
ನವದೆಹಲಿ(ಅ.19) ಭಾರತೀಯ ರೈಲ್ವೇ ದೇಶದ ಮೂಲೆ ಮೂಲೆಗೆ ರೈಲು ಸೇವೆ ನೀಡುತ್ತಿದೆ. ಅತೀ ಕಡಿಮೆ ದರ, ಅರಾಮದಾಯಕ ಪ್ರಯಾಣದ ಜೊತೆಗೆ ಅತೀ ಕಡಿಮೆ ಸಮಯದಲ್ಲಿ ನಿಗದಿತ ಸ್ಥಳಕ್ಕೆ ಪ್ರಯಾಣಿಕರನ್ನು ತಲುಪಿಸುತ್ತಿದೆ. ಇದೀಗ ವಂದೇ ಭಾರತ್ ಸೇರಿದಂತೆ ಕೆಲ ಎಕ್ಸ್‌ಪ್ರೆಸ್ ರೈಲುಗಳು ಅತೀ ಕಡಿಮೆ ಸಮಯದಲ್ಲಿ ಸುದೀರ್ಘ ಪ್ರಯಾಣ ಪೂರೈಸಲಿದೆ. ಆದರೆ ಭಾರತದ ಅತ್ಯಂತ ನಿಧಾನದ ರೈಲು ಅನ್ನೋ ಕುಖ್ಯಾತಿಗೆ ಹೌರಾ-ಅಮೃತಸರ ಮೇಲ್ ರೈಲು ಗುರಿಯಾಗಿದೆ. ಈ ರೈಲು 111 ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಹೌರಾದಿಂದ ಅಮೃತಸರ ತಲುಪಲು 37 ಗಂಟೆ ಸಮಯ ತೆಗೆದುಕೊಳ್ಳಲಿದೆ.
ಹೌರಾ-ಅಮೃತಸರ ಮೇಲ್ ರೈಲು ಅತೀ ಹೆಚ್ಚು ನಿಲುಗಡೆಯಾಗುವ ರೈಲು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಸಾಮಾನ್ಯವಾಗಿ ರೈಲುಗಳು 20, 30, 35 ನಿಲುಗಡೆ ಮಾಡಲಿದೆ. ಇದು ಗರಿಷ್ಠ. ಆದರೆ ಹೌರ-ಅಮೃತಸರ ರೈಲು 111 ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ವಿಶೇಷ ಅಂದರೆ 111 ನಿಲ್ದಾಣಗಲ್ಲಿ ಪ್ರಯಾಣಿಕರು ಇಳಿಯುತ್ತಾರೆ, ಹತ್ತುತ್ತಾರೆ.
ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಟ್ರೈನ್ ಟಿಕೆಟ್ ರಿಶೆಡ್ಯೂಲ್ ಮಾಡುವುದು ಹೇಗೆ?
ಹೌರ-ಅಮೃತಸರ ರೈಲು 1,910 ಕಿಲೋಮೀಟರ್. ವಿಶೇಷ ಅಂದರೆ ಈ ರೈಲು ಐದು ರಾಜ್ಯಗಳ ಮೂಲಕ ಹಾದು ಹೋಗಲಿದೆ. ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಹರ್ಯಾಣ ಹಾಗೂ ಪಂಜಾಬ್ ರಾಜ್ಯಗಳ ಮೂಲಕ ಹೌರ-ಅಮೃತಸರ ಸಂಚರಿಸಲಿದೆ. ಪ್ರಮುಖವಾಗಿ ಅಸನೋಲ್, ಪಟ್ನಾ, ವಾರಣಾಸಿ, ಲಖನೌ ಬರೇಲಿ, ಅಂಬಾಲ, ಲೂಧಿಯಾನ, ಜಲಂದರ್ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಯಾಗಲಿದೆ. ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಸಮಯ ಹೆಚ್ಚಿದ್ದರೆ, ಸಣ್ಣ ನಿಲ್ದಾಣಗಳಲ್ಲಿ 1 ರಿಂದ 2 ನಿಮಿಷ ರೈಲು ನಿಲುಗಡೆಯಾಗಲಿದೆ.
ಹೌರ-ಅಮೃತಸರ ರೈಲನ್ನು ಗರಿಷ್ಠ ಪ್ರಯಾಣಿಕರು ಅನುಕೂಲ ಪಡೆಯುವಂತೆ ಸಮಯ ಹಾಗೂ ಇತರ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಹೌರಾದಿಂದ ಸಂಜೆ 7.15ಕ್ಕೆ ಹೊರಡಲಿದ್ದು ಅಮೃತಸರಕ್ಕೆ ಮೂರನೇ ದಿನ ಬೆಳಗ್ಗೆ 8.40ಕ್ಕೆ ತಲುಪಲಿದೆ. ಆದರೆ ಅತೀ ಕಡಿಮೆ ದರದಲ್ಲಿ ಈ ರೈಲು ಪ್ರಯಾಣಿಕರನ್ನು ತಲುಪಿಸಲಿದೆ. ಸ್ಲೀಪರ್ ಕ್ಲಾಸ್ ದರ 695 ರೂಪಾಯಿ, 3ಟೈಯರ್ ಎಸಿ ದರ 1,870 ರೂಪಾಯಿ, ಸೆಕೆಂಡ್ ಎಸಿ ದರ 2,755 ರೂಪಾಯಿ ಹಾಗೂ ಫಸ್ಟ್ ಎಸಿ ದರ 4,835 ರೂಪಾಯಿ. ಈ ರೈಲಿನಲ್ಲಿ ಅತೀ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹೌರಾದಿಂದ ಅಮೃತಸರಕ್ಕೆ ನೇರ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದರು, 111 ನಿಲುಗಡೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಹತ್ತಿ ಇಳಿಯುತ್ತಾರೆ.
ಭಾರತದ ಅತ್ಯಂತ ಜನನಿಬಿಡ ಈ ನಿಲ್ದಾಣಕ್ಕೆ ಪ್ರತಿದಿನ ಬರುತ್ತವೆ 600ಕ್ಕೂ ಅಧಿಕ ರೈಲುಗಳು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ