*ಪ್ರಧಾನಿ ಮೋದಿಯವರಿಂದ ಸ್ವದೇಶಿ 4.0 ಅಭಿಯಾನ ಪ್ರಾರಂಭ
*ಅವರ ಆಡಳಿತ ಮಾದರಿ ಮ್ಯಾನೆಜ್‌ಮೆಂಟ್ ಶಾಲೆಗಳಲ್ಲಿ ಪಠ್ಯವಾಗಲಿ
*ನರೇಂದ್ರ ಮೋದಿ 24-ಕ್ಯಾರೆಟ್ ಚಿನ್ನ : ರಾಜನಾಥ್ ಸಿಂಗ್!
ನವದೆಹಲಿ(ಅ. 30): ಮಹಾತ್ಮಾ ಗಾಂಧಿ (Mahatam Gandhi) ಮತ್ತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ (Deen Dayal Upadhyay) ಅವರ ನಂತರ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ಥಳೀಯ ಮತ್ತು ಆತ್ಮನಿರ್ಭರ ಭಾರತ್ ಅಭಿಯಾನಗಳೊಂದಿಗೆ ಸ್ವದೇಶಿ 4.0 ಅಭಿಯಾನವನ್ನು ಪ್ರಾರಂಭಿಸಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಶುಕ್ರವಾರ (ಅ. 29) ಹೇಳಿದ್ದಾರೆ. ಜತೆಗೆ ಅವರ ಆಡಳಿತ ವೈಖರಿ ಎಲ್ಲರಿಗೂ ಮಾದರಿಯಾಗಬೇಕು ಹಾಗೂ ಮ್ಯಾನೇಜ್‌ಮೆಂಟ್ ಶಾಲೆಗಳಲ್ಲಿ ಅದನ್ನು ಕೇಸ್ ಸ್ಟಡಿಯಾಗಿ ಕಲಿಸಬೇಕು. ಪರಿಣಾಮಕಾರಿ ನಾಯಕತ್ವ ಮತ್ತು ಸಮರ್ಥ ಆಡಳಿತ (effective leadership and efficient governance) ವಿಷಯದಲ್ಲಿ ಇದನ್ನು ಪಠ್ಯವಾಗಿ ಸೇರಿಸಬೇಕು ಎಂದು ಅವರು ಹೇಳಿದ್ದಾರೆ.
ಮೋದಿಜಿ 24-ಕ್ಯಾರೆಟ್ ಚಿನ್ನ
Delivering Democracy: Reviewing 2 Decades of Narendra Modi as Head of Govt' ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀ ರಾಜನಾಥ್ ಸಿಂಗ್ ಕಳೆದ ಎರಡು ದಶಕಗಳ ರಾಜಕೀಯ ಪಯಣದ ಕುರಿತು ಸುದೀರ್ಘವಾಗಿ ಭಾಷಣ ಮಾಡಿದ್ದಾರೆ. "ನಿಜವಾದ ನಾಯಕತ್ವವನ್ನು ಅದರ ಉದ್ದೇಶ ಮತ್ತು ಸಮಗ್ರತೆಯಿಂದ ಗುರುತಿಸಲಾಗುತ್ತದೆ ಮತ್ತು ಎರಡೂ ವಿಷಯಗಳಲ್ಲಿ, ಮೋದಿಜಿ 24-ಕ್ಯಾರೆಟ್ ಚಿನ್ನ (24-carat gold). 20 ವರ್ಷಗಳ ಕಾಲ ಸರ್ಕಾರದ ಮುಖ್ಯಸ್ಥರಾಗಿದ್ದ ನಂತರವೂ ಅವರ ಮೇಲೆ ಒಂದೇ ಒಂದು ಕಳಂಕವಿಲ್ಲ, ಭ್ರಷ್ಟಾಚಾರದ ಆರೋಪವಿಲ್ಲ. ಶ್ರೀ ಮೋದಿ ಅವರು ಸಾಮಾನ್ಯ ವ್ಯಕ್ತಿಯಲ್ಲ ಎಂದು ರಾಜನಾಥ್ ಹೇಳಿದ್ದಾರೆ.
ಒಂದು ಕಡತ ನಾಲ್ಕಕ್ಕಿಂತ ಹೆಚ್ಚು ಕೈಗೆ ಹೋಗುವಂತಿಲ್ಲ: ನವೆಂಬರ್‌ನಿಂದ ಹೊಸ ಯೋಜನೆ!
"ಕಳೆದ ಎರಡು ದಶಕಗಳ ಅವರ ರಾಜಕೀಯ ಪಯಣವನ್ನು ನಾವು ಗಮನಿಸಿದರೆ, ಅವರ ಮುಂದೆ ಹೊಸ ಸವಾಲುಗಳು ಬರುತ್ತಲೇ ಇರುವುದನ್ನು ನಾವು ನೋಡಿದ್ದೇವೆ. ಆದರೆ ಅವರು ಆ ಸವಾಲುಗಳನ್ನು ಎದುರಿಸಿದ ರೀತಿಯನ್ನು ಮ್ಯಾನೇಜ್‌ಮೆಂಟ್ ಶಾಲೆಗಳಲ್ಲಿ (Management School) ಪರಿಣಾಮಕಾರಿ ನಾಯಕತ್ವ ಮತ್ತು ದಕ್ಷ ಆಡಳಿತದ ಬಗ್ಗೆ ಕೇಸ್ ಸ್ಟಡಿಯಾಗಿ (Case Study) ಕಲಿಸಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಹೇಳಿದ್ದಾರೆ
ಸಬ್ಕಾ ಸಾಥ್, ಸಬ್ಕಾ ವಿಕಾಸ್‌ಯಿಂದ ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್!
ಮೋದಿಯವರು ಗುಜರಾತ್ (Gujarat) ಮುಖ್ಯಮಂತ್ರಿಯಾಗಿದ್ದ ಅವಧಿಯ ಕುರಿತು ಮಾತನಾಡಿದ ಅವರು " ಪ್ರಧಾನಿ ಮೋದಿ ಗುಜರಾತ್ ರಾಜ್ಯವನ್ನು ಸಮಗ್ರ ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ದರು ಮತ್ತು ಸಮಾಜದ ಪ್ರತಿಯೊಂದು ವರ್ಗದ ಪ್ರಗತಿಗೆ ಶ್ರಮಿಸಿದರು. ಶ್ರೀ ಮೋದಿಯವರು 'ಸಬ್ಕಾ ಸಾಥ್, ಸಬ್ಕಾ ವಿಕಾಸ್' (Sabka Sath Sabka Vikas) ಮಂತ್ರವನ್ನು ನೀಡಿದರು ಮತ್ತು ನಂತರ ಪ್ರಧಾನ ಮಂತ್ರಿಯಾಗಿ ಅದಕ್ಕೆ 'ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್' ಅನ್ನು ಸೇರಿಸಿದರು ಎಂದು ರಕ್ಷಣಾ ಸಚಿವರು ಹೇಳಿದರು. ಜತೆಗೆ ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿಯವರು ಆರಂಭಿಸಿದ ವಿವಿಧ ಸುಧಾರಣೆಗಳು ಮತ್ತು ಯೋಜನೆಗಳನ್ನು ಬಗ್ಗೆ ಕೂಡ ರಾಜನಾಥ್ ಉಲ್ಲೇಖಿಸಿದರು.
ದೇಶದಲ್ಲಿ ವ್ಯಾಪರ ಅಭಿವೃದ್ಧಿ!
ಈ ದೇಶದಲ್ಲಿ ವ್ಯಾಪಾರ, ಉದ್ಯಮ ಮತ್ತು ವ್ಯಾಪಾರದ ಅಭಿವೃದ್ಧಿ ದೀರ್ಘಕಾಲದವರೆಗೆ ಸ್ಥಗಿತಗೊಂಡಿತ್ತು ಎಂದು ಹೇಳಿ ಅಭಿವೃದ್ಧಿಯ ನಿಟ್ಟಿನಲ್ಲಿ ಶ್ರೀ ಮೋದಿಯವರ ಬದ್ಧತೆ ಬಗ್ಗೆ ಮಾತನಡಿದ ರಾಜನಾಥಗ ಸಿಂಗ್ , "ನೀವು ವ್ಯಾಪಾರ ಮತ್ತು ಉದ್ಯಮಕ್ಕೆ ಬೆಂಬಲ ನೀಡಿದರೆ ನಿಮ್ಮ ಸಾಮಾಜಿಕ ಬದ್ಧತೆ ದುರ್ಬಲವಾಗಿರುತ್ತದೆ ಎಂದು ನಂಬಲಾಗಿತ್ತು. ಮೋದಿಜಿ ಈ ತಪ್ಪು ಕಲ್ಪನೆಗೆ ಕಠಿಣ ಸವಾಲನ್ನು ನೀಡಿದರು. ಅವರು ರಾಷ್ಟ್ರ ನಿರ್ಮಾಣಕ್ಕಾಗಿ ಉದ್ಯಮ ಮತ್ತು ಉದ್ಯಮಿಗಳನ್ನು ಗುರುತಿಸಿದರು ಮತ್ತು ಗೌರವಿಸಿದರು. ಪ್ರಧಾನಿ ಮೋದಿ ಅವರು 2001 ರಿಂದ 2014 ರಲ್ಲಿ ಪ್ರಧಾನಿಯಾಗಿ ಆಯ್ಕೆಯಾಗುವವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ರಾಗಾಗೆ ಮೋದಿ ಶಕ್ತಿಯ ಅಂದಾಜಿಲ್ಲ, ದಶಕದವರೆಗೆ ಬಿಜೆಪಿ ದರ್ಬಾರ್: ಪ್ರಶಾಂತ್ ಕಿಶೋರ್!