ಮಿಸ್ಟೇಕ್ ಆಗಿ ನಿಮಗೆ UPI ಪಾವತಿ ಮೂಲಕ ಹಣ ಬಂದಿದೆಯಾ? ಎಚ್ಚರ ಇದು ಅತೀ ದೊಡ್ಡ ವಂಚನೆ!

By Chethan Kumar  |  First Published Oct 19, 2024, 7:48 PM IST

1,500 ರೂ ಕ್ರೆಡಿಟೆಡ್. ನಿಮ್ಮ ಖಾತೆಗೆ ಯಾರೋ ಪರಿಚಯ ಇಲ್ಲದ ವ್ಯಕ್ತಿಗಳಿಂದ ಕಡಿಮೆ ಮೊತ್ತದ ಹಣ ಬಂದಿದೆಯಾ?  ಪಾವತಿ ಮಾಡುವಾಗ ಮಿಸ್ಟೇಕ್ ಆಗಿ ಕಳುಹಿಸಿದ್ದೇನೆ, ಈ ನಂಬರ್‌ಗೆ ಅಥವಾ ಕ್ಯೂಆರ್ ಕೋಡ್, ಖಾತೆಗೆ ಮರುಪಾವತಿಸಿ ಎಂದು ಕರೆ ಬರುತ್ತಿದೆಯಾ? ಎಚ್ಚರ ಇದು ಅತೀ ದೊಡ್ಡ ವಂಚನೆ ಜಾಲ. ಅಪ್ಪಿ ತಪ್ಪಿ ಈ ಜಾಲಕ್ಕೆ ಸಿಲುಕಿದರೆ ನೀವು ಮೋಸ ಹೋಗುವುದು ಖಚಿತ.


ಬೆಂಗಳೂರು(ಅ.19) ಅಣ್ಣಾ, ಬೈ ಮಿಸ್ಟೇಕ್ ಆಗಿ ನಿಮಗೆ 1,500 ರೂಪಾಯಿ ಪಾವತಿ ಮಾಡಿದ್ದೇನೆ. ಆಪ್ತರ ಆಸ್ಪತ್ರೆಯ ಮೆಡಿಕಲ್ ಬಿಲ್ ಪಾವತಿ ಮಾಡುವಾಗ ಆದ ಕಣ್ತಪ್ಪಿನಿಂದ ನಿಮ್ಮ ಖಾತೆಗೆ ಹೋಗಿದೆ. ದಯವಿಟ್ಟು 1,500 ರೂಪಾಯಿ ಮರಳಿಸಿ. ನನ್ನ ನಂಬರ್, ಅಥವಾ ಕ್ಯೂಆರ್ ಕೋಡ್ ಅಥವಾ ಖಾತೆಗೆ, ನಿಮಗೆ ಯಾವುದು ಸುಲಭವೋ ಅದಕ್ಕೆ ಮರುಪಾವತಿಸಿ ಎಂದು ದಯನೀವಾಗಿ ಕರೆ, ಮೆಸೇಜ್‌ಗಳು ಬರುತ್ತಿದ್ದರೆ, ನಿಮಗೆ ಅನಾಮಿಕ ವ್ಯಕ್ತಿಗಳ ಖಾತೆಯಿಂದ ಈ ರೀತಿ ಸಣ್ಣ ಮೊತ್ತ ಬಂದರೆ ಎಚ್ಚರ. ಅಪ್ಪಿ ತಪ್ಪಿ ಈ ಹಣವನ್ನು ಅವರು ಹೇಳುವಂತೆ ಮರಳಿಸಬೇಡಿ. ಇದು ಅತೀ ದೊಡ್ಡ ವಂಚನೆ ಜಾಲ. ಹೊಸ ಸೈಬರ್ ಕ್ರೈಂ ಇದೀಗ ಹಲೆವೆಡೆ ವರದಿಯಾಗುತ್ತಿದೆ.

ಭಾರತದಲ್ಲಿ ನಗದು ಹಾಗೂ ಇತರ ವ್ಯಹಾರಕ್ಕಿಂತ ಯುಪಿಐ ವಹಿವಾಟುಗಳೇ ಹೆಚ್ಚು. ಆದರೆ  ಈ ಯುಪಿಐ ವಹಿವಾಟಿನಲ್ಲಿ ಹಲವು ವಂಚನೆಗಳು ನಡೆಯುತ್ತಿದೆ. ಇದೀಗ ಹೊಸ ವಂಚನೆ ಜಾಲವೊಂದು ಪತ್ತೆಯಾಗಿದೆ. ನಿಮ್ಮ ಖಾತೆಗೆ ಅನಾಮಿಕರು 1,000 ರೂಪಾಯಿ, 1,500 ರೂಪಾಯಿ ಸೇರಿದಂತೆ ಸಣ್ಣ ಮೊತ್ತವನ್ನು ವರ್ಗಾವಣೆ ಮಾಡುತ್ತಾರೆ. ಬಳಿಕ ತಪ್ಪಾಗಿ ನಿಮಗೆ ವರ್ಗಾವಣೆ ಮಾಡಿದ್ದೇನೆ. ನೀವು ಮರಳಸಿ ಎಂದು ತಮ್ಮ ನಂಬರ್, ಕ್ಯೂಆರ್ ಕೋಡ್ ವಿವರ ನೀಡುತ್ತಾರೆ. ಕೇವಲ 1,500 ರೂಪಾಯಿ, ತಪ್ಪಾಗಿ ಬಂದಿದ್ದು ನಿಜ, ಕಾರಣ ವ್ಯಕ್ತಿ ನಿಮಗೆ ಪರಿಚಯವಿಲ್ಲ, ನೀವು ಆತನಿಂದ ಹಣ ಪಡೆದಿಲ್ಲ, ಕೇಳಿಯೂ ಇಲ್ಲ. ಹೀಗಾಗಿ ಮರಳಿಸಿದರೆ ಆಯ್ತು ಎಂಬ ನಿರ್ಧಾರ ಮಾಡಿದರೆ ನಿಮ್ಮ ಖಾತೆಗೆ ಕನ್ನ ಬಿದ್ದಂತೆ.

Tap to resize

Latest Videos

UPI ಮೂಲಕ ವಹಿವಾಟು ಮಾಡುವವರಿಗೆ RBIನಿಂದ ದೀಪಾವಳಿ ಉಡುಗೊರೆ!

ವೈದ್ಯನಾಥ್ ಅನ್ನೋ ವ್ಯಕ್ತಿ ಹೊಸ ಸೈಬರ್ ಕ್ರೈಂ ಕುರಿತು ತಮಗಾದ ಅನುಭವ ಹೇಳಿಕೊಂಡಿದ್ದಾರೆ. ಇದೇ ವೇಳೆ ಎಲ್ಲರೂ ಎಚ್ಚರವಹಿಸುವಂತೆ ಮನವಿ ಮಾಡಿದ್ದಾರೆ. ಇಷ್ಟೇ ಅಲ್ಲ ಹಣ ಹಿಂದಿರುಗಿಸುವ ವಿಧಾನ ಹಾಗೂ ಸುರಕ್ಷತೆ ಕುರಿತು ತಿಳಿ ಹೇಳಿದ್ದಾರೆ. ವೈದ್ಯನಾಥನ್ ಅವರಿಗೆ 1,500 ರೂಪಾಯಿ ಯುಪಿಐ ಮೂಲಕ ಯಾರೋ ವರ್ಗಾವಣೆ ಮಾಡಿದ್ದಾರೆ. ಕೆಲ ಹೊತ್ತಲ್ಲೇ ಅನಾಮಿಕರಿಂದ ಕರೆ ಬಂದಿದೆ. ತಪ್ಪಾಗಿ ನಿಮ್ಮ ಖಾತೆಗೆ 1,500 ರೂಪಾಯಿ ವರ್ಗಾವಣೆ ಮಾಡಿದ್ದೇನೆ. ನನ್ನ ವಿಶೇಷ ಚೇತನ ಮಗುವನ್ನು ಆಸ್ಪತ್ರೆ ಕೆರೆದುಕೊಂಡು ಬಂದು ಚಿಕಿತ್ಸೆ ನೀಡುತ್ತಿದ್ದೇನೆ. ಈ ವೇಳೆ ಆತಂಕ, ಆತುರರದಲ್ಲಿ ಮಾಡಿದ ಪಾವತಿ ತಪ್ಪಾಗಿ ನಿಮ್ಮ ಖಾತೆಗೆ ಬಂದಿದೆ. ದಯವಿಟ್ಟು 1,500 ರೂಪಾಯಿ ಮರುಪಾವತಿ ಮಾಡಿ. ನನ್ನ ಯುಪಿಐ ನಂಬರ್,ಕ್ಯೂಆರ್ ಕೋಡ್ ಅಥವಾ ಖಾತೆಗೆ ಮರಳಿಸಿ ಎಂದು ಮನವಿ ಮಾಡಿದ್ದಾರೆ. ಇಷ್ಟೇ ಅಲ್ಲ ಯುಪಿಐ ವಿವರಗಳನ್ನು ನೀಡಿದ್ದಾರೆ ಎಂದು ವೈದ್ಯನಾಥನ್ ಹೇಳಿದ್ದಾರೆ.

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅನಾಮಿಕರು ಕರೆ ಮಾಡಿದ್ದಾರೆ. ಈ ವೇಳೆ ವೈದ್ಯನಾಥನ್ ಸ್ಪಷ್ಟವಾಗಿ ಈ ಮೊತ್ತವನ್ನು ನೀವು ಹೇಳಿದಂತೆ  ಮರುಪಾವತಿಸಲು ಸಾಧ್ಯವಿಲ್ಲ. ನಿಮ್ಮ ಬ್ಯಾಂಕ್ ಖಾತೆ ಸಂಪರ್ಕಿಸಿ ರಿವರ್ಸ್ ಮಾಡಲು ಮನವಿ ಮಾಡಿ, ಅಥವಾ ಯುಪಿಐ ಖಾತೆಯಲ್ಲಿ  ತಪ್ಪಾಗಿ ಮಾಡಿದ ಪಾವತಿಯನ್ನು ಮರಳಿಸಲು ಆಯ್ಕೆ ಇದೆ. ಆ ಮೂಲಕ ಪ್ರಯತ್ನಿಸಿದೆ. ಕೊನೆಯದಾಗಿ ಪೊಲೀಸ್ ಠಾಣೆಗೆ ಬನ್ನಿ, ನಿಮ್ಮ ಹಣ ಮರಳಿಸುತ್ತೇನೆ ಎಂದು ವೈದ್ಯನಾಥನ್ ಉತ್ತರಿಸಿದ್ದಾರೆ. ಆದರೆ ಸಮಯದ ಅಭಾವದ ಕಾರಣ ನೀಡಿ ತಕ್ಷಣವೇ ಮರಳಿಸಲು ಭಾರಿ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದರೆ ನೀವು ಹಣ ಮರಳಿಸಿದರೆ ನಿಮ್ಮ ಖಾತೆಯಲ್ಲಿರುವ ಹಣವನ್ನು ಖದೀಮರು ಕೆಲವೇ ಕ್ಷಣದಲ್ಲಿ ಖಾಲಿ ಮಾಡಲಿದ್ದಾರೆ ಎಂದು ವೈದ್ಯನಾಥನ್ ಎಚ್ಚರಿಸಿದ್ದಾರೆ.

ಈ ರೀತಿಯ ವಂಚನೆ ಜಾಲದಲ್ಲಿ ಸಿಲುಕಬೇಡಿ ಎಂದು ವೈದ್ಯನಾಥನ್ ಸೂಚಿಸಿದ್ದಾರೆ. ಈ ವಂಚನೆ ಜಾಲ ಗರಿಷ್ಠ 2,000 ರೂಪಾಯಿ ಅದಕ್ಕಿಂತ ಕಡಿಮೆ ಮೊತ್ತವನ್ನು ವರ್ಗಾಯಿಸುತ್ತಾರೆ. ಬಳಿಕ ಹಲವು ಕತೆಗಳನ್ನು, ಭಾವನಾತ್ಮಕವಾಗಿ ನಿಮ್ಮನ್ನು ಮೋಸದ ಜಾಲಕ್ಕೆ ಬೀಳಿಸುತ್ತಾರೆ. ಹೀಗಾಗಿ ಅವರು ಸೂಚಿಸುವ ಯಾವುದೇ ರೀತಿಯ ಮರುಪಾವತಿ ಮಾಡಬೇಡಿ. ಲಿಂಕ್, ಕ್ಯೂಆರ್ ಕೋಡ್, ಯುಪಿಐ ಐಡಿ, ನಂಬರ್, ಖಾತೆಗೆ ಹಣ ವರ್ಗಾವಣೆ ಮಾಡಬೇಡಿ.

Fastag ರಿಚಾರ್ಜ್ ನಿಯಮದಲ್ಲಿ ಬದಲಾವಣೆ, ಪಾವತಿಗೂ ಮುನ್ನ ತಿಳಿದುಕೊಳ್ಳಿ ಹೊಸ ರೂಲ್ಸ್!

ತಕ್ಷಣವೇ ನಿಮ್ಮ ಜಿಪೇ ಅಥವಾ ಇತರ ಯುಪಿಐ ಆ್ಯಪ್‌ನಲ್ಲಿ ಪೇಮೆಂಟ್ ಹಾಗೂ ರಿಪೋರ್ಟ್ ಪೇಮೆಂಟ್ ಆಯ್ಕೆ ಕ್ಲಿಕ್ ಮಾಡಬೇಕು. ಬಳಿಕ ರಾಂಗ್ ಅಥವಾ ಫ್ರಾಡ್ ಟ್ರಾನ್ಸಾಕ್ಷನ್ ಕ್ಲಿಕ್ ಮಾಡಬೇಕು. ತಪ್ಪಾಗಿ ಯಾರಾದರೂ ಪಾವತಿ ಮಾಡಿದ್ದರೆ ಅವರು ರಿವರ್ಸ್ ಪೇಮೆಂಟ್ ಮಾಡಲು ಅವರ ಖಾತೆಯಲ್ಲಿ ಆಯ್ಕೆಗಳಿವೆ. ಅವರ ಬ್ಯಾಂಕ್ ಖಾತೆ ಸಂಪರ್ಕಿಸಿ ರಿವರ್ಸ್ ಪೇಮೆಂಟ್‌ಗೆ ಮನವಿ ಮಾಡಲು ಸೂಚಿಸಿ. ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಬರಲು ಸೂಚಿಸಿ, ಪೊಲೀಸರ ಮೂಲಕ ನಗದು ಹಣದ ರೂಪದಲ್ಲಿ ಮರು ಪಾವತಿಸಿ. ಈ ರೀತಿ ಕರೆ, ಹಣ ಪಾವತಿ ಮಾಡುವವರ ನಂಬರ್ ಬ್ಲಾಕ್ ಮಾಡಿ ಎಂದು ವೈದ್ಯನಾಥನ್ ಸಲಹೆ ನೀಡಿದ್ದಾರೆ.
 

click me!