔಷಧವನ್ನು ಬಳಕೆ ಮಾಡಬಹುದು ಎಂದು ತಿಳಿಸಿತ್ತು. ಆದರೆ, ಜನರಿಗೆ ಔಷಧ ವಿತರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.