ಕಣ್ಣಿಲ್ಲದಿದ್ದರೂ ಅನೇಕರ ಬಾಳಿಗೆ ಬೆಳಕಾದ ಬ್ಯಾಂಕ್ ಆಫೀಸರ್‌ಗೆ ಹೆಲೆನ್ ಕೆಲ್ಲರ್ ಪ್ರಶಸ್ತಿ ಗರಿ

By Anusha KbFirst Published Dec 20, 2022, 4:03 PM IST
Highlights

ವಿಶೇಷ ಚೇತನರಿಗೆ ಇರುವ ಸಮಸ್ಯೆಗಳು ಒಂದೆರಡಲ್ಲ ಆದರೂ ಅಡೆತಡೆಗಳನ್ನೆಲ್ಲಾ ಮೀರಿ ಸ್ವಾಬಿಮಾನದಿಂದ ಬದುಕುತಿರುವ ಹಲವು ವಿಶೇಷ ಚೇತನರು ನಮ್ಮ ಸಮಾಜದಲ್ಲಿ ಆ ಪಟ್ಟಿಗೆ ಹೊಸ ಸೇರ್ಪಡೆ ಬೆಂಗಳೂರಿನ ಬ್ಯಾಂಕರ್ ಪೌಲ್ ಮುದ್ಧ.

ವಿಶೇಷ ಚೇತನರಿಗೆ ಇರುವ ಸಮಸ್ಯೆಗಳು ಒಂದೆರಡಲ್ಲ ಆದರೂ ಅಡೆತಡೆಗಳನ್ನೆಲ್ಲಾ ಮೀರಿ ಸ್ವಾಬಿಮಾನದಿಂದ ಬದುಕುತಿರುವ ಹಲವು ವಿಶೇಷ ಚೇತನರು ನಮ್ಮ ಸಮಾಜದಲ್ಲಿ ಆ ಪಟ್ಟಿಗೆ ಹೊಸ ಸೇರ್ಪಡೆ ಬೆಂಗಳೂರಿನ ಬ್ಯಾಂಕರ್ ಪೌಲ್ ಮುದ್ಧ. ತನ್ನ ಬಾಲ್ಯದಲ್ಲೇ ದೃಷ್ಟಿ ಕಳೆದುಕೊಂಡ ಪೌಲ್ ಮುದ್ಧ ಅವರು ಅಚಲವಾದ ಶ್ರದ್ಧೆಯಿಂದ ಜೀವನದ ಪ್ರತಿ ಹೋರಾಟದಲ್ಲಿ ಜಯ ಗಳಿಸಿದ್ದಾರೆ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ದಿವ್ಯಾಂಗರ ವಸತಿ ಶಾಲೆಯಲ್ಲಿ ಬೆಳೆದ ಅವರು ಇತ್ತಿಚೆಗೆ ಎನ್‌ಸಿಪಿಇಡಿಪಿ ಮೈಂಡ್ ಟ್ರೀ ಹೆಲೆನ್ ಕೆಲರ್ (NCPEDP-Mindtree Helen Keller Awards-2022) ಪ್ರಶಸ್ತಿಯನ್ನು ತಮ್ಮ ಸಾಧನೆಯ ಕಿರೀಟದ ಮುಡಿಗೇರಿಸಿಕೊಂಡಿದ್ದಾರೆ.

ರೆಸಿಡೆನ್ಸಿಯಲ್ ಶಾಲೆಯಲ್ಲಿ ( ಆತನನ್ನು ತೊರೆದು ಹೋಗಲಾಗಿತ್ತು. ಅಲ್ಲಿಂದಲೇ 13ನೇ ವಯಸ್ಸಿಗೆ ಅವರನ್ನು ದತ್ತು ಪಡೆಯಲಾಗಿತ್ತು. ಪ್ರಸ್ತುತ ಮುದ್ದ ಅವರು ಸಾರ್ವಜನಿಕ ವಲಯದ ಬ್ಯಾಂಕೊಂದರ ಮ್ಯಾನೇಜರ್ ಆಗಿದ್ದು, ಆ ಸಂಸ್ಥೆಯಲ್ಲಿ ಅಷ್ಟು ಉನ್ನತ ಸ್ಥಾನಕ್ಕೇರಿದ ಒಬ್ಬರೇ ಒಬ್ಬ ದಿವ್ಯಾಂಗ ಅವರು. ಕಲಿಕೆಯಲ್ಲಿ ಮುಂದಿದ್ದ ಅವರು ಪದವಿಯಲ್ಲಿ ಓದುತ್ತಿರುವಾಗಲೇ ಅವರಿಗೆ ಸ್ಟಾಪ್ ಸೆಲೆಕ್ಷನ್ ಕಮೀಷನ್ ಮೂಲಕ ಬ್ಯಾಂಕ್‌ನಲ್ಲಿ ಕೆಲಸ ಸಿಕ್ಕಿದ್ದು, ಮೊದಲಿಗೆ ಅವರಿಗೆ ಟೆಲಿಫೋನ್ ಆಪರೇಟರ್ ಕೆಲಸ ಸಿಕ್ಕಿತ್ತು. ಜೊತೆ ಜೊತೆಯಲ್ಲಿಯೇ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು ಅರ್ಥಶಾಸ್ತ್ರ, ವ್ಯವಹಾರ, ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 

ವಿಶೇಷ ಚೇತನರಿಗೆ ವಿಶೇಷ ಫ್ಯಾಶನ್‌ ಶೋ, 100ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿ

ಈ ಮೂಲಕ ವಿಶೇಷ ಚೇತನರಾಗಿದ್ದರು (specially abaled) ತಮ್ಮ ವಿಶೇಷ ಸಾಧನೆ ಮೂಲಕ ಗುರುತಿಸಿಕೊಂಡು ತಮ್ಮಂತೆ ಇರುವ ಅನೇಕರಿಗೆ ಸ್ಪೂರ್ತಿ ಆಗಿರುವುದಕ್ಕೆ ಅವರಿಗೆ ದಿವ್ಯಾಂಗರಿಗಾಗಿ ಇರುವ ರಾಷ್ಟ್ರೀಯ ಕೇಂದ್ರ ಉದ್ಯೋಗ ನೇಮಕಾತಿ ಪ್ರಚಾರ ಪಡೆಯೂ (NCPEDP)ಪ್ರಶಸ್ತಿ ನೀಡಿ ಗೌರವಿಸಿದೆ. NCPEDP ಒಂದು ವಿಶೇಷ ಚೇತನರಿಗೆ ಸಮಾಜದಲ್ಲಿ ಸಮಾನ ನ್ಯಾಯ ಹಾಗೂ ಹಕ್ಕುಗಳಿಗಾಗಿ ಹೋರಾಡುತ್ತಿದೆ. ಇನ್ನು ಮೈಂಡ್ ಟ್ರೀ ಎಂಬುದು ಮಾಹಿತಿ ತಂತ್ರಜ್ಞಾನ ಆಧರಿತ ಬಹುರಾಷ್ಟ್ರೀಯ ಸಂಸ್ಥೆಯಾಗಿದೆ. 

ಮುದ್ಧ ಅವರು ಸ್ನೇಹದೀಪ್ ಟ್ರಸ್ಟ್ ಎಂಬ ಎನ್‌ಜಿಒ ಒಂದನ್ನು ನಿರ್ಮಿಸುತ್ತಿದ್ದು, ವಿಶೇಷ ಚೇತನ ವ್ಯಕ್ತಿಗಳಿಗೆ ಕಂಪ್ಯೂಟರ್ ಜೊತೆ ಕೆಲವು ಕೌಶಲ್ಯಗಳನ್ನು ಕಲಿಸುವ ಮೂಲಕ ಅವರಿಗೆ ಉದ್ಯೋಗ ಕೇತ್ರದಲ್ಲಿ ಮುಂದಡಿ ಇಡಲು ನೆರವಾಗುತ್ತದೆ. ವಿಶೇಷ ಚೇತನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಉದ್ಯೋಗವಕಾಶದ ಕೊರತೆ. ಸರ್ಕಾರ, ಕಾರ್ಪೋರೇಟ್‌ ಸಂಸ್ಥೆಗಳು ಹಾಗೂ ಸಮಾಜ ಕಡ್ಡಾಯವಾಗಿ ಹೆಚ್ಚು ಹೆಚ್ಚು ವಿಶೇಷ ಚೇತನರನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳಬೇಕಿದೆ. ಈ ಮೂಲಕ ಸ್ವಾಭಿಮಾನ ಹಾಗೂ ಗೌರವಯುತವಾದ ಬದುಕು ಕಲಿಸಲು ಅವರಿಗೆ ನೆರವಾಗಬೇಕಿದೆ ಎಂದು ಪೌಲ್ ಮುದ್ಧ ಹೇಳಿದ್ದಾರೆ. 

ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಶೇಷ ಚೇತನರಿಗಾಗಿ ಮಾನವೀಯ ಕೆಲಸ..!


1999ರ ಎನ್‌ಸಿಪಿಇಡಿಪಿ ಸರ್ವೇ ಪ್ರಕಾರ ಸಾರ್ವಜನಿಕ ವಲಯಗಳಲ್ಲಿ ವಿಶೇಷ ಚೇತನರಿಗೆ ಉದ್ಯೋಗ ನೀಡುವ ಕಂಪನಿಗಳ ಸಂಖ್ಯೆ 0.5%ಕ್ಕಿಂತಲೂ ಕಡಿಮೆ, ಖಾಸಗಿ ವಲಯದಲ್ಲಿ 0.3% ಹಾಗೆಯೇ ಬಹುರಾಷ್ಟ್ರೀಯ ಕಂಪನಿಗಳಲ್ಲಿ 0.1ಕ್ಕೂ ಕಡಿಮೆ.  ಒಬ್ಬ ದಿವ್ಯಾಂಗನಾಗಿ ಮತ್ತೊಬ್ಬ ದಿವ್ಯಾಂಗ ಉದ್ಯೋಗಿಯ ಉತ್ಪಾದಕತೆ ಸಾಮರ್ಥ್ಯದ ಬಗ್ಗೆ ನಾನು ನಿಮಗೆ ಭರವಸೆ ನೀಡುವೆ ಎಂದು ಹೇಳುತ್ತಾರೆ ಮುದ್ಧ ಪೌಲ್, ಮುದ್ಧ ಪೌಲ್ ಅವರು ಸ್ವಂತವಾಗಿ ಸ್ಥಾಪಿಸಿರುವ ಸ್ನೇಹದೀಪ್ ಟ್ರಸ್ಟ್ ಇದುವರೆಗೆ 13,000 ಉದ್ಯೋಗಿಗಳಿಗೆ ಕೆಲಸಕ್ಕೆ ನೆರವಾಗಿದೆ. ಅಲ್ಲದೇ 28 ಉದ್ಯೋಗಿಗಳಿಗೆ ಶಾಶ್ವತ ಉದ್ಯೋಗ ಒದಗಿಸಿದೆ. 
 

click me!