Covid Crisis: ಹರ್ಯಾಣದಲ್ಲೂ ಮಾಸ್ಕ್‌ ಕಡ್ಡಾಯ ನಿಯಮ ರದ್ದು

By Govindaraj S  |  First Published Apr 4, 2022, 3:00 AM IST

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಸಾಕಷ್ಟುಇಳಿಕೆಯಾಗಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯ ಎಂಬ ನಿಯಮವನ್ನು ಹರ್ಯಾಣ ಸರ್ಕಾರ ತೆಗೆದುಹಾಕಿದೆ.


ಚಂಡೀಗಢ (ಏ.04): ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ (Covid Cases) ಸಂಖ್ಯೆ ಸಾಕಷ್ಟುಇಳಿಕೆಯಾಗಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ (Mask) ಧರಿಸುವುದು ಕಡ್ಡಾಯ ಎಂಬ ನಿಯಮವನ್ನು ಹರ್ಯಾಣ ಸರ್ಕಾರ (Haryana Government) ತೆಗೆದುಹಾಕಿದೆ. ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದಿದ್ದರೆ ದಂಡ ವಿಧಿಸಲಾಗುವುದಿಲ್ಲ. ಆದರೆ ಕೋವಿಡ್‌ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದೆ. ಮಹಾರಾಷ್ಟ್ರ ಮತ್ತು ದೆಹಲಿ ಸರ್ಕಾರಗಳ ನಿರ್ಧಾರದ ಬೆನ್ನಲ್ಲೇ ಹರ್ಯಾಣದಲ್ಲೂ ಅಂಥದ್ದೇ ನಿಯಮ ಜಾರಿಗೊಳಿಸಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ರಾಜ್ಯ ಸರ್ಕಾರ, ಇನ್ನು ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯವಲ್ಲ. ಮಾಸ್ಕ್‌ ಧರಿಸದೇ ಇದ್ದರೆ, ಈ ಹಿಂದೆ ವಿಧಿಸಲಾಗುತ್ತಿದ್ದ 500ರು. ದಂಡವನ್ನು ಇನ್ನು ವಿಧಿಸಲಾಗುವುದಿಲ್ಲ. ಆದರೆ ಈ ಆದೇಶದ ಹೊರತಾಗಿಯೂ ಜನರಿಗೆ ಮಾಸ್ಕ್‌ ಧರಿಸುವುದು, ಕೈಗಳ ನೈರ್ಮಲ್ಯ ಕಾಪಾಡಿಕೊಳ್ಳುವುದು, ಆಗಾಗ್ಗೆ ಸ್ಯಾನಿಟೈಸರ್‌ ಬಳಕೆ ಮಾಡುವುದು ಮತ್ತು ಸಾಮಾಜಿಕ ಅಂತರ ಪಾಲನೆ ಮಾಡುವಂತೆ ಸರ್ಕಾರ ಸಲಹೆ ನೀಡಲಿದೆ ಎಂದು ಹೇಳಿದೆ. ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದರಿಂದ 2020ರ ಮೇ 27ರಿಂದ ಮಾಸ್ಕ್‌ ಧರಿಸುವುದನ್ನು ಹರ್ಯಾಣ ಸರ್ಕಾರ ಕಡ್ಡಾಯ ಮಾಡಿತ್ತು.

Latest Videos

ಮಹಾರಾಷ್ಟ್ರ, ದಿಲ್ಲಿಯಲ್ಲಿ ಇನ್ನು ಮಾಸ್ಕ್‌ ಕಡ್ಡಾಯವಲ್ಲ: ಎರಡು ವರ್ಷಗಳ ಬಳಿಕ ನಿಯಮ ರದ್ದು

'ಮಾಸ್ಕ್ ಧಾರಣೆ ನಿಯಮ ರದ್ದು ಆತುರದ ನಿರ್ಧಾರ: ರಾಜ್ಯಗಳು ಕಡ್ಡಾಯ ಮಾಸ್ಕ್ ಧಾರಣೆ ನಿರ್ಬಂಧವನ್ನು ರದ್ದುಗೊಳಿಸಿದ್ದು ಆತುರದ ನಿರ್ಣಯವಾಗಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ದಾಖಲಾದ ಹಿನ್ನೆಲೆಯಲ್ಲಿ ಗುರುವಾರ ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ಮಾಸ್‌್ಕ ಏ.2 ರಿಂದ ಕಡ್ಡಾಯವಲ್ಲ ಎಂದು ಘೋಷಿಸಿತ್ತು. ಅದೇ ರೀತಿ ದೆಹಲಿ ಸರ್ಕಾರ ಮಾಸ್ಕ್ ಧರಿಸದೇ ಇರುವವರ ಮೇಲಿನ ದಂಡವನ್ನು ತೆಗೆದುಹಾಕಿತ್ತು.

ಈ ಹಿನ್ನೆಲೆಯಲ್ಲಿ ಫೋರ್ಟೀಸ್‌ ಅಸ್ಪತ್ರೆಯ ಜಂಟಿ ನಿರ್ದೇಶಕರಾದ ಡಾ. ರವಿ ಶೇಖರ್‌ ಝಾ ‘ಮಾಸ್ಕ್‌ ಧಾರಣೆ ಕಡ್ಡಾಯವೆಂಬ ನಿರ್ಬಂಧ ತೆಗೆದುಹಾಕುವುದು ಆತುರದ ನಿರ್ಧಾರವಾಗಿದೆ. ದೇಶ ಇನ್ನೂ ಸಂಪೂರ್ಣವಾಗಿ ಕೋವಿಡ್‌ ಮುಕ್ತವಾಗಿಲ್ಲ. ಎಲ್ಲ ನಾಗರಿಕರಿಗೂ ಇನ್ನೂ ಕೋವಿಡ್‌ ಲಸಿಕೆಯ ಎರಡೂ ಡೋಸುಗಳು ಲಭ್ಯವಾಗಿಲ್ಲ. ಲಸಿಕೆ ನೀಡಿದರೂ ಅದು ಕೋವಿಡ್‌ ತಗುಲದಂತೇ ಜನರನ್ನು ರಕ್ಷಿಸುವುದಿಲ್ಲ. ಬದಲಾಗಿ ಮಾರಣಾಂತಿಕ ಮಟ್ಟಕ್ಕೆ ತಲುಪದಂತೇ ತಡೆಯುತ್ತದೆ. ಹೀಗಾಗಿ ಕೋವಿಡ್‌ ಹರಡುವಿಕೆ ತಡೆಗಟ್ಟಲು ಮಾಸ್‌್ಕ ಅತ್ಯುತ್ತಮ ವಿಧಾನವಾಗಿದೆ. ಮಾಸ್‌್ಕನಿಂದಾಗಿ ಕೋವಿಡ್‌ ಮಾತ್ರವಲ್ಲ, ಕೋವಿಡ್‌ಗಿಂತಲೂ ಹೆಚ್ಚು ಮಾರಣಾಂತಿಕವಾದ ಹಂದಿ ಜ್ವರ, ಫ್ಲೂ ಹಾಗೂ ಕೊರೋನಾ ಸಂಯೋಜನೆಯ ಫ್ಲೂರೋನಾದಿಂದಲೂ ರಕ್ಷಣೆ ಸಿಗುತ್ತದೆ’ ಎಂದಿದ್ದಾರೆ.

ಮಕ್ಕಳಿಗೆ ಮಾಸ್ಕ್ ಕಡ್ಡಾಯಗೊಳಿಸದಂತೆ ದೆಹಲಿ ಸರಕಾರಕ್ಕೆ ಪೋಷಕರ ಪತ್ರ

ಮಾಸ್ಕ್ ಧಾರಣೆಯಿಂದಾಗಿ ಶ್ವಾಸಕೋಶ ಸಂಬಂಧಿ ಹಲವಾರು ರೋಗಗಳು ಹರಡುವುದನ್ನು ತಡೆಯಬಹುದಾಗಿದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸ್ವಯಂಪ್ರೇರಣೆಯಿಂದ ಮಾಸ್ಕ್ ಧರಿಸಬೇಕು ಎಂದು ವೈರಣು ತಜ್ಞರು ಟಿ. ಜಾಕಬ್‌ ಜಾನ್‌ ಕೂಡಾ ಸಲಹೆ ನೀಡಿದ್ದಾರೆ. ಆದರೆ ಹಿರಿಯ ವೈದ್ಯ ಡಾ. ಅಕ್ಷಯ ಬುಧ್ರಾಜಾ‘ನಾವು ಸಾಮಾನ್ಯ ನೆಗಡಿ ವೈರಸ್‌ನಂತೆ ಕೊರೋನಾ ವೈರಸ್‌ನೊಂದಿಗೂ ಬದುಕಲು ಕಲಿಯಬೇಕು. ಹೀಗಾಗಿ ಸಾಮಾನ್ಯ ಜನರಿಗೆ ಮಾಸ್ಕ್‌ ಕಡ್ಡಾಯಗೊಳಿಸುವ ಅಗತ್ಯವಿಲ್ಲ. ಆದರೆ ರೋಗಿಗಳು, ಕಡಿಮೆ ರೋಗ ನಿರೋಧಕ ಶಕ್ತಿಯುಳ್ಳವರು, ಅತೀ ಜನಜಂಗುಳಿ ಪ್ರದೇಶದಲ್ಲಿ ಓಡಾಡುವವರು ಮಾಸ್‌್ಕ ಧರಿಸಿದರೆ ಸಾಕು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

click me!