* 5 ರಾಜ್ಯಗಳಲ್ಲಿ ಅನ್‌ಲಾಕ್ ಆರಂಭ
* ದಿಲ್ಲಿ, ಮಹಾರಾಷ್ಟ್ರ, ಉ.ಪ್ರ., ಗುಜರಾತ್, ತಮಿಳುನಾಡು ಅನ್‌ಲಾಕ್
* ಹಂತ ಹಂತವಾಗಿ ವಿವಿಧ ಚಟುವಟಿಕೆಗಳು ಶುರು
* ಕೋವಿಡ್ ಮಾರ್ಗಸೂಚಿ ಪಾಲಿಸಿ ಚಟುವಟಿಕೆ ಆರಂಭಿಸಿ: ಸರ್ಕಾರ ಮನವಿ
ನವದೆಹಲಿ(ಜೂ.08): ದೇಶದಲ್ಲಿ ಕೊರೋನಾ ವೈರಸ್ ತಾಂಡವವಾಡುತ್ತಿದ್ದ ಹಲವು ರಾಜ್ಯಗಳ ಪೈಕಿ ದಿಲ್ಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್ ಹಾಗೂ ತಮಿಳುನಾಡಿನಲ್ಲಿ ಅನ್‌ಲಾಕ್ ಪ್ರಕ್ರಿಯೆಗೆ ಚಾಲನೆ ಲಭಿಸಿದೆ. ಕೊರೋನಾ ಸೋಂಕು ಇಲ್ಲಿ ಕ್ರಮೇಣ ನಿಯಂತ್ರಣಕ್ಕೆ ಬರುತ್ತಿದ್ದು, ಇಲ್ಲಿ ಹಂತ ಹಂತವಾಗಿ ವಿವಿಧ ಚಟುವಟಿಕೆಗಳಿಗೆ ಸೋಮವಾರದಿಂದ ಅನುಮತಿ ನೀಡಲಾಗಿದ್ದು, ವ್ಯಾಪಾರ-ವಹಿವಾಟು ಹಾಗೂ ಕಚೇರಿ ಕೆಲಸಗಳು ಆರಂಭವಾಗಿವೆ.
ಆದರೂ ಜನರು ಕೊರೋನಾ 2ನೇ ಅಲೆ ಮುಗಿಯಿತು ಎಂದು ಭಾವಿಸದೇ ಮುಂಜಾಗರೂಕತಾ ಕ್ರಮದಿಂದ ಸೋಂಕಿನ ಮಾರ್ಗಸೂಚಿ ಪಾಲಿಸಿ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮುಂಬೈ ಮಹಾನಗರಪಾಲಿಕೆ ಮುಖ್ಯಸ್ಥರು ಹಾಗೂ ಆಯಾ ರಾಜ್ಯ ಸರ್ಕಾರಗಳು ಮನವಿ ಮಾಡಿವೆ.
ದಿಲ್ಲಿ ಅನ್‌ಲಾಕ್:
ದಿಲ್ಲಿಯಲ್ಲಿ ಮೊದಲ ಹಂತವಾಗಿ ಶೇ.50ರಷ್ಟುಸೀಟು ಭರ್ತಿಯೊಂದಿಗೆ ಮೆಟ್ರೋ ರೈಲು ಸೇವೆ ಆರಂಭ. ಖಾಸಗಿ, ಸರ್ಕಾರಿ ಕಚೇರಿಗಳು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಶೇ.50ರಷ್ಟುಸಿಬ್ಬಂದಿಯ ಸಾಮರ್ಥ್ಯದೊಂದಿಗೆ ಆರಂಭ. ಅಗತ್ಯವಸ್ತು ಅಂಗಡಿಗಳ ಜತೆ ಮಾಲ್ ಹಾಗೂ ಇತರ ಮಾರುಕಟ್ಟೆಗಳು ಸಮ-ಬೆಸ ವ್ಯವಸ್ಥೆಯಲ್ಲಿ ಶುರು.
ಅರ್ಧ ಮಹಾ ಅನ್‌ಲಾಕ್:
ಮಹಾರಾಷ್ಟ್ರದಲ್ಲಿ ಸೋಂಕಿನ ಪಾಸಿಟಿಟಿವಿಟಿ ದರ ಹಾಗೂ ಆಕ್ಸಿಜನ್ ಬೆಡ್ ಭರ್ತಿ ಆಧಾರದಲ್ಲಿ 5 ಸ್ತರದ ಅನ್‌ಲಾಕ್ ಪ್ರಕ್ರಿಯೆಗೆ ಚಾಲನೆ ಲಭಿಸಿದೆ. ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇರುವ ಹಾಗೂ ಶೇ.5ಕ್ಕಿಂತ ಕಡಿಮೆ ಆಕ್ಸಿಜನ್ ಬೆಡ್ ಭರ್ತಿ ಆಗಿರುವ 18 ಜಿಲ್ಲೆಗಳು ಸಂಪೂರ್ಣ ಅನ್‌ಲಾಕ್ ಆಗಿವೆ. ಶೇ.5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಹಾಗೂ ಆಕ್ಸಿಜನ್ ಬೆಡ್ ಭರ್ತಿ ಅಗಿರುವ ಜಿಲ್ಲೆಗಳಲ್ಲಿ ಸೋಂಕಿನ ತೀವ್ರತೆ ಆಧರಿಸಿ ಅನ್‌ಲಾಕ್ ಪ್ರಕ್ರಿಯೆಯನ್ನು ಹಂತ ಹಂತವಾಗಿ ಆರಂಭಿಸಲಾಗಿದೆ. 3ನೇ ಸ್ತರದಲ್ಲಿ ಬರುವ ಮುಂಬೈನಲ್ಲಿ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ. ಶೇ.100 ಸೀಟು ಭರ್ತಿಯೊಂದಿಗೆ ಸಿಟಿ ಬಸ್ ಕಾರಾರಯಚರಣೆ ಆರಂಭವಾಗಿದೆ. ಆದರೆ ಮುಂಬೈ ಉಪನಗರ ರೈಲು ಸಂಚಾರ ಇಲ್ಲ.
ಉತ್ತರ ಪ್ರದೇಶ 71 ಜಿಲ್ಲೆಗಳು ಮುಕ್ತ:
ಲಾಕ್‌ಡೌನ್‌ನಿಂದ ಸೋಮವಾರ ಉತ್ತರ ಪ್ರದೇಶದಲ್ಲಿ ಮತ್ತಷ್ಟುಜಿಲ್ಲೆಗಳಿಗೆ ಮುಕ್ತಿ ನೀಡಲಾಗಿದೆ. ಇದರಿಂದ 71 ಜಿಲ್ಲೆಗಳು ಅನ್‌ಲಾಕ್ ಆಗಿವೆ. ಇಲ್ಲಿ ವೀಕೆಂಡ್ ಕಫ್ರ್ಯೂ ಮುಂದುವರಿಯಲಿದೆ.
ಹರ್ಯಾಣದಲ್ಲಿ ಕೆಲ ನಿರ್ಬಂಧ ತೆರವು:
ಹರಾರಯಣದಲ್ಲಿ ಜೂ.14ರವರೆಗೆ ಲಾಕ್‌ಡೌನ್ ಮುಂದುವರಿದರೂ ರೆಸ್ಟೋರೆಂಟ್, ಬಾರ್, ಮಾಲ್‌ಗಳಿಗೆ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಅನುಮತಿಸಲಾಗಿದೆ. ಇಲ್ಲಿ ಶೇ.50 ಗ್ರಾಹಕರಿಗೆ ಮಾತ್ರ ಅವಕಾಶವಿದೆ. ದೇವಾಲಯಗಳಲ್ಲಿ 21 ಭಕ್ತರಿಗೆ ಮಾತ್ರ ಒಂದು ಸಲಕ್ಕೆ ಪ್ರವೇಶಾವಕಾಶವಿದೆ. ಕಚೇರಿಗಳಲ್ಲಿ ಶೇ.50 ಸಿಬ್ಬಂದಿ, ಮದುವೆಗಳಿಗೆ 21 ಅತಿಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಗುಜರಾತ್:
ಗುಜರಾತ್‌ನಲ್ಲಿ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಹೋಮ್ ಡೆಲಿವರಿ ರಾತ್ರಿ 10ರವರೆಗೂ ಲಭ್ಯ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ ಶೇ.100ರಷ್ಟುಸಿಬ್ಬಂದಿ ಬರಬಹುದು.