Omicron Virus: ಓಮಿಕ್ರಾನ್ ಎಚ್ಚರಿಕೆ ಅಗತ್ಯ, ಜನರ ಆತಂಕದ ಪ್ರಶ್ನೆಗೆ ಕೇಂದ್ರ ಆರೋಗ್ಯ ಇಲಾಖೆ ಉತ್ತರ

By Suvarna NewsFirst Published Dec 3, 2021, 10:08 PM IST
Highlights
  • ಓಮಿಕ್ರಾನ್ ಆತಂಕಕ್ಕೆ ಕೇಂದ್ರ ಆರೋಗ್ಯ ಇಲಾಖೆಯ ಉತ್ತರ
  • ಭಾರತದ ತಯಾರಿ, ಸೋಂಕು ಹರಡದಂತೆ ತಡೆಯಲು ಕ್ರಮ
  • ಜನರಲ್ಲಿ ಕಾಡುತ್ತಿರುವ ಓಮಿಕ್ರಾನ್ ಪ್ರಶ್ನಗಳಿಗೆ ಕೇಂದ್ರದ ಉತ್ತರ

ನವದೆಹಲಿ(ಡಿ.03): ಕರ್ನಾಟಕದಲ್ಲಿ(Karnataka) ಎರಡು ಓಮಿಕ್ರಾನ್(Omicron) ಪ್ರಕರಣ ಪತ್ತೆಯಾಗುವುದರೊಂದಿಗೆ ಭಾರತಕ್ಕೆ ಆತಂಕಕಾರಿ ವೈರಸ್ ಕಾಲಿಟ್ಟಿದೆ. ವೈರಸ್ ಹರಡದಂತೆ ತಡೆಯಲು ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳು ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಿದೆ. ಎರಡು ಓಮಿಕ್ರಾನ್ ಪ್ರಕರಣ ಖಚಿತವಾಗಿರುವ ಕಾರಣ ಜನರ ಆತಂಕವೂ ಹೆಚ್ಚಾಗಿದೆ. ಆತಂಕ, ಅನುಮಾನಗಳು ಹೆಚ್ಚಾಗಿದೆ. ಹೀಗಾಗಿ ರೂಪಾಂತರಿ ಓಮಿಕ್ರಾನ್ ವೈರಸ್ ಕುರಿತು ಪದೇ ಪದೇ ಕೇಳಲಾಗುತ್ತಿರುವ ಪ್ರಶ್ನೆಗಳಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ(Health and Family Welfare) ಇಲಾಖೆ  ಉತ್ತರಿಸಿದೆ. 

ಓಮಿಕ್ರಾನ್ ವೈರಸ್ ಎಂದರೇನು?  ರೂಪಾಂತರಿ  ಆಂತಕ (VOC) ಯಾಕಾಗುತ್ತಿದೆ?
ದಕ್ಷಿಣ ಆಫ್ರಿಕಾದಲ್ಲಿ(South Africa) 2021ರ ನವೆಂಬರ್ 24ರಂದು ಪತ್ತೆಯಾದ ಹೊಸ ರೂಪಾಂತರಿ ಸಾರ್ಸ್ COV-2 ಗೆ ಬಿ.1.1.529 ಅಥವಾ ಓಮಿಕ್ರಾನ್ (ಗ್ರೀಕ್ ಅಕ್ಷರಮಾಲೆಯ ಆಲ್ಫಾ, ಬೀಟಾ, ಡೆಲ್ಟಾ ಇತ್ಯಾದಿಗಳ ರೀತಿ) ಎಂದು ಕರೆಯಲಾಗುತ್ತಿದೆ. ಈ ರೂಪಾಂತರಿ ಬಹಳಷ್ಟು ಬಾರಿ ರೂಪಾಂತರ ಹೊಂದಿದೆ. ವಿಶೇಷವಾಗಿ ವೈರಲ್ ಸ್ಪೈಕ್ ಪ್ರೋಟೀನ್ ನಲ್ಲಿ 30ಕ್ಕೂ ಹೆಚ್ಚು ಸಲ ರೂಪಾಂತರಗೊಂಡಿದೆ.  ಮುಖ್ಯವಾಗಿ ರೋಗ ನಿರೋಧಕ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡಿದೆ. ಒಮಿಕ್ರೊನ್ ನಲ್ಲಿನ ರೂಪಾಂತರ ಸಂಗ್ರಹಗಳನ್ನು ನೀಡಲಾಗಿದೆ, ಇದು ಮೊದಲು ಪ್ರತ್ಯೇಕವಾಗಿ ಹೆಚ್ಚಿದ ಸೋಂಕು ಮತ್ತು ಅಥವಾ ರೋಗ ನಿರೋಧಕ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲಿದೆ. ದಕ್ಷಿಣ ಆಫ್ರಿಕಾದಲ್ಲಿ ಇದ್ದಕ್ಕಿದ್ದಂತೆಯೇ ಪಾಸಿಟಿವ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ(WHO) ಓಮಿಕ್ರಾ  ಆತಂಕಕಾರಿ ರೂಪಾಂತರಿ(ವಿಒಸಿ) ಎಂದು ಘೋಷಣೆ ಮಾಡಿತು.

Omicron Variant: ಬೆಂಗ್ಳೂರಲ್ಲಿ ಇಬ್ಬರಿಗೆ ಓಮಿಕ್ರಾನ್ ದೃಢ, ಐವರಿಗೆ ಶಂಕೆ

ಸದ್ಯ ಬಳಕೆ ಮಾಡುತ್ತಿರುವ ಪರೀಕ್ಷಾ ವಿಧಾನಗಳಿಂದ ಓಮಿಕ್ರಾನ್ ಪತ್ತೆ ಹೆಚ್ಚಬಹುದೇ?
SARS-CoV- 2 ರೂಪಾಂತರಕ್ಕಾಗಿ ಹೆಚ್ಚು ಒಪ್ಪಿತ ಮತ್ತು ಸಾಮಾನ್ಯವಾಗಿ ಬಳಕೆಯಲ್ಲಿರುವ ವಿಧಾನವೆಂದರೆ RT-PCR ವಿಧಾನ. ಈ ವಿಧಾನದಲ್ಲಿ ವೈರಾಣುವಿನಲ್ಲಿರುವ ನಿರ್ದಿಷ್ಟ ಜೀನ್ ಗಳನ್ನು ಅಂದರೆ ಸ್ಪೈಕ್ (ಎಸ್) ಎನ್ವಲಪ್ಪಡ್ (ಇ) ಮತ್ತು ನ್ಯೂಕ್ಲಿಯೋಕ್ಯಾಪ್ಸಿಡ್ (ಎನ್ ) ಇತ್ಯಾದಿ ವೈರಾಣುಗಳು ಇರುವಿಕೆಯನ್ನು ದೃಢಪಡಿಸುತ್ತದೆ.  ಆದರೂ ಒಮಿಕ್ರಾನ್ ಸಂದರ್ಭದಲ್ಲಿ  S ವಂಶವಾಹಿ ಹೆಚ್ಚು ರೂಪಾಂತರಗೊಂಡಿರುವುದರಿಂದ ಕೆಲವು ಪ್ರಮೈರ್ ಗಳು S ವಂಶವಾಹಿಯ ಅನುಪಸ್ಥಿತಿಯನ್ನು ಸೂಚಿಸುವ ಫಲಿತಾಂಶಗಳಿಗೆ ಕಾರಣವಾಗಬಹುದು (ಅದನ್ನು ಎಸ್ ಜೀನ್ ಡ್ರಾಪ್ ಔಟ್ ಎಂದು ಕರೆಯಲಾಗುತ್ತದೆ). ಈ ನಿರ್ದಿಷ್ಟ ಎಸ್ ಜೀನ್ ಡ್ರಾಪ್ ಔಟ್ ಜೊತೆಗೆ ಇತರ ವೈರಾಣು ವಂಶವಾಹಿ ಪತ್ತೆಯನ್ನು ಓಮಿಕ್ರಾನ್ ರೋಗ ನಿರ್ಣಯದ ಗುಣಲಕ್ಷಣವನ್ನಾಗಿ ಬಳಕೆ ಮಾಡಬಹುದು. ಆದರೆ ಓಮಿಕ್ರಾನ್ ರೂಪಾಂತರವನ್ನು ಅಂತಿಮವಾಗಿ ದೃಢಪಡಿಸಲು ಓಮಿಕ್ರಾನ್ ರೂಪಾಂತರದ ಜಿನೋಮ್ ಸೀಕ್ವೆನ್ಸಿಂಗ್ ಅಗತ್ಯವಿದೆ.

ಹೊಸ ಆಂತಕಕಾರಿ ರೂಪಾಂತರಿ ಬಗ್ಗೆ ಎಷ್ಟು ಕಾಳಜಿ ವಹಿಸಬೇಕು?
ಕೋವಿಡ್-19 ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ ಪ್ರಸರಣ ಅಥವಾ ಹಾನಿಕಾರಕ ಬದಲಾವಣೆಯು ಹೆಚ್ಚಾದಾಗ ಮೌಲ್ಯಮಾಪನದ ನಂತರ WHO ರೂಪಾಂತರವನ್ನು VOC ಎಂದು ಘೋಷಿಸಿತು. ವೈರಾಣುಗಳ ಹೆಚ್ಚಳ ಮತ್ತು ರೋಗ ನಿರೋಧಕದಿಂದ ತಪ್ಪಿಸಿಕೊಳ್ಳುವುದು, ಕೋವಿಡ್-19 ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ ಪ್ರಾಥಮಿಕ ಸಾಕ್ಷಿಯಾಗಿ ಭಾರಿ ಬದಲಾವಣೆ, ಮರು ಸೋಂಕು ಪ್ರಕರಣಗಳ ಹೆಚ್ಚಳವಾಗುವುದು ಸೇರಿದೆ ಅಥವಾ ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕ್ರಮಗಳು ಅಥವಾ ಲಭ್ಯವಿರುವ ರೋಗ ನಿರ್ಣಯಗಳು, ಲಭ್ಯವಿರುವ ರೋಗ ಪತ್ತೆ, ಲಸಿಕೆ ಹಾಗೂ ಚಿಕಿತ್ಸೆಗಳು.

Omicron Threat: ಕೊರೋನಾ ರೂಪಾಂತರಿ, ಕರ್ನಾಟಕದಲ್ಲಿ ಹೊಸ ರೂಲ್ಸ್​ ಜಾರಿ

ಹೆಚ್ಚಿದ ರೂಪಾಂತರಗಳು, ಹೆಚ್ಚಿನ ಪ್ರಸರಣಾ ಮತ್ತು ಪ್ರತಿರಕ್ಷಣಾ  ತಪ್ಪಿಸಿಕೊಳ್ಳುವಿಕೆಯ ಅವರ ನಿರೀಕ್ಷಿತ ಲಕ್ಷಣಗಳು ಮತ್ತು ಹೆಚ್ಚಿನ ಮರು ಸೋಂಕು ಪ್ರಕರಣಗಳಂತಹ ಕೋವಿಡ್-19 ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿನ ಹಾನಿಕಾರಕ ಬದಲಾವಣೆಯ ಪ್ರಾಥಮಿಕ ಪುರಾವೆಗಳ ಆಧಾರದ ಮೇಲೆ ಒಮಿಕ್ರೊನ್ ಅನ್ನು ಆಂತಕಕಾರಿ ರೂಪಾಂತರಿ ಎಂದು ಪ್ರಮುಖವಾಗಿ ಒತ್ತು ನೀಡಿ ಘೋಷಿಸಲಾಗಿದೆ. ಹೆಚ್ಚಿನ ಉಪಶಮನ  ಮತ್ತು  ರೋಗ ನಿರೋಧಕದ ತಪ್ಪಿಸಿಕೊಳ್ಳುವಿಕೆಗೆ ಖಚಿತ ಪುರಾವೆಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.

ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು?
ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಮತ್ತು ಕ್ರಮಗಳು ಮೊದಲಿನಂತೆಯೇ ಇರುತ್ತವೆ. ನೀವು ಸರಿಯಾದ ರೀತಿಯಲ್ಲಿ ಮಾಸ್ಕ್ (ಮುಖಗವಸು) ಧರಿಸುವುದು ಅತ್ಯಗತ್ಯ, ಎರಡು ಡೋಸ್ ಲಸಿಕೆ ಪಡೆಯಿರಿ (ಒಂದು ವೇಳೆ ಲಸಿಕೆ ಪಡೆದಿಲ್ಲವಾದರೆ), ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಎಷ್ಟು ಸಾಧ್ಯವೋ ಅಷ್ಟು ಉತ್ತಮ ಗಾಳಿಯ ವ್ಯವಸ್ಥೆಯನ್ನು ಕಾಯ್ದುಕೊಳ್ಳಿ.

ಭಾರತಕ್ಕೆ ಮೂರನೇ ಅಲೆ ವಕ್ಕರಿಸುತ್ತದೆಯೇ?
ದಕ್ಷಿಣ ಆಫ್ರಿಕಾದ ಹೊರಗಿನ ದೇಶಗಳಲ್ಲಿ ಒಮಿಕ್ರೊನ್ ಪ್ರಕರಣಗಳು ಹೆಚ್ಚಾಗಿ ಕಾಣಿಸುತ್ತಿವೆ ಮತ್ತು ಅದರ ಗುಣಲಕ್ಷಣಗಳನ್ನು ಗಮನಿಸಿದರೆ ಭಾರತ ಸೇರಿದಂತೆ ಹೆಚ್ಚಿನ ದೇಶಗಳಿಗೆ ಹರಡುವ ಸಾಧ್ಯತೆ ಇದೆ. ಆದರೆ ಪ್ರಕರಣಗಳ ಏರಿಕೆ ಪ್ರಮಾಣ, ಪ್ರಕರಣ ಹೆಚ್ಚಳದ ತೀವ್ರತೆ ಮತ್ತು ಉಂಟಾಗುವ ರೋಗದ ತೀವ್ರತೆ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಅಲ್ಲದೆ, ಭಾರತದಲ್ಲಿ ಲಸಿಕೀಕರಣ ಅತ್ಯಂತ ವೇಗವಾಗಿ ಸಾಗುತ್ತಿದೆ ಮತ್ತು ಹೆಚ್ಚಿನ ಸೆರೋ ಪಾಸಿಟಿವಿಟಿಯಿಂದ ಸಾಬೀತಾಗಿರುವಂತೆ ಡೆಲ್ಟಾ ರೂಪಾಂತರಕ್ಕೆ ಹೆಚ್ಚಿನ ಮಟ್ಟಿಗೆ ಒಡ್ಡಿಕೊಂಡರೆ ರೋಗದ ತೀವ್ರತೆಯು ಕಡಿಮೆ ಎಂದು ನಿರೀಕ್ಷಿಸಲಾಗುತ್ತಿದೆ. ಆದರೂ ವೈಜ್ಞಾನಿಗಳು ಪುರಾವೆಗಳನ್ನೂ ಇನ್ನೂ ಬೆಳವಣಿಗೆ ಹೊಂದುತ್ತಿವೆ.

ಹಾಲಿ ಇರುವ ಲಿಸಿಕೆ ಒಮಿಕ್ರೊನ್ ವಿರುದ್ಧ ಕಾರ್ಯನಿರ್ವಹಿಸಲಿದೆಯೇ?
ಹಾಲಿ ಬಳಸುತ್ತಿರುವ ಲಸಿಕೆಗಳು ಓಮಿಕ್ರಾನ್ ವಿರುದ್ಧ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ, ಸ್ಪೈಕ್ ಜೀನ್ ನಲ್ಲಿ ವರದಿ ಮಾಡಲಾದ ಕೆಲವು ರೂಪಾಂತರಗಳು ಅಸ್ತಿತ್ವದಲ್ಲಿರುವ ಲಸಿಕೆಗಳ ಪರಿಣಾಮವನ್ನು ತಗ್ಗಿಸಬಹುದು. ಆದರೆ ಲಸಿಕೆ ರಕ್ಷಣೆಯು ಪ್ರತಿಕಾಯಗಳು ಸೆಲ್ಯುಲಾರ್ ಪ್ರತಿರಕ್ಷೆಯ ಮೂಲಕವೂ ಆಗಿದ್ದು, ಅದು ತುಲನಾತ್ಮಕವಾಗಿ ಉತ್ತಮ ರಕ್ಷಣೆ ಒದಗಿಸುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.  ಆದ್ದರಿಂದ ಲಸಿಕೆಗಳು ಈಗಲೂ ಗಂಭೀರ ಕಾಯಿಲೆಗಳ ವಿರುದ್ಧ ಉತ್ತಮ ರೀತಿಯಲ್ಲಿ ರಕ್ಷಣೆಯನ್ನು ಒದಗಿಸುತ್ತದೆ ಮತ್ತು ಲಭ್ಯವಿರುವ ಲಸಿಕೆ ಪಡೆಯುವುದು ನಿರ್ಣಾಯಕವಾಗಿದೆ. ಹಾಗಾಗಿ ಅರ್ಹರೆಲ್ಲರೂ ಯಾರು ಲಸಿಕೆ ಪಡೆದಿಲ್ಲವೋ ಅವು ಲಸಿಕೆ ಪಡೆಯುವುದು ಹೆಚ್ಚು ಸೂಕ್ತ.

ಭಾರತ ಹೇಗೆ ಪ್ರತಿಕ್ರಿಯಿಸುತ್ತಿದೆ?
ಭಾರತ ಸರ್ಕಾರವು ಪರಿಸ್ಥಿತಿಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಕಾಲ ಕಾಲಕ್ಕೆ ಸೂಕ್ತ ಮಾರ್ಗಸೂಚಿಗಳನ್ನು ನೀಡುತ್ತಿದೆ. ಈ ಮಧ್ಯೆ, ವೈಜ್ಞಾನಿಕ ಮತ್ತು ವೈದ್ಯಕೀಯ ಸಮುದಾಯವು ರೋಗ ಪತ್ತೆ ವಿಧಾನವನ್ನು ಅಭಿವೃದ್ಧಿಪಡಿಸಲು ಮತ್ತು ಅದನ್ನು ಪರೀಕ್ಷೆಗಳಿಗೆ ನಿಯೋಜಿಸಲು, ಜಿನೋಮ್ ಸರ್ವೇಲೆನ್ಸ್ ಕೈಗೊಳ್ಳಲು, ವೈರಾಣು ಮತ್ತು ಸಾಂಕ್ರಾಮಿಕಗಳ ಗುಣಲಕ್ಷಣಗಳ ಪುರಾವೆಗಳನ್ನು ಕಂಡುಹಿಡಿಯಲು ಮತ್ತು ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲು ಸಜ್ಜಾಗಿದೆ.

ಮತ್ತೆ ರೂಪಾಂತರಿಗಳು ಬರಬಹುದೇ?
ರೂಪಾಂತರಗಳು ವಿಕಸನದ ಸಾಮಾನ್ಯ ಭಾಗವಾಗಿದೆ ಮತ್ತು ಎಲ್ಲಿಯವರೆಗೆ ವೈರಾಣು ಸೋಂಕು ಹರಡುತ್ತದೆಯೋ, ಎಲ್ಲಿಯವರೆಗೆ ಅದು ಪುನರಾವರ್ತಿಸಲು ಮತ್ತು ಪ್ರಸರಣ ಮಾಡಲು ಸಾಧ್ಯವಿರುತ್ತದೆಯೋ ಅಲ್ಲಿಯವರೆಗೆ ವಿಕಸನಗೊಳ್ಳುತ್ತಲೇ ಇರುತ್ತವೆ. ಎಲ್ಲ ರೂಪಾಂತರಿಗಳು ಅಪಾಯಕಾರಿಯಲ್ಲ, ಬಹುತೇಕವು ಆ ರೀತಿ ಇರುವುದಿಲ್ಲ, ಅದರೆ ನಾವು ಅದನ್ನು ಗಮನಿಸಿರುವುದಿಲ್ಲ.  ಜನರು ಹೆಚ್ಚು ಸೂಕ್ಷ್ಮವಾಗಿದ್ದಾಗ ಮತ್ತು ಹೆಚ್ಚು ಸಾಂಕ್ರಾಮಿಕಕ್ಕೆ ತೆರೆದುಕೊಳ್ಳುತ್ತಿದ್ದಾಗ ಮಾತ್ರ ಅಂತಹವರಿಗೆ ಪ್ರಾಮುಖ್ಯತೆ ಸಿಗಲಿದೆ. ರೂಪಾಂತರಿಗಳ ಉತ್ಪಾದನೆಯನ್ನು ತಪ್ಪಿಸುವ ಪ್ರಮುಖ ಹಂತವೆಂದರೆ ಸೋಂಕಿನ ಸಂಖ್ಯೆಯನ್ನು ಕಡಿಮೆ ಮಾಡುವುದು.

click me!