ವಯಸ್ಕ ಹುಡುಗಿಯೊಂದಿಗೆ ಸಮ್ಮತಿ ಲೈಂಗಿಕ ಕ್ರಿಯೆ ಅಪರಾಧವಲ್ಲ ಆದರೆ ಅನೈತಿಕ : ಅಲಹಾಬಾದ್ ಹೈಕೋರ್ಟ್!

By Suvarna News  |  First Published Oct 30, 2021, 4:18 PM IST

‌*ವಯಸ್ಕ ಹುಡುಗಿಯೊಂದಿಗೆ ಒಪ್ಪಿಗೆಯೊಂದಿಗೆ ಲೈಂಗಿಕ ಕ್ರಿಯೆ ಮಾಡುವುದು ಅಪರಾಧವಲ್ಲ
*ಸಹ ಆರೋಪಿಗಳೊಂದಿಗೆ ತನ್ನ ಗೆಳತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ 
*ಅತ್ಯಾಚಾರವೆಸಗಿದ್ದ ಆರೋಪಿಗಳ ಜಾಮೀನು ನಿರಾಕರಿಸುವಾಗ ಕೋರ್ಟ್ ಹೇಳಿಕೆ!


ಪ್ರಯಾಗ್‌ರಾಜ್ (ಅ. 30 ): ವಯಸ್ಕ ಹುಡುಗಿಯೊಂದಿಗೆ (Major Girl)ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಕಾನೂನು ಅನ್ವಯ ಅಪರಾಧವಲ್ಲ, ಆದರೆ ಅದು ಅನೈತಿಕ (Immoral) ಹಾಗೂ ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು (Allahabad High Court) ಹೇಳಿದೆ.  ತನ್ನ ಗೆಳತಿಯನ್ನು ಇತರರೊಂದಿಗೆ ಅತ್ಯಾಚಾರವೆಸಗಿದ ಆರೋಪ ಹೊತ್ತಿರುವ ರಾಜು (Raju) ಜಾಮೀನು (Bail) ನಿರಾಕರಿಸುವ ಸಂದರ್ಭದಲ್ಲಿ ಈ ಮಾತನ್ನು ನ್ಯಾಯಾಲಯ ಹೇಳಿದೆ.  

ವೈದ್ಯರಿಂದ ಲೈಂಗಿಕ ಕಿರುಕುಳ: ಅಮ್ಮನಲ್ಲಿ ಹೇಳದೆ ಅಳುತ್ತಿದ್ದರು ಈ ನಟಿ 

Latest Videos

undefined

ನ್ಯಾಯಮೂರ್ತಿ ರಾಹುಲ್ ಚತುರ್ವೇದಿ (Rahul Chaturvedi) ಅವರಿದ್ದ ಏಕಸದಸ್ಯ ಪೀಠ  ರಾಜುಗೆ ಜಾಮೀನು ನಿರಾಕರಿಸಿದೆ, ಇತರ ಸಹ ಆರೋಪಿಗಳು ತನ್ನ ಗೆಳತಿಗೆ ಲೈಂಗಿಕ ಕಿರುಕುಳ ನೀಡಿದಾಗ ಅವಳನ್ನು ರಕ್ಷಿಸುವುದು ಅವರ ಕರ್ತವ್ಯವಾಗಿದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ. "ಅರ್ಜಿದಾರನು ಸಂತ್ರಸ್ಥೆ ತನ್ನ ಪ್ರಿಯತಮೆ ಎಂದು ಅರ್ಜಿ ಸಲ್ಲಿಸಿದ್ದಾರೆಂದರೆ, ತನ್ನ ಗೆಳತಿಯ ಘನತೆ, ಗೌರವ ಮತ್ತು ಖ್ಯಾತಿಯನ್ನು ರಕ್ಷಿಸುವುದು ಅವನ ಬದ್ಧ ಕರ್ತವ್ಯವಾಗಿತ್ತು. ಒಂದು ಹುಡುಗಿ ವಯಸ್ಕಳಾಗಿದ್ದರೆ, ಆಕೆಯ ಒಪ್ಪಿಗೆಯೊಂದಿಗೆ ಲೈಂಗಿಕ ಕ್ರಿಯೆ (Sex) ಮಾಡುವುದು ಅಪರಾಧವಲ್ಲ, ಆದರೆ ನಿಸ್ಸಂಶಯವಾಗಿ ಇದು ಅನೈತಿಕ ಮತ್ತು ಭಾರತೀಯ ಸಮಾಜದ ಸ್ಥಾಪಿತ ಸಾಮಾಜಿಕ ಮಾನದಂಡಗಳಿಗೆ ಅನುಗುಣವಾಗಿಲ್ಲ, ”ಎಂದು ಆದೇಶವು ಹೇಳಿದೆ. 

ಸಹೋದ್ಯೋಗಿಗೆ ಲೈಂಗಿಕ ಕಿರುಕುಳ : ನಗ್ನ ಫೋಟೊ ಕಳಿಸೆಂದ ಅಧಿಕಾರಿ ಅರೆಸ್ಟ್

ಅರ್ಜಿದಾರರ ಕೃತ್ಯವು ಅತ್ಯಂತ ಶೋಚನೀಯ ಕೃತ್ಯ ಎಂದು ಬಣ್ಣಿಸಿದ ನ್ಯಾಯಾಲಯ, "ಸಹ-ಆರೋಪಿಗಳು ತನ್ನ ಪ್ರಿಯತಮೆಯನ್ನು ಅವನ ಮುಂದೆ ಕ್ರೂರವಾಗಿ ಲೈಂಗಿಕ ಬಲತ್ಕಾರ ಮಾಡಿದಾಗ ಅವನು ಮೂಕ ಪ್ರೇಕ್ಷಕನಾಗಿದ್ದ" ಹಾಗೂ "ಪ್ರತಿರೋಧವನ್ನು ವ್ಯಕ್ತಪಡಿಸಲು ಯಾವುದೇ ಪ್ರಯತ್ನವನ್ನೂ ಮಾಡಿಲ್ಲ" ಎಂದು ಹೇಳಿದೆ. "ಅವನು (ಆರೋಪಿ ರಾಜು) ಸಂತ್ರಸ್ಥೆಯ ಆತ್ಮ ಮತ್ತು ದೇಹವನ್ನುಈ ಮಾಂಸದ ರಣಹದ್ದುಗಳಿಂದ  ರಕ್ಷಿಸಲು ಯಾವುದೇ ಪ್ರಯತ್ನ ಕೂಡ ಮಾಡಿಲ್ಲ" ಎಂದು ನ್ಯಾಯಾಲಯ ತಿಳಿಸಿದೆ. ಇತರ ಸಹ ಆರೋಪಿಗಳೊಂದಿಗೆ ತನ್ನ ಗೆಳತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ರಾಜು ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು.

ಈ ಆಹಾರಕ್ಕೆ ಗುಡ್ ಬೈ ಹೇಳದಿದ್ರೆ ಲೈಂಗಿಕ ಶಕ್ತಿ ಶಾಶ್ವತವಾಗಿ ಕಳೆದುಹೋಗುತ್ತೆ!

ಬೆಳಿಗ್ಗೆ ಸುಮಾರು 11.00  ಕ್ಕೆ ಹುಡುಗಿ ತನ್ನ ಹೊಲಿಗೆ ತರಬೇತಿ ತರಗತಿಗಳನ್ನು ಮುಗಿಸಿದ ನಂತರ,  ಅವಳು ಆರೋಪಿಯ ಮೋಟಾರ್‌ಸೈಕಲ್‌ನಲ್ಲಿ ಹೋಗಿದ್ದಳು. ಅವರು ನದಿಯೊಂದರ ದಡಕ್ಕೆತಲುಪಿದಾಗ, ಆರೋಪಿಯು ಹುಡುಗಿಯೊಂದಿಗೆ ಲೈಂಗಿಕ ಸಂಬಂಧ ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ.ಆಕೆಯ ತೀವ್ರ ಪ್ರತಿರೋಧದ ಹೊರತಾಗಿಯೂ, ಆರೋಪಿ ಅವಳೊಂದಿಗೆ ದೈಹಿಕ ಬಲತ್ಕಾರ ಮಾಡಿದ್ದಾನೆ. ಈ ವೇಳೆ ಅಲ್ಲಿಗೆ ಆಗಮಿಸಿದ ಇತರೆ ಮೂವರು ಆರೋಪಿಗಳು ಹುಡುಗನನ್ನು ನಿಂದಿಸಿ, ಥಳಿಸಿ ಮೊಬೈಲ್ ಕಸಿದುಕೊಂಡು ಹುಡುಗಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆದರೆ ಅರೋಪಿ ರಾಜು ಅವರನ್ನು ತಡೆಯಲು ಹೋಗಿಲ್ಲ ಎಂದು ಆರೋಪಿಸಲಾಗಿದೆ. ಅವರು ಕೃತ್ಯ ಎಸಗಿದಾಗ, ಅವರು ಪರಸ್ಪರರ ಹೆಸರನ್ನು ಗುಲ್ಶನ್ ಮತ್ತು ಸತ್ಯಂ ಎಂದು ಹೇಳಿಕೊಂಡಿದ್ದರು, ಇದು ಸಂತ್ರಸ್ಥೆ ಅವರನ್ನು ಗುರುತಿಸಲು ಅನುವು ಮಾಡಿಕೊಟ್ಟಿತ್ತು.

"ಅರ್ಜಿದಾರ ರಾಜು ತನ್ನ ಗೆಳೆಯ ಮತ್ತು ಅವನು ತನ್ನೊಂದಿಗೆ ಸಮ್ಮತಿ ಲೈಂಗಿಕ ಕ್ರಿಯೆ ನಡೆಸಿದ್ದ" ಎಂದು ಸಂತ್ರಸ್ತೆ ಒಪ್ಪಿಕೊಂಡಿರುವ ಬಗ್ಗೆಯೂ ನ್ಯಾಯಾಯಲ ಪರೀಶಿಲನೆ ನಡೆಸಿದೆ. ನ್ಯಾಯಾಲಯದಲ್ಲಿ ದಾಖಲಾದ ವಸ್ತುಗಳು/ವಿಷಯ ಮತ್ತು ಎಫ್‌ಐಆರ್‌ನ್ನು ಪರಿಶೀಲಿಸಿದ ನಂತರ, ನ್ಯಾಯಾಲಯವು ಅರ್ಜಿದಾರರಿಗೆ ಜಾಮೀನು ನಿರಾಕರಿಸಿತು, ಅರ್ಜಿದಾರರಿಗೆ ಉಳಿದ ಸಹ-ಆರೋಪಿಗಳೊಂದಿಗೆ ಯಾವುದೇ ಸಂಬಂಧ ಅಥವಾ ಸಂಪರ್ಕವಿಲ್ಲ ಎಂದು ಖಚಿತವಾಗಿ ಹೇಳಲಾಗುವುದಿಲ್ಲ ಎಂದು ನ್ಯಾಯಾಯಲ ತೀರ್ಪು ನೀಡಿದೆ.

click me!