ಅತಿಯಾದ ಸ್ಯಾನಿಟೈಸರ್‌ ಬಳಸುತ್ತೀರಾ? ಎಚ್ಚರ...! ಮತ್ತೊಂದು ಸಮಸ್ಯೆಗೆ ಇದು ದಾರಿ!

By Kannadaprabha NewsFirst Published Jul 30, 2020, 9:38 AM IST
Highlights

ಅತಿಯಾದ ಸ್ಯಾನಿಟೈಸರ್‌ ಬಳಕೆ ಅಪಾಯಕಾರಿ| ಚರ್ಮದ ತುರಿಕೆ, ಗುಳ್ಳೆ ಏಳುವ ಸಮಸ್ಯೆಗೆ ಕಾರಣವಾಗಬಲ್ಲದು: ತಜ್ಞರು

ನವದೆಹಲಿ(ಜು.30): ಕೊರೋನಾ ವೈರಸ್‌ ತಡೆಯಲು ಕೈಗಳಿಗೆ ಹಚ್ಚುವ ಸ್ಯಾನಿಟೈಸರ್‌ಗಳನ್ನು ಅತಿಯಾಗಿ ಬಳಸುವುದು ಕೂಡ ಅಪಾಯಕಾರಿ. ಸ್ಯಾನಿಟೈಸರ್‌ಗಳ ಅತಿಯಾದ ಬಳಕೆಯಿಂದ ಚರ್ಮದ ತುರಿಕೆ, ಗುಳ್ಳೆಗಳು ಏಳುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ 10 ಲಕ್ಷ ಸೋಂಕಿತರು ಗುಣಮುಖ..! ಇನ್ನೂ ಹೆಚ್ಚಾಗಲಿದೆ ಸೋಂಕಿತರ ಸಂಖ್ಯೆ

ದೆಹಲಿಯ ಸ್ಕಿನ್‌ಕ್ಯೂರ್‌ ಕ್ಲಿನಿಕ್‌ನ ವೈದ್ಯ ಡಾ.ಬಿ.ಎಲ್‌. ಜಂಗಿದ್‌ ಅವರ ಪ್ರಕಾರ, ಸ್ಯಾನಿಟೈಸರ್‌ಗಳನ್ನು ಮಿತವಾಗಿ ಬಳಸಿದರೆ ಅದರಿಂದ ಯಾವುದೇ ಅಪಾಯ ಇಲ್ಲ. ವೈರಸ್‌ಗಳನ್ನು ಕೊಲ್ಲಲು ಆಲ್ಕೋಹಾಲ್‌ ಮಿಶ್ರಿತ ಸ್ಯಾನಿಟೈಸರ್‌ಗಳು ನೆರವಾಗಬಲ್ಲವು. ಆದರೆ, ಅವುಗಳನ್ನು ಪದೇ ಪದೇ ಬಳಸುವುದರಿಂದ ಚರ್ಮ ಒಣಗುವಿಕೆ, ಸುಟ್ಟಗಾಯಗಳು ಮತ್ತು ಚರ್ಮ ಕೆಂಪು ಬಣ್ಣಕ್ಕೆ ತಿರುಗುವಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೇ ದೇಹಕ್ಕೆ ನೆರವಾಗುವ ಒಳ್ಳೆಯ ಬ್ಯಾಕ್ಟೀರಿಯಾಗಳು ಕೂಡ ಸ್ಯಾನಿಟೈಸರ್‌ ಬಳಕೆಯಿಂದ ನಾಶವಾಗುತ್ತವೆ.

ಹೊಟ್ಟೆ ನೋವಿನ ಟಾನಿಕ್ ಎಂದು ಸ್ಯಾನಿಟೈಸರ್ ಸೇವಿಸಿ ವ್ಯಕ್ತಿ ಸಾವು

ಒಂದು ವೇಳೆ ಹ್ಯಾಂಡ್‌ ಸ್ಯಾನಿಟೈಸರ್‌ಗಳಲ್ಲಿ ಬೇಡದೇ ಇರುವ ರಾಸಾಯನಿಕಗಳು ಬಳಕೆ ಆಗಿದ್ದರೆ ಅವು ಘೋರ ಪರಿಣಾಮಗಳನ್ನು ಬೀರಬಲ್ಲದು. ದೀರ್ಘಕಾಲ ನೀವು ಸ್ಯಾನಿಟೈಸರ್‌ಗಳನ್ನು ಬಳಕೆ ಮಾಡುತ್ತಿದ್ದರೆ ಅದು ಕೈಗಳ ಮೇಲೆ ಗುಳ್ಳೆಗಳು ಏಳಲು ಕಾರಣವಾಗಬಹುದು. ಹೀಗಾಗಿ ಅಗತ್ಯವಿದ್ದಾಗ ಮಾತ್ರ ಸ್ಯಾನಿಟೈಸರ್‌ಗಳನ್ನು ಬಳಕೆ ಮಾಡುವುದು ಸೂಕ್ತ. ಅಲ್ಲದೇ ಸ್ಯಾನಿಟೈಸರ್‌ಗಳಿಗೆ ಪರ್ಯಾಯವಾಗಿ ಮನೆಯಲ್ಲೇ ಲಭ್ಯವಿರುವ ಉತ್ತಮ ಲೋಷನ್‌ ಕ್ರೀಮ್‌ಗಳನ್ನು ಮುಲಾಮುಗಳ ಜೊತೆ ಬಳಕೆ ಮಾಡಬಹುದಾಗಿದೆ. ಒಂದು ವೇಳೆ ಚರ್ಮ ಒಣಗುವಿಕೆಯ ಸಮಸ್ಯೆ ಇದ್ದರೆ ಮಾಯಿಶ್ಚರೈಸರ್‌ಗಳನ್ನು ಅಥವಾ ಸೋಪು ನೀರನ್ನು ಬಳಕೆ ಮಾಡುವುದು ಉತ್ತಮ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

click me!