ಜೆಕೆಗೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ

By Kannadaprabha NewsFirst Published Aug 3, 2023, 9:59 AM IST
Highlights

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುವ 370ನೇ ವಿಧಿ ರದ್ಧತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ದೈನಂದಿನ ವಿಚಾರಣೆಯನ್ನು ಸುಪ್ರಿಂಕೋರ್ಟ್ ನಿನ್ನೆಯಿಂದ ಆರಂಭಿಸಿದೆ. 

ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುವ 370ನೇ ವಿಧಿ ರದ್ಧತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ದೈನಂದಿನ ವಿಚಾರಣೆಯನ್ನು ಸುಪ್ರಿಂಕೋರ್ಟ್ ನಿನ್ನೆಯಿಂದ ಆರಂಭಿಸಿದೆ. ಈ ವೇಳೆ ವಿಧಾನಸಭೆಯ ಶಿಫಾರಸು ಇಲ್ಲದೇ 370ನೇ ವಿಧಿ ರದ್ದು ಮಾಡಿರುವುದು ಸರಿಯಲ್ಲ ಎಂದು ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಾದಿಸಿದ್ದಾರೆ.

ವಿಧಾನಸಭೆಯ ಶಿಫಾರಸು ಇಲ್ಲದೇ 370ನೇ ವಿಧಿಯನ್ನು ರದ್ದು ಮಾಡುವುದು ಸಾಧ್ಯವಿಲ್ಲ. ವಿಧಾನಸಭೆಯ ಶಿಫಾರಸು ಇಲ್ಲದೇ ಈ ವಿಧಿಯನ್ನು ರದ್ದು ಮಾಡಲಾಗಿದೆ. ಜಮ್ಮು ಕಾಶ್ಮೀರವನ್ನು ಈ ವಿಧಿ ಭಾರತದಿಂದ ಪ್ರತ್ಯೇಕಿಸುತ್ತದೆ ಎಂದು ವಾದಿಸಿರುವ ಕೇಂದ್ರ ಸರ್ಕಾರ, ಇಲ್ಲಿ ಸ್ವತಃ ತಾನೇ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಾಗಿ ಕಾರ್ಯನಿರ್ವಹಿಸಿದೆ ಎಂದು ಕಪಿಲ್‌ ಸಿಬಲ್‌ ವಾದಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್ ಒಂದು ವೇಳೆ ವಿಧಾನಸಭೆ ಅಸ್ತಿತ್ವದಲ್ಲಿಲ್ಲದಿದ್ದರೆ ಏನು ಮಾಡಬೇಕು ಎಂದು ಸಿಬಲ್‌ ಅವರಿಗೆ ಪ್ರಶ್ನಿಸಿದೆ. ಯಾವುದೇ ವಿಧಾನಸಭೆಯೂ ಅನಿರ್ದಿಷ್ಟಕಾಲ ಅಸ್ತಿತ್ವದಲ್ಲಿರುವುದಿಲ್ಲ. ಹಾಗಾಗಿ ವಿಧಾನಸಭೆ ಇಲ್ಲದಿದ್ದಾಗ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. 2019ರ ಆ.5ರಂದು ಕೇಂದ್ರ ಸರ್ಕಾರ 370ನೇ ವಿಧಿಯನ್ನು ರದ್ದು ಮಾಡಿತ್ತು. ಇದಕ್ಕೆ ವಿಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿದ್ದರೆ, ಆಡಳಿತ ಪಕ್ಷದ ಮೈತ್ರಿಕೂಟ ಬೆಂಬಲ ವ್ಯಕ್ತಪಡಿಸಿತ್ತು.

ಆರ್ಟಿಕಲ್‌ 370 ರದ್ದು ವಿರೋಧಿಸಿ ಆ.5ರಂದು ಜಾಗೃತವಾಗಲಿದೆ ಪಾಕಿಸ್ತಾನದ ಟೂಲ್‌ಕಿಟ್‌ ಗ್ಯಾಂಗ್‌!

370ನೇ ವಿಧಿ ರದ್ದುಗೊಳಿಸಿದ ಕೇಂದ್ರದ ನಿರ್ಧಾರದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹಾಗೂ ಜಮ್ಮು- ಕಾಶ್ಮೀರ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ನಿರ್ಧಾರದಲ್ಲಿ ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ ಎಂದು ಸಲ್ಲಿಕೆಯಾಗಿರುವ 20ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ ಇದಾಗಿದೆ. ಇತ್ತೀಚೆಗೆ ಜಮ್ಮು- ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಕೂಡ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಸುಪ್ರೀಂಗೆ ಮನವಿ ಮಾಡಿದ್ದರು.  ಈ ಕುರಿತ ಅರ್ಜಿಗಳ ವಿಚಾರಣೆಗಾಗಿ ಮುಖ್ಯ ನ್ಯಾ ಡಿ.ವೈ ಚಂದ್ರಚೂಡ್‌ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ರಚಿಸಲಾಗಿದ್ದು, ನ್ಯಾ ಸಂಜಯ್‌ ಕಿಶನ್‌ ಕೌಲ್‌, ನ್ಯಾ. ಸಂಜೀವ್‌ ಖನ್ನಾ, ನ್ಯಾ. ಬಿಆರ್‌ ಗವಾಯಿ ಮತ್ತು ನ್ಯಾ. ಸೂರ್ಯಕಾಂತ್‌ ಉಳಿದ ಸದಸ್ಯಾಗಿದ್ದಾರೆ.

ಭಾರತದಲ್ಲಿ ಏಕರೂಪ ಸಂಹಿತೆ ಜಾರಿ ಸಾಧ್ಯವಿಲ್ಲ: ಆಜಾದ್‌

ಏಕರೂಪದ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರುವುದು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತುಕೊಳ್ಳಲು ಸಂವಿಧಾನದ 370ನೇ ವಿಧಿ ರದ್ದುಪಡಿಸಿದಷ್ಟುಸುಲಭವಲ್ಲ. ಇದನ್ನು ಜಾರಿಗೆ ತಂದರೆ ಎಲ್ಲಾ ಧರ್ಮಗಳ ಮೇಲೂ ಪರಿಣಾಮವಾಗುತ್ತದೆ. ಹೀಗಾಗಿ ಭಾರತದಲ್ಲಿ ಇದನ್ನು ಜಾರಿಗೆ ತರುವುದು ಸಾಧ್ಯವೇ ಇಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಜಮ್ಮು ಕಾಶ್ಮೀರದ ಮಾಜಿ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ.

ಅಚ್ಚೇದಿನ್.. 30 ವರ್ಷಗಳ ಬಳಿಕ ಕಾಶ್ಮೀರದಲ್ಲಿ ಮೊಹರಂ ಮೆರವಣಿಗೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯುಸಿಸಿ ಕೇವಲ ಮುಸ್ಲಿಮರಿಗೆ ಸಂಬಂಧಿಸಿದ್ದಲ್ಲ. ಇದು ಕ್ರಿಶ್ಚಿಯನ್ನರು, ಸಿಖ್ಖರು, ಗುಡ್ಡಗಾಡು ಜನರು, ಜೈನರು, ಪಾರ್ಸಿಗಳಿಗೂ ಸಂಬಂಧಿಸಿದೆ. ಏಕಕಾಲಕ್ಕೆ ಅವರೆಲ್ಲರಿಗೂ ಬೇಸರ ಉಂಟುಮಾಡುವುದರಿಂದ ಯಾವ ಸರ್ಕಾರಕ್ಕೂ ಒಳ್ಳೆಯದಾಗುವುದಿಲ್ಲ. ಹೀಗಾಗಿ ಈಗಿನ ಕೇಂದ್ರ ಸರ್ಕಾರ ಇದರ ಬಗ್ಗೆ ಯೋಚನೆ ಕೂಡ ಮಾಡಲು ಹೋಗಬಾರದು ಎಂದು ಹೊಸತಾಗಿ ಡಿಪಿಎಪಿ ಎಂಬ ಪಕ್ಷ ಕಟ್ಟಿರುವ, ಪ್ರಧಾನಿ ನರೇಂದ್ರ ಮೋದಿಯವರಿಗೆ ಆಪ್ತರೂ ಆಗಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ.

click me!