
ಆ್ಯಕ್ಟಿಂಗ್, ವಿಡಿಯೋಗ್ರಫಿ ಪ್ರಿಯರಿಗೆ ಅತ್ಯಂತ್ ನೆಚ್ಚಿನ ಎಪ್ಲಿಕೇಶನ್ ಆಗಿದ್ದ ಟಿಕ್‌ಟಾಕ್ ಭಾರತದಲ್ಲಿ ಬ್ಯಾನ್ ಆಗಿದೆ. ಚೀನಾ ಆ್ಯಪ್ ಡಿಲೀಟ್ ಮಾಡಿ, ಜನ ಸ್ವದೇಶಿ ಬಳಕೆಗೆ ಒತ್ತು ನೀಡುತ್ತಿದ್ದಾರೆ.
ಆಂಡ್ರೋಯ್ಡ್ ಸಾಫ್ಟ್‌ವೇರ್ ಬಳಸುತ್ತಿದ್ದ ಬಹಳಷ್ಟು ಜನ ಭಾರತೀಯರು ಟಿಕ್‌ಟಾಕ್ ಬಳಸುತ್ತಿದ್ದರು. ಭಾರತದಲ್ಲಿ ಸುಮಾರು 611 ಮಿಲಿಯನ್ ಜನ ಟಿಕ್‌ಟಾಕ್ ಆ್ಯಪ್ ಡೌನ್‌ಲೋಡ್ ಮಾಡಿ ಬಳಸುತ್ತಿದ್ದರು.
ಟಿಕ್ ಟಾಕ್ ಬ್ಯಾನ್‌ನಿಂದ ದೇಸಿ ಸ್ಟಾರ್ಟ್ ಅಪ್ ಚಿಂಗಾರಿ, ಮಿತ್ರೋನ್ ಆ್ಯಪ್‌ಗಳಿಗೆ ಜಾಕ್‌ಪಾಟ್
ಏಪ್ರಿಲ್ 20ರಿಂದ ಡ್ರ್ಯಾಗನ್ ದೇಶದ ಫೇಮಸ್ ಆ್ಯಪ್ ಬಳಕೆ ಗಣನೀಯವಾಗಿ ಕುಸಿದಿತ್ತು. ಈ ನಡುವೆಯೇ ಬಹಳಷ್ಟು ಜನ ಚೀನಾ ವಸ್ತುಗಳನ್ನು ಆ್ಯಪ್‌ಗಳನ್ನು ಡಿಲೀಟ್ ಮಾಡಿದ್ದರು. ಇದೀಗ ಟಿಕ್‌ಟಾಕ್ ಬಳಸುತ್ತಿದ್ದವರಿಗೆ ಭಾರತದಲ್ಲಿ ಬದಲಿ ಆ್ಯಪ್‌ಗಳಿವೆ. ಟಿಕ್‌ಟಾಕ್ ಬಳಕೆದಾರರ ಇಳಿಕೆಯಿಂದ ಸದ್ಯ ಬದಲಿ ಆ್ಯಪ್‌ಗಳ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ.
ಮಿತ್ರನ್: ಮಿತ್ರನ್ 8.03 ಎಂಬಿಯ ವಿಡಿಯೋ ಮೇಕಿಂಗ್ ಆ್ಯಪ್. ಈ ಆ್ಯಪ್ ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಟ್ಯಾಪ್‌ಗೆ 4.7 ರೇಟಿಂಗ್ ಇದೆ. ಇದರಲ್ಲಿ ವಿಡಿಯೋ ನೋಡಲು, ವಿಡಿಯೋ ಮಾಡಲು, ವಿಡಿಯೋ ಎಡಿಟ್, ಶೇರ್ ಮಾಡುವುದಕ್ಕೂ ಅವಕಾಶವಿದೆ.
ಬೋಲೋ ಇಂಡ್ಯಾ: ಇದು ವಿಡಿಯೋ ಶೇರಿಂಗ್ ಆ್ಯಪ್. ಗಾರ್ಗಾನ್‌ನಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಭಾರತದ 8 ಭಾಷೆಯಲ್ಲಿ ವಿಡಿಯೋ ಮಾಡಬಹುದಾಗಿದೆ. ಹಿಂದಿ, ತಮಿಳು, ತೆಲುಗು, ಕನ್ನಡ, ಬೆಂಗಾಲಿ, ಮರಾಠಿ, ಮಲಯಾಳಂ ಹಾಗೂ ಗುಜರಾತಿಯಲ್ಲಿ ವಿಡಿಯೋ ಮಾಡಬಹುದು. ವಿಡಿಯೋ ಮಾಡುವ ಜೊತೆಗೆ ಇತರರೊಂದಿಗೆ ಚರ್ಚಿಸಲೂ ಇದರಲ್ಲಿ ಅವಕಾಶವಿದೆ.
ಪ್ಲೇ ಸ್ಟೋರ್‌ನಿಂದ ಟಿಕ್ ಟಾಕ್ ಡಿಲೀಟ್..! ಈಗಾಗಲೇ ಟಿಕ್ ಟಾಕ್ ಆ್ಯಪ್ ಹೊಂದಿರುವವರ ಕತೆ ಏನು?
ರೊಪೋಸೊ: ಆಂಡ್ರೋಯ್ಸ್ ಹಾಗೂ ಐಒಎಸ್‌ನಲ್ಲಿ ರೊಪೋಸೋ ಎಂಬ ಆ್ಯಪ್ ಲಭ್ಯವಿದ್ದು, 4.7 ಸ್ಟಾರ್ ಇದೆ. ವಿಡಿಯೋ ಶೂಟ್, ಎಡಿಟ್ ಹಾಗೂ ವಿಡಿಯೋ ಶೇರ್ ಮಾಡುವುದಕ್ಕೂ ಸಾಧ್ಯವಿದೆ. ಸ್ಲೋ ಮೋಷನ್ ವಿಡಿಯೋ ಈ ಆ್ಯಪ್ ವಿಶೇಷತೆ. ಇದರಲ್ಲಿ ಟ್ರೆಂಡೀ ಸ್ಟಿಕರ್ಸ್, ಫಿಲ್ಟರ್, ಎಫೆಕ್ಟ್‌ಗಳನ್ನೂ ನೀಡಬಹುದಾಗಿದೆ.
ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಗುಜರಾತಿ, ಪಂಜಾಬಿ, ಮರಾಠಿ ಬೆಂಗಾಲಿ ಭಾಷೆಯಲ್ಲಿಯೂ ಈ ಆfಯಪ್ ಲಭ್ಯವಿದೆ. ಇದರಲ್ಲಿ ಹಹ ಟಿವಿ, ಬೀಟ್ಸ್, ಲುಕ್ ಗುಡ್ ಫೀಲ್ ಗುಡ್ ಹಾಗೂ ಭಕ್ತಿ ಚಾನೆಲ್ ಕೂಡಾ ಲಭ್ಯವಿದೆ. ವಿಗೋ ವಿಡಿಯೋ, ಚೀಜ್, ಡಬ್‌ಸ್ಮಾಶ್, ಟಾಂಗಿ ಆ್ಯಪ್, ಫನಿಮೇಟ್, ಥ್ರಿಲರ್, ಫೈರ್ ವರ್ಖ, ಕ್ವೈ, ಸ್ಮ್ಯೂಲ್ ಆ್ಯಪ್ ಗಳನ್ನೂ ಬಳಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ