ಕುತ್ತಿಗೆ ಊತ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದ ಒಂದು ವರ್ಷದ ಮಗು| ಚಿಕಿತ್ಸೆಗೂ ಮುನ್ನವೇ ಆಸ್ಪತ್ರೆಯಲ್ಲೇ ಸಾವು| ಸಾವಿಗೀಡಾದ ಮಗುವನ್ನೆತ್ತಿ ಪೋಷಕರ ಆಕ್ರಂದನ
ಕನೌಜ್(ಜೂ.30): ಕುತ್ತಿಗೆ ಊತ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದ ಒಂದು ವರ್ಷದ ಮಗು ಚಿಕಿತ್ಸೆಗೂ ಮುನ್ನವೇ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ ಮನಕಲಕುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಾವಿಗೀಡಾದ ಮಗುವನ್ನು ಪೋಷಕರು ಕಂಕುಳಲ್ಲೇ ಎತ್ತಿಕೊಂಡು ಯಾತನೆ ಪಡುತ್ತಿರುವ ದಂಪತಿಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
'ಬಾಯ್ ಅಪ್ಪಾ.. ನನಗೆ ಉಸಿರಾಡೋಕಾಗ್ತಿಲ್ಲ, ಅವ್ರು ವೆಂಟಿಲೇಟರ್ ತೆಗೆದಿದ್ದಾರೆ...!'
ಈ ವಿಡಿಯೋವನ್ನು ಕಂಡವರು ಮಗು ಕಳೆದುಕೊಂಡ ಪೋಷಕರ ಕರುಣಾಜನಕ ಸ್ಥಿತಿಗೆ ವ್ಯಥೆ ಪಟ್ಟಿದ್ದಾರೆ. ಹೀಗೆ, ಕಂದಮ್ಮನನ್ನು ಕಳೆದುಕೊಂಡ ಸಂತ್ರಸ್ತರನ್ನು ಪ್ರೇಮ್‌ಚಂದ್ ಹಾಗೂ ಆಶಾದೇವಿ ಎಂದು ಗುರುತಿಸಲಾಗಿದೆ.
Extremely distressing visuals from the district hospital in Kannauj from last evening , where the parents of a 1 yr boy cling to his dead body and weep - the parents allege negligence from doctors , the district magistrate has denied on record there was any ... pic.twitter.com/45Qx3Dh5bJ
— Alok Pandey (@alok_pandey)ಕುತ್ತಿಗೆ ಊತ ಹಾಗೂ ಜ್ವರದಿಂದ ಅಸ್ವಸ್ತವಾಗಿದ್ದ ಮಗುವನ್ನು ಪೋಷಕರು ಕನೌಜ್‌ನ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದೆವು. ಈ ವೇಳೆ ವೈದ್ಯರು ತಮ್ಮ ಮಗುವಿಗೆ ಚಿಕಿತ್ಸೆ ನೀಡುವುದಿರಲಿ, ಮಗುವನ್ನು ಮುಟ್ಟಿಯೂ ನೋಡಲಿಲ್ಲ. ಇದರಿಂದ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ.