ಶಸ್ತ್ರಾಸ್ತ್ರಗಳಲ್ಲಿ ಪ್ರಬಲವಾಗಿರುವ ರಷ್ಯಾದೊಂದಿಗೆ ಉಕ್ರೇನ್ ಏಕಾಂಗಿಯಾಗಿ ಹೋರಾಡುತ್ತಿದೆ. ಉಕ್ರೇನ್‌ನ ನಾಗರಿಕ ಪ್ರದೇಶಗಳ ಮೇಲೂ ರಷ್ಯಾ ಕ್ಷಿಪಣಿ ದಾಳಿಗಳನ್ನು ನಡೆಸಿದ್ದು, ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಿದೆ. ಈ ಮಧ್ಯೆ ರಷ್ಯಾ ದೇಶದ ಧ್ವಜವನ್ನು ಹೊದ್ದುಕೊಂಡಿರುವ ಯುವಕ ಹಾಗೂ ಉಕ್ರೇನ್ ಧ್ವಜವನ್ನು ಹೊದ್ದುಕೊಂಡಿರುವ ಯುವತಿ ಒಬ್ಬರಿಗೊಬ್ಬರು ಮುಖ ಮಾಡಿಕೊಂಡು ಜೊತೆಗೆ ನಿಂತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ನೆಟ್ಟಿಗರು ಯುದ್ಧ ನಿಲ್ಲಿಸಿ ಪರಸ್ಪರ ಪ್ರೀತಿಸಿ ಎಂದು ಎರಡು ದೇಶಗಳಿಗೆ ಮನವಿ ಮಾಡುತ್ತಿದ್ದಾರೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಮತ್ತು ಉಭಯ ದೇಶಗಳ ನಡುವೆ ನಡೆಯುತ್ತಿರುವ ಮಿಲಿಟರಿ ಸಂಘರ್ಷದ ಹಿನ್ನೆಲೆಯಲ್ಲಿ, ಈ ಫೋಟೋವೂ ವಿಶೇಷ ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದು ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಇದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಸೇರಿದಂತೆ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗಂತ ಇದು ಇತ್ತೀಚಿನ ಫೋಟೋ ಅಲ್ಲ. ಮೂರು ವರ್ಷದ ಹಿಂದೆ ತೆಗೆದಿರುವ ಫೋಟೋ. ದಿ ವಾಷಿಂಗ್ಟನ್ ಪೋಸ್ಟ್ ಪ್ರಕಾರ ಜೂಲಿಯಾನಾ ಕುಜ್ನೆಟ್ಸೊವಾ (Juliana Kuznetsova) (ಛಾಯಾಚಿತ್ರದಲ್ಲಿರುವ ಮಹಿಳೆ) ಮತ್ತು ಅವರು ಮದುವೆಯಾಗಬೇಕಿದ್ದ ಹುಡುಗ 2019 ರಲ್ಲಿ ಪೋಲೆಂಡ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ತೆಗೆದ ಫೋಟೋ ಇದಾಗಿದೆ. 2019ರಲ್ಲಿಯೂ ಈ ಫೋಟೋ ವೈರಲ್ ಆಗಿತ್ತು.
ಇತ್ತ ರಷ್ಯಾ ಆಕ್ರಮಣದಿಂದಾಗಿ ಉಕ್ರೇನ್ ಅಕ್ಷರಶಃ ನಲುಗುತ್ತಿದೆ. ರಷ್ಯಾ ಸೇನೆಯ ಪ್ರವೇಶವನ್ನು ತಡೆಯಲು ಉಕ್ರೇನ್ ಪ್ರತಿರೋಧ ಒಡ್ಡಿದೆ. ಕೀವ್ ಗಡಿಯಲ್ಲಿ ಉಕ್ರೇನ್ ಸೇನೆ ಬ್ರಿಡ್ಜ್ ಸ್ಫೋಟಿಸಿದೆ. ರಷ್ಯಾದ ಕ್ಷಿಪಣಿ ದಾಳಿಗೆ ಸಾಕಷ್ಟು ಜನನಿಬಿಡ ಪ್ರದೇಶಗಳು ಹಾನಿಗೀಡಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈಗಾಗಲೇ ರಷ್ಯಾ, ಉಕ್ರೇನ್ ರಾಜಧಾನಿ ಕೀವ್‌ನ್ನು ವಶಪಡಿಸಿಕೊಂಡಿದೆ. ರಷ್ಯಾ ದಾಳಿ ಮಾಡಲು ಆರಂಭಿಸಿ 96 ಗಂಟೆಗಳು ಕಳೆದಿದ್ದರೂ, ಉಕ್ರೇನ್ ನೆರವಿಗೆ ಯಾರೂ ಧಾವಿಸುತ್ತಿಲ್ಲ. ನಾನು 27 ದೇಶಗಳ ಮುಖ್ಯಸ್ಥರಿಗೆ ಕರೆ ಮಾಡಿದರೂ, ಯಾರೂ ನೆರವಿಗೆ ಧಾವಿಸುತ್ತಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೋಲೋಡಿಮಿರ್ ಝೆಲೆನ್ಸಿ ಅಸಹಾಯಕತೆ ತೋಡಿಕೊಂಡಿದ್ದಾರೆ. ಹೀಗಾಗಿ ಬಲಿಷ್ಠ ರಷ್ಯಾ ಸುಲಭವಾಗಿ ಉಕ್ರೇನ್‌ನ್ನು ವಶಪಡಿಸಿಕೊಳ್ಳಲಿದೆ.
Russia Ukraine War: 27 ದೇಶಗಳ ಮುಖ್ಯಸ್ಥರಿಗೆ ಕರೆ ಮಾಡಿದರೂ ನೆರವಿಗೆ ಧಾವಿಸುತ್ತಿಲ್ಲ: ಝೆಲೆನ್ಸ್‌ಸ್ಕೀ
ಈ ಯುದ್ಧದಿಂದಾಗಿ ಉಕ್ರೇನ್‌ನ 137 ಸೈನಿಕರು ಹಾಗೂ 18 ನಾಗರಿಕರು ಸಾವನ್ನಪ್ಪಿದ್ದಾರೆ. ಜೊತೆಗೆ 11 ವಾಯುನೆಲೆ ಸೇರಿ ಉಕ್ರೇನ್‌ನ 74 ಸೇನಾನೆಲೆಗಳನ್ನು ಧ್ವಂಸಗೊಳಿಸಿದ್ದೇವೆ ಎಂದು ರಷ್ಯಾ ಹೇಳಿದೆ. ಮತ್ತೊಂದೆಡೆ ಉಕ್ರೇನ್ ತಾನು ರಷ್ಯಾದ 8 ವಿಮಾನಗಳನ್ನು ಹೊಡೆದುರುಳಿಸಿದ್ದು, ದಾಳಿಯಲ್ಲಿ ರಷ್ಯಾದ 50 ಯೋಧರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.
ರಷ್ಯಾದ ಈ ಅಪ್ರಚೋದಿತ ದಾಳಿಯನ್ನು ವಿಶ್ವ ಸಮುದಾಯ ಕಟುನುಡಿಗಳಲ್ಲಿ ಖಂಡಿಸಿದೆ. ಆದರೂ ಹಠ ಬಿಡದೆ ದಾಳಿ ಮುಂದುವರೆಸಿರುವ ರಷ್ಯಾ, ಕೇವಲ ವಾಯುನೆಲೆ, ಸೇನಾ ನೆಲೆಗಳನ್ನು ಮಾತ್ರ ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ರಷ್ಯಾದ ಟ್ಯಾಂಕರ್‌ಗಳು ಉಕ್ರೇನ್ ದೇಶವನ್ನು ಹಲವು ಗಡಿಗಳ ಮೂಲಕ ಪ್ರವೇಶ ಮಾಡಿದ್ದು, ರಾಜಧಾನಿ ಕೀವ್ ಸೇರಿದಂತೆ ಹಲವು ಆಯಕಟ್ಟಿನ ನಗರಗಳನ್ನು ವಶಪಡಿಸಿಕೊಳ್ಳುವತ್ತ ಮುಂದಡಿ ಇಟ್ಟಿದೆ.
Russia Ukraine Crisis: ಉಕ್ರೇನ್ ಬರೀ ದೇಶವಲ್ಲ, ಹೊಸ ಯಗದ ತಂತ್ರಜ್ಞಾನ ಕಂಪನಿಗಳ ಬೇರು!
ಉಕ್ರೇನ್ ಅಧ್ಯಕ್ಷ ಓಡಿ ಹೋಗುತ್ತಿದ್ದರೆ ಎಂದು ವದಂತಿ ಹಬ್ಬಿದ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೋಲೋಡಿಮಿರ್ ಝೆಲೆನ್ಸಿ, ಯುದ್ಧ ಬಿಟ್ಟು ನಾನು ಓಡಿ ಹೋಗಲ್ಲ, ನಾನು ಓಡಿ ಹೋಗುವೆನೆಂದು ವದಂತಿ ಹಬ್ಬಿದೆ. ನಾನು ಕೀವ್‌ನಲ್ಲೇ ಇದ್ದೇನೆ. ಈ ಯುದ್ಧದಲ್ಲಿ ನಾನೇ ಟಾರ್ಗೆಟ್. ನನ್ನನ್ನು ಕೊಂದು ಉಕ್ರೇನ್‌ನನ್ನು ರಾಜಕೀಯವಾಗಿ ಮುಗಿಸುವುದೇ ರಷ್ಯಾದ ಉದ್ದೇಶ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ