ವಿದೇಶಕ್ಕೆ ತೆರಳುವವರಿಗೆ 2ನೇ ಡೋಸ್‌ ಲಸಿಕೆಯ ಅಂತರ 4 ವಾರಕ್ಕೆ ಇಳಿ​ಕೆ!

By Suvarna News  |  First Published Jun 8, 2021, 9:07 AM IST

* ವಿದೇಶಕ್ಕೆ ತೆರಳುವವರಿಗೆ 2ನೇ ಡೋಸ್‌ ಲಸಿಕೆ ಪಡೆಯುವ ಅವಧಿ ಇಳಿಕೆ

* 2ನೇ ಡೋಸ್‌ ಲಸಿಕೆಯ ಅಂತರ 4 ವಾರಕ್ಕೆ ಇಳಿ​ಕೆ

* ತುರ್ತಾಗಿ ವಿದೇಶಕ್ಕೆ ತೆರ​ಳು​ವ ಪ್ರಯಾ​ಣಿಕ​ರನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡು ಲಸಿಕೆ ಮಾರ್ಗ​ಸೂ​ಚಿ​ ಪ್ರಕಟಿಸಿದ ಸರ್ಕಾ​ರ


ನವ​ದೆ​ಹ​ಲಿ(ಜೂ.08):ಉದ್ಯೋಗ ಮತ್ತು ಶೈಕ್ಷ​ಣಿಕ ಉದ್ದೇ​ಶ​ಕ್ಕಾಗಿ ವಿದೇ​ಶಕ್ಕೆ ತೆರ​ಳು​ವ​ವರು ಹಾಗೂ ಟೋಕಿ​ಯೋ ಒಲಿಂಪಿಕ್ಸ್‌ಗೆ ತೆರ​ಳುವ ಕ್ರೀಡಾ​ಪ​ಟು​ಗ​ಳಿಗೆ 2ನೇ ಡೋಸ್‌ ಲಸಿಕೆಯ ಅಂತ​ರ​ವನ್ನು ಕೇಂದ್ರ ಸರ್ಕಾರ 12ರಿಂದ 4​ವಾ​ರ​ಗ​ಳಿಗೆ ಇಳಿಕೆ ಮಾಡಿದೆ.

ಪ್ರಸ್ತುತ 2ನೇ ಡೋಸ್‌ ಲಸಿಕೆ ಪಡೆ​ಯಲು ಕನಿಷ್ಠ 84 ದಿನ​ಗಳ ಅಂತ​ರ​ವನ್ನು ನಿಗದಿ ಮಾಡ​ಲಾ​ಗಿದೆ.

Tap to resize

Latest Videos

ಆದರೆ, ತುರ್ತಾಗಿ ವಿದೇಶಕ್ಕೆ ತೆರ​ಳು​ವ ಪ್ರಯಾ​ಣಿಕ​ರನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡು ಸರ್ಕಾ​ರ ಲಸಿಕೆ ಮಾರ್ಗ​ಸೂ​ಚಿ​ಯನ್ನು ಪ್ರಕ​ಟಿ​ಸಿದೆ. ಇದ​ರಂತೆ ಕೋ-ವಿನ್‌ ಪ್ರಮಾ​ಣ​ಪ​ತ್ರ​ವನ್ನು ಕ್ರೀಡಾ​ಪ​ಟು​ಗಳು ಮತ್ತು ವಿದ್ಯಾ​ರ್ಥಿ​ಗಳ ಪಾಸ್‌​ಪೋ​ರ್ಟ್‌ಗೆ ಲಿಂಕ್‌ ಮಾಡ​ಲಾ​ಗು​ತ್ತದೆ. ಲಸಿ​ಕೆ ಪಡೆ​ಯಲು ಒದ​ಗಿ​ಸಿ​ದ ಗುರು​ತಿನ ಚೀಟಿ ಹಾಗೂ ಪಾಸ್‌​ಪೋರ್ಟ್‌ ಮಾಹಿ​ತಿ​ಯನ್ನು ಪ್ರಮಾ​ಣ​ಪ​ತ್ರ​ದಲ್ಲಿ ನಮೂ​ದಿ​ಸ​ಲಾ​ಗು​ತ್ತದೆ.

click me!