Omicron virus:ಸೌತ್ ಆಫ್ರಿಕಾದಿಂದ ಜೈಪುರಕ್ಕೆ ಬಂದ 9 ಮಂದಿಗೆ ಕೊರೋನಾ, ಓಮಿಕ್ರಾನ್ ಪರೀಕ್ಷೆಗೆ ಮಾದರಿ ರವಾನೆ!

By Suvarna NewsFirst Published Dec 3, 2021, 8:08 PM IST
Highlights
  • ಭಾರತದಲ್ಲಿ ಹೆಚ್ಚಿದ ಓಮಿಕ್ರಾನ್ ವೈರಸ್ ಆತಂಕ
  • ಜೈಪುರಕ್ಕೆ ಆಗಮಿಸಿದ 9 ಮಂದಿಯಲ್ಲಿ ಕೊರೋನಾ ಪತ್ತೆ
  • ವರದಿಗಾಗಿ ಕಾಯುತ್ತಿದೆ ಕರ್ನಾಟಕ, ರಾಜಸ್ಥಾನ, ದೆಹಲಿ, ಮಹಾರಾಷ್ಟ್ರ

ಜೈಪುರ(ಡಿ.03): ಭಾರತದಲ್ಲಿ ಓಮಿಕ್ರಾನ್ ವೈರಸ್(Omicron virus) ಆತಂಕ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಎರಡು ಓಮಿಕ್ರಾನ್ ಪ್ರಕರಣ ವರದಿಯಾದ ಬೆನ್ನಲ್ಲೇ ತೀವ್ರ ನಿಗಾ ವಹಿಸಲು ಕೇಂದ್ರ ಎಚ್ಚರಿಸಿದೆ. ಇದರಂತ ಕರ್ನಾಟಕದಲ್ಲಿ(Karnataka) ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ರಾಜಸ್ಥಾನದ ಜೈಪುರಕ್ಕೆ ಬಂದಿಳಿದ ಸೌತ್ ಆಫ್ರಿಕಾದ(South Africa) ಪ್ರಯಾಣಿಕರ ಪೈಕಿ 9 ಮಂದಿಗೆ ಕೊರೋನಾ ಪಾಸಿಟೀವ್(Coronavirus) ದೃಢಪಟ್ಟಿದೆ. ಈ 9 ಮಂದಿಯ ಮಾದಿರಿಯನ್ನು ಓಮಿಕ್ರಾನ್ ವೈರಸ್ ಪತ್ತೆಗೆ ಕಳುಹಿಸಲಾಗಿದೆ.

ಸೌತ್ ಆಫ್ರಿಕಾದಿಂದ ಜೈಪುರಕ್ಕೆ(Jaipur) ಆಗಮಿಸಿದ ಸೌತ್ ಆಫ್ರಿಕಾ ಪ್ರಯಾಣಿಕರನ್ನು(international travellers) ವಿಮಾನ ನಿಲ್ದಾಣದಲ್ಲಿ(Airport) ಟೆಸ್ಟ್ ಮಾಡಲಾಗಿತ್ತು. ಕೊರೋನಾ ಈ ವೇಳೆ  ಕೊರೋನಾ ಪಾಸಿಟೀವ್ ಪತ್ತೆಯಾಗಿದೆ. ಹೀಗಾಗಿ 9 ಮಂದಿಯನ್ನು ರಾಜಸ್ಥಾನ(Rajasthan) ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ 9 ಮಂದಿಯ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದೆ. ಜೈಪುರದ ಸವಾಯಿ ಮಾನ್‌ಸಿಂಗ್ ಆಸ್ಪತ್ರೆಗೆ ಮಾದರಿ ರವಾನೆ ಮಾಡಲಾಗಿದೆ. ಇದೀಗ ವರದಿಗಾಗಿ ರಾಜಸ್ಥಾನ ಕಾಯುತ್ತಿದೆ.

Omicron Threat: ಕೊರೋನಾ ರೂಪಾಂತರಿ, ಕರ್ನಾಟಕದಲ್ಲಿ ಹೊಸ ರೂಲ್ಸ್​ ಜಾರಿ

ಪ್ರಯಾಣಿಕರು ಅವರ ಕುಟುಂಬಸ್ಥರು ಸೇರಿದಂತೆ 14ಕ್ಕೂ ಮಾದರಿ ಪಡೆದು ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 9 ಮಂದಿಗೆ ಕೊರೋನಾ ಪಾಸಿಟೀವ್ ದೃಢಪಟ್ಟಿದೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ ನರೋತ್ತಮ್ ಶರ್ಮಾ ಹೇಳಿದ್ದಾರೆ. 

ಸೌತ್ ಆಫ್ರಿಕಾ, ಬೋಟ್ಸ್‌ವನಾ ಸೇರಿದಂತೆ 24 ದೇಶಗಳಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿತ್ತು. ಓಮಿಕ್ರಾನ್ ಪತ್ತೆಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಅಲರ್ಟ್ ಆಗಿತ್ತು. ವಿದೇಶದಿಂದ ಅದರಲ್ಲೂ ಹೈ ರಿಸ್ಕ್ ದೇಶಗಳಿಂದ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿತ್ತು. ಕೊರೋನಾ ಲಸಿಕೆ ಸರ್ಟಿಫಿಕೇಟ್, ಆರ್‌ಟಿ ಪಿಸಿಆರ್ ವರದಿ ಇದ್ದರೂ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಕೊರೋನಾ ಪರೀಕ್ಷೆ ಕಡ್ಡಾಯ ಮಾಡಿತ್ತು. ಕ್ವಾಂರೈಟನ್ , ಐಸೋಲೇಶನ್ ಸೇರಿದಂತೆ ಎಲ್ಲಾ ಕಠಿಣ ನಿಯಮ ಜಾರಿಗೊಳಿಸಿತ್ತು.

Omicron Variant: ಬೆಂಗ್ಳೂರಲ್ಲಿ ಇಬ್ಬರಿಗೆ ಓಮಿಕ್ರಾನ್ ದೃಢ, ಐವರಿಗೆ ಶಂಕೆ

ಕಠಿಣ ನಿಯಮ, ಪರೀಕ್ಷೆ ಸೇರಿದಂತೆ ಕೊಂಚ ನಿರಾಳರಾಗಿದ್ದ ಭಾರತಕ್ಕೆ ಕರ್ನಾಟಕ ಶಾಕ್ ನೀಡಿತ್ತು. ಎರಡು ಓಮಿಕ್ರಾನ ಪ್ರಕರಣ ಬೆಂಗಳೂರಿನಲ್ಲಿ ಪತ್ತೆಯಾಗಿತ್ತು. ಸೌತ್ ಆಫ್ರಿಕಾದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಬ್ಬರಿಗೆ ಓಮಿಕ್ರಾನ್ ಸೋಂಕು ತಗುಲಿರುವುದನ್ನು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿತ್ತು. ಈ ವರದಿ ಭಾರತದ ಆತಂಕ ಹೆಚ್ಚಿಸಿತು. 

ತಕ್ಷಣವೇ ಕರ್ನಾಟಕದಲ್ಲಿ ಕಠಿಣ ನಿಯಮ ಜಾರಿಗೊಳಿಸಲಾಗಿದೆ ಇನ್ನು ಇಬ್ಬರ ಪೈಕಿ ಓರ್ವ ಈಗಾಗಲೇ ದುಬೈ ಸೇರಿಕೊಂಡಿದ್ದರೆ, ಮತ್ತೊರ್ವ ಬೆಂಗಳೂರಿನ ಆಸ್ಪತ್ರೆಯಲ್ಲಿ ಐಸೋಲೇಶನ್ ಆಗಿದ್ದಾರೆ. ಇತ್ತ ಇವರ ಕುಟುಂಬಸ್ಥರು, ಸಂಪರ್ಕಿತರನ್ನು ಪರೀಕ್ಷೆ ಒಳಪಡಿಸಲಾಗಿದೆ. ಇದರಲ್ಲಿ ಐವರಿಗೆ ಕೊರೋನಾ ದೃಢಪಟ್ಟಿದೆ. ಹೀಗಾಗಿ ಈ ಐವರ ಮಾದರಿಯನ್ನು ಜಿನೋಮ್ ಸೀಕ್ವೆನ್ಸ್‌ ಪರೀಕ್ಷೆಗೆ ಕಳುಹಿಸಲಾಗಿದೆ. 

ಇದೀಗ ರಾಜಸ್ಥಾನದಲ್ಲಿ ಸೌತ್ ಅಫ್ರಿಕಾ ಪ್ರಯಾಣಿಕರಲ್ಲಿ ಕೊರೋನಾ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ. ಇನ್ನು ದೆಹಲಿ ಹಾಗೂ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕೊರೋನಾ ಲಕ್ಷಣ ಕಾಣಿಸಿಕೊಂಡಿರುವ ಕೆಲವರ ಮಾದರಿಯನ್ನು ಜಿನೋಮ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಲಾಗಿದೆ. ಇದೀಗ ಕರ್ನಾಟಕ, ರಾಜಸ್ಥಾನ, ಮುಂಬೈ, ದೆಹಲಿ ಜಿನೋಮ್ ಸೀಕ್ವೆನ್ಸ್ ವರದಿಗೆ ಕಾಯುತ್ತಿದೆ.

ರಾಜಸ್ಥಾನದಲ್ಲಿ 213 ಸಕ್ರೀಯ ಕೊರೋನಾ ಪ್ರಕರಣಗಳಿವೆ. ಇದರಲ್ಲಿ 114 ಪ್ರಕರಣಗಳು ಜೈಪುರ ನಗರದಲ್ಲೇ ಇದೆ. ಹೀಗಾಗಿ ರಾಜಸ್ಥಾನದಲ್ಲಿ ಆತಂಕ ಹೆಚ್ಚಾಗುತ್ತಿದೆ.ಇತ್ತ ಕರ್ನಾಟಕದಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೇರಳದಿಂದ ಆಗಮಿಸಿದ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಹಲವು ಕಾಲೇಜುಗಳನ್ನು ಬಂದ್ ಮಾಡಲಾಗಿದೆ.

click me!