ಮಾರೋ ಉಸ್ಕೊ ಮಾರೋ ಅಂದ್ರ ಹರಿಯಾಣ ಸಿಎಂ: ರೊಚ್ಚಿಗೆದ್ದ ಎಎಪಿಗರು

Published : May 15, 2023, 04:08 PM ISTUpdated : May 15, 2023, 04:11 PM IST
ಮಾರೋ ಉಸ್ಕೊ ಮಾರೋ ಅಂದ್ರ ಹರಿಯಾಣ ಸಿಎಂ: ರೊಚ್ಚಿಗೆದ್ದ ಎಎಪಿಗರು

ಸಾರಾಂಶ

ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಆತ ಎಎಪಿ ಕಾರ್ಯಕರ್ತ ಆತನಿಗೆರಡು ಬಾರಿಸಿ ಹೊರಗೆ ಹಾಕಿ ಎಂದು ಸಿಎಂ ಹೇಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಸಿಎಂ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಂಢೀಗರ್: ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಆತ ಎಎಪಿ ಕಾರ್ಯಕರ್ತ ಆತನಿಗೆರಡು ಬಾರಿಸಿ ಹೊರಗೆ ಹಾಕಿ ಎಂದು ಸಿಎಂ ಹೇಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಸಿಎಂ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹರ್ಯಾಣದ ಸಿರ್ಸಾದಲ್ಲಿ ನಡೆದ 'ಜನ ಸಂವಾದ್‌' ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು,  ಜನ ಸಿಎಂ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ 'ಜನ ಸಂವಾದ್' ಕಾರ್ಯಕ್ರಮವೂ ರಾಜ್ಯದಲ್ಲಿ ನಡೆಯುವ ಜನತಾ ದರ್ಶನದಂತಹದ್ದೇ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದಲ್ಲಿ ಜನರು ತಮ್ಮ ಹಲವು ಸಮಸ್ಯೆಗಳನ್ನು ಮುಖ್ಯಮಂತ್ರಿಗಳೊಂದಿಗೆ ಹೇಳಿ ಪರಿಹಾರ ಪಡೆದುಕೊಳ್ಳಲು ಆಗಮಿಸುತ್ತಾರೆ. ಅಲ್ಲದೇ ಸಿಎಂ ಕೂಡ ಸ್ಥಳದಲ್ಲೇ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತಾರೆ.

ಹರ್ಯಾಣ ಸಿಎಂ ಖಟ್ಟರ್‌ ಕೃಷಿ ಕಾರ್ಯಕ್ರಮ ರೈತರಿಂದ ಧ್ವಂಸ, ಕಾರ್ಯಕ್ರಮ ರದ್ದು!

ಇಂತಹ ಕಾರ್ಯಕ್ರಮಕ್ಕೆ ಬಂದ ಯುವಕನನ್ನು ಸಿಎಂ ಖಟ್ಟರ್ ಥಳಿಸುವಂತೆ ಹೇಳಿದ್ದು, ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಒಂದು ಕಾರ್ಯಕ್ರಮದಲ್ಲಿ ಎಎಪಿ ಕಾರ್ಯಕರ್ತನನ್ನು ಥಳಿಸಿ ಹೊರಹಾಕುವಂತೆ ಭದ್ರತಾ ಸಿಬ್ಬಂದಿಗೆ ಸಿಎಂ ಹೇಳುತ್ತಿರುವುದು ಕಂಡು ಬಂದಿದೆ ಮತ್ತೊಂದರಲ್ಲಿ ಮಹಿಳೆಯೊಬ್ಬರು ಸಮಸ್ಯೆ ಹೇಳುತ್ತಿದ್ದಾರೆ ಆಕೆಯನ್ನು ಶಿಕ್ಷಕಿ ಎಂದು ವ್ಯಂಗ್ಯವಾಗಿ ಕರೆದಿದ್ದಾರೆ ಎನ್ನಲಾಗಿದೆ. ಈ ಎರಡು ಘಟನೆಗಳು ಸಿರ್ಸಾದಲ್ಲಿ (Sirsa) ನಡೆದ ಜನ ಸಂವಾದ್‌ದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಜನಸಂವಾದ್ ಒಂದರಲ್ಲಿ ಸಿಎಂ ಖಟ್ಟರ್ ಅವರು, ತಮ್ಮ ಸರ್ಕಾರವು ರಾಜ್ಯದಿಂದ ಮಾದಕ ವ್ಯಸನವನ್ನು ತೊಡೆದುಹಾಕಲು ಪ್ರತಿಯೊಂದು ಜಿಲ್ಲೆಯಲ್ಲೂ ಮಾದಕ ವ್ಯಸನ ಮುಕ್ತ ಕೇಂದ್ರಗಳನ್ನು (drug de-addiction centres) ತೆರೆಯಲಿದೆ ಎಂದು ಹೇಳಿದ್ದರು. ಯುವಕರಿಗೆ ಮಾರ್ಗದರ್ಶನ ನೀಡಿ ಅವರನ್ನು ಸರಿದಾರಿಗೆ ತರುವ ಉದ್ದೇಶದಿಂದ ಇಂತಹ ಕೇಂದ್ರಗಳನ್ನು ನಡೆಸಲು ಸಂತರು ಮತ್ತು ಗಣ್ಯ ವ್ಯಕ್ತಿಗಳನ್ನು ನೇಮಕ ಮಾಡಲಾಗುವುದು  ಎಂದಿದ್ದರು.  ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವುದು ಹೇಗೆ ಎಂಬ ಬಗ್ಗೆ ಸಲಹೆಗಳನ್ನು ನೀಡುವಂತೆ ಅವರು ಜನರಲ್ಲಿ ಕೇಳಿದ್ದರು.  

ತಲೆ ಕತ್ತರಿಸಿ ಹಾಕ್ತೀನಿ: ಬಿಜೆಪಿ ನಾಯಕಗೆ ಸಿಎಂ ಖಟ್ಟರ್‌ ಎಚ್ಚರಿಕೆ!

ಈ ವೇಳೆ ಮಾತನಾಡಲು ಎದ್ದು ನಿಂತ  ವ್ಯಕ್ತಿಯೊಬ್ಬರು ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಂತೆ ಖಟ್ಟರ್, ' ರಾಜನೀತಿ ಮತ್ ಕರ್ನೇ ದೋ ಇಸ್ಕೋ. ಯೇ ರಾಜನೀತಿ ಕರ್ನೇ ವಾಲಾ ಹೈ. ಆಮ್ ಆದ್ಮಿ ಪಾರ್ಟಿ ಕಾ ಕಾರ್ಯಕರ್ತ ಹೈ. ಇಸ್ಕೋ ಉತಾ ಕರ್ ಕೆ ಪಿಟಾಯಿ ಕರೋ ಔರ್ ಬಹಾರ್ ಫೆಂಕೋ (ಈ ವ್ಯಕ್ತಿ ರಾಜಕೀಯ ಮಾಡಲು ಬಿಡಬೇಡಿ. ಈವೆಂಟ್ ಅನ್ನು ರಾಜಕೀಯಗೊಳಿಸಲು ಅವರು ಇಲ್ಲಿಗೆ ಬಂದಿದ್ದಾರೆ. ಅವರು ಎಎಪಿ ಕಾರ್ಯಕರ್ತ. ಅವರಿಗೆರಡು  ಥಳಿಸಿ ಹೊರಹಾಕಿ) ಎಂದು ಹೇಳಿದ್ದಾರೆ. 

ಘಟನೆಯ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಶುರುವಾಗುತ್ತಿದ್ದಂತೆ ಸಿಎಂ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಹೇಳಿಕೆಗಳು ಸಿಎಂನಂತಹ ಹುದ್ದೆಯಲ್ಲಿರುವವರಿಗೆ ಸರಿ ಹೊಂದುವುದಿಲ್ಲ ಎಂದು ಎಎಪಿ ನಾಯಕ ಅನುರಾಗ್ ಧಂಢಾ (Anurag Dhanda) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 

ಪ್ರತಿಯೊಂದು ಜನಸಂವಾದ್ ಕಾರ್ಯಕ್ರಮದಲ್ಲಿ ಆಪ್ ಕಾರ್ಯಕರ್ತರು ನಿಮಗೆ ಪ್ರಶ್ನೆಗಳನ್ನು ಕೇಳುತ್ತಾರೆ. ನಿನ್ನೆ ನೀವು ನಮ್ಮ ಪಕ್ಷದ ಕಾರ್ಯಕರ್ತರನ್ನು ಸಿರ್ಸಾದಲ್ಲಿ ಬಂಧಿಸಿದ್ದೀರಿ, ಇಂದು ನೀವು ನಮ್ಮ ಪಕ್ಷದ ಕಾರ್ಯಕರ್ತರಿಗೆ ಡಬ್ವಾಲಿಯಲ್ಲಿ (Dabwali) ಪೊಲೀಸರಿಂದ ಹಲ್ಲೆ ಮಾಡಿದ್ದೀರಿ, ಎಎಪಿ ಕಾರ್ಯಕರ್ತರು ಲಾಠಿಗಳನ್ನು ಎದುರಿಸಲು ಅಥವಾ ಜೈಲಿಗೆ ಹೋಗಲು ಹೆದರುವುದಿಲ್ಲ ಎಂದು  ಧಂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಜನಸಂವಾದ್ ಕಾರ್ಯಕ್ರಮಗಳಲ್ಲಿ (Jan Samvad programmes) ಎಎಪಿ ಕಾರ್ಯಕರ್ತರು (AAP workers) ನಿಮಗೆ ಪ್ರಶ್ನೆಗಳನ್ನು ಕೇಳುವುದನ್ನು ಮುಂದುವರಿಸುತ್ತಾರೆ. ಜನರ ಪ್ರಶ್ನೆಗಳಿಗೆ ಉತ್ತರಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಜನಸಂವಾದವನ್ನು ನಿಲ್ಲಿಸಿ ಎಂದು ಅವರು ಆಗ್ರಹಿಸಿದರು. ಬಿಜೆಪಿಯ ಜನಸಂವಾದದ ಪ್ರಚಾರವನ್ನು ಮುಂದುವರಿಸಲು ಎಎಪಿ ಕಾರ್ಯಕರ್ತರು ಬಿಡುವುದಿಲ್ಲ,  ನಮ್ಮ ಪಕ್ಷದ ಕಾರ್ಯಕರ್ತರು ಸಭೆಗೆ ಹಾಜರಾಗುತ್ತಾರೆ ಮತ್ತು ಸಾರ್ವಜನಿಕ ಕಾಳಜಿಯ ವಿಷಯಗಳ ಬಗ್ಗೆ ಸಿಎಂ ಅವರನ್ನು ಪ್ರಶ್ನಿಸುತ್ತಾರೆ ಎಂದು ಅವರು ಹೇಳಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?