
ವಿಶಾಖಪಟ್ಟಣ: ತಮ್ಮ ಮದುವೆ ದಿನ ವಿಭಿನ್ನವಾಗಿ ಮದುವೆ ಮಂಟಪಕ್ಕೆ ಬರುವುದು ಈಗಿನ ಟ್ರೆಂಡ್. ಕೆಲವು ವಧುಗಳು ಡಾನ್ಸ್ ಮಾಡುತ್ತಾ ಮದುವೆ ಮಂಟಪಕ್ಕೆ ಬಂದರೆ ಮತ್ತೆ ಕೆಲವರು ಬುಲೆಟ್ ಏರಿ ಬರುತ್ತಾರೆ. ಕೆಲವರು ಹೆಲಿಕಾಪ್ಟರ್ ಮೂಲಕ ಇಳಿಯುತ್ತಾರೆ. ಕೆಲ ದಿನಗಳ ಹಿಂದೆ ವಧುವೊಬ್ಬರು ಟ್ರಾಕ್ಟರ್ ಚಲಾಯಿಸುತ್ತಾ ಮದುವೆ ಮಂಟಪಕ್ಕೆ ಬಂದಿದ್ದರು. ಇದು ಉಳ್ಳವರ ಟ್ರೆಂಡ್. ಆದರೆ ಇಲ್ಲೊಬ್ಬಳು ವಧುವಿಗೆ ಅನಿವಾರ್ಯವಾಗಿ ತನ್ನ ಮದುವೆ ದಿನ ದೋಣಿಯಲ್ಲಿ ಸಾಗಬೇಕಾದ ಸ್ಥಿತಿ ಬಂದಿದೆ. ಹೌದು ಇದಕ್ಕೆ ಕಾರಣವಾಗಿದ್ದು ಧೋ ಎಂದು ಸುರಿಯುತ್ತಿರುವ ಮಳೆ
ದೇಶಾದ್ಯಂತ ಮಾನ್ಸೂನ್ ಆರಂಭವಾಗಿದ್ದು, ಬಾನಿಗೆ ತೂತು ಬಿದ್ದಂತೆ ಮಳೆ ಸುರಿಯುತ್ತಿದೆ. ಅನೇಕ ಕಡೆ ಎಡೆಬಿಡದೆ ಸುರಿದ ಮಳೆಯ ಅವಾಂತರಕ್ಕೆ ಹಲವರು ತಮ್ಮ ಬದುಕು ಕಳೆದುಕೊಂಡಿದ್ದಾರೆ. ಜೀವಮಾನವಿಡೀ ಕಷ್ಟಪಟ್ಟು ದುಡಿದು ಕಟ್ಟಿದ ಮನೆಗಳು ನಾಮಾವಶೇಷವಾಗಿವೆ. ಹಲವರು ಜೀವ ಕಳೆದುಕೊಂಡಿದ್ದಾರೆ. ಈ ಮಧ್ಯೆ ಆಂಧ್ರದಲ್ಲೂ ಮಳೆಯ ಅವಾಂತರ ಜೋರಾಗಿಯೇ ಇದೆ. ಮೊದಲೇ ನಿಗದಿಯಾಗಿದ್ದ ಮದುವೆಯನ್ನು ಮಳೆಯ ಕಾರಣಕ್ಕೆ ನಿಲ್ಲಿಸಲಾಗದೇ ವಧು ದೋಣಿಯೇರಿ ಮದುವೆ ಮಂಟಪ ತಲುಪುವ ಸ್ಥಿತಿ ನಿರ್ಮಾಣವಾಗಿದೆ.
ವಧು ದೋಣಿಯಲ್ಲಿ ಸಾಗುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯಲ್ಲಿ ಈ ಘಟನೆ ನಡದಿದೆ. ಪ್ರವಾಹದ ನಡುವೆಯೇ ವಧು ಮತ್ತು ಆಕೆಯ ಕುಟುಂಬಸ್ಥರು ದೋಣಿಯ ಮೂಲಕ ಸಾಗಿ ವರನ ಮನೆಯನ್ನು ಸೇರಿದ್ದಾರೆ. ಪ್ರಶಾಂತಿ ಎಂಬ ವಧುವೇ ತನ್ನ ಮದುವೆಯಂದು ದೋಣಿ ವಿಹಾರ ಮಾಡಿದವರು.
ಪ್ರಶಾಂತಿ ಮತ್ತು ಅವರ ಇಡೀ ಕುಟುಂಬವು ವರ ಅಶೋಕ್ ಮನೆಗೆ ದೋಣಿಯಲ್ಲಿ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ಪೆದಪಟ್ನಂಲಂಕಾದಲ್ಲಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅನಿವಾರ್ಯವಾಗಿ ಈ ವಧು ಹಾಗೂ ಅವರ ಮನೆಯವರು ದೋಣಿಯನ್ನು ಆಶ್ರಯಿಸುವ ಸ್ಥಿತಿ ಬಂದಿದೆ. ತನ್ನ ಬದುಕಿನ ಮಹತ್ವದ ದಿನಕ್ಕಾಗಿ ಚಿನ್ನಾಭರಣಗಳನ್ನು ಧರಿಸಿ ಸುಂದರವಾಗಿ ಅಲಂಕೃತಗೊಂಡ ವಧು ದೋಣಿಯಲ್ಲಿ ತನ್ನ ಕುಟುಂಬದೊಂದಿಗೆ ಸಾಗುವುದನ್ನು ವಿಡಿಯೋದಲ್ಲಿ ಕಾಣಬಹುದು.
ಅಬ್ಬಬ್ಬಾ...! ಇಲ್ಲಿ ಮದುವೆಯಾದ 3 ದಿನಗಳವರೆಗೆ ವಧು, ವರ ಟಾಯ್ಲೆಟ್‌ಗೆ ಹೋಗುವಂತಿಲ್ಲ!
ವಾಸ್ತವವಾಗಿ, ಪ್ರಶಾಂತಿ ಮತ್ತು ಅಶೋಕ್ ಅವರ ಪೋಷಕರು ಆಗಸ್ಟ್‌ನಲ್ಲಿ ಭಾರಿ ಮಳೆ ಇರುವ ಸಾಧ್ಯತೆ ಇರುವುದರಿಂದ ಜುಲೈನಲ್ಲಿ ಇವರ ಮದುವೆಯನ್ನು ನಿಶ್ಚಯಿಸಿದ್ದರು. ಆದಾಗ್ಯೂ, ಇವರು ಮಳೆಯಲ್ಲೇ ಮದುವೆಯಾಗಬೇಕೆಂದು ಮೊದಲೇ ದೈವ ನಿಶ್ಚಿಯಿಸಲಾಗಿತ್ತೆಂದೆನಿಸುತ್ತಿದೆ. ಜುಲೈನಲ್ಲಿ ಮದುವೆಯಾದರೂ ಇವರು ಮಳೆಯಿಂದ ಪಾಡು ಪಡಬೇಕಾಯಿತು.
ಮಳೆ ಹಾಗೂ ಪ್ರವಾಹ ಯಾವುದೂ ಕೂಡ ಪ್ರಶಾಂತಿ ಅವರ ಮದುವೆಯನ್ನು ನಿಲ್ಲಿಸಲಾಗಲಿಲ್ಲ. ಅವರ ಮನೆಯವರೆಲ್ಲರೂ ಅತೀ ಉತ್ಸಾಹದಿಂದಲೇ ದೋಣಿಯಲ್ಲಿ ಸಾಗಿ ಮುಂದಿನ ಕಾರ್ಯಕ್ಕೆ ಸಿದ್ಧರಾದರು. ಆದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಜನ ಕಾಮೆಂಟ್ ಮಾಡುತ್ತಿದ್ದಾರೆ.
ಮಾಲೆ ಹಾಕಿದ ಮರುಕ್ಷಣವೇ ವರನಿಂದ ಒಪ್ಪಂದಕ್ಕೆ ಸಹಿ ಹಾಕಿಸಿದ ವಧು, ಪೇಪರ್ ಓದಿದವನಿಗೆ ನಡುಕ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ