ಅಮೃತಪಾಲ್‌ಗೆ ಆಶ್ರಯ ನೀಡಿದ ಮಹಿಳೆ ಅರೆಸ್ಟ್, ಖಲಿಸ್ತಾನಿ ನಾಯಕನ ಲೋಕೇಶನ್ ಪತ್ತೆ ಹಚ್ಚಿದ ಪೊಲೀಸ್!

By Suvarna News  |  First Published Mar 23, 2023, 5:58 PM IST

ಖಲಿಸ್ತಾನಿ ಉಗ್ರಸಂಘಟನಗೆ ಬೆಂಬಲ ನೀಡಿ ಭಾರತದಲ್ಲಿ ಖಲಿಸ್ತಾನ್ ಹೋರಾಟಕ್ಕೆ ಮರು ಜೀವನ ನೀಡಿದ ಅಮೃತಪಾಲ್ ಸಿಂಗ್ ಬಂಧನ ಪಂಜಾಬ್ ಪೊಲೀಸರಿಗೆ ತೀವ್ರ ತಲೆನೋವಾಗಿದೆ. ಕಳೆದ ಒಂದು ವಾರದಿಂದ ಪರಾರಿಯಾಗುವ ಅಮೃತ್‌ಪಾಲ್‌ಗೆ ಆಶ್ರಯ ನೀಡಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಜೊತೆಗೆ ಟವರ್ ಲೋಕೇಶನ್ ಮೂಲಕ ಸ್ಥಳ ಪತ್ತೆ ಹಚ್ಚಲಾಗಿದೆ.


ಹರ್ಯಾಣ (ಮಾ.23) ಖಲಿಸ್ತಾನ ಉಗ್ರ ಸಂಘಟನೆಯನ್ನು ಭಾರತದಲ್ಲಿ ಬಲಪಡಿಸಲು ಕಾರ್ಯನಿರ್ವಹಿಸಿದ ಅಮೃತ್ ಪಾಲ್ ಸಿಂಗ್ ಇದೀಗ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಪೊಲೀಸರು ಅಮೃತ್‌ಪಾಲ್ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದರ ಬೆನ್ನಲ್ಲೇ ಅಮೃತ್‌ಪಾಲ್ ಆಪ್ತರು, ಖಲಿಸ್ತಾನ ಬೆಂಬಲಿಗರನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸುತ್ತಿದೆ. ಇದೀಗ ಅಮೃತ್‌ಪಾಲ್ ಸಿಂಗ್ ಪರಾರಿ ವೇಳೆ ಅಶ್ರಯ ನೀಡಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪಂಜಾಬ್‌ನಿಂದ ಪರಾರಿಯಾದ ಅಮೃತ್‌ಪಾಲ್‌ಗೆ ಹರ್ಯಾಣದಲ್ಲಿ ಮಹಿಳೆ ಆಶ್ರಯ ನೀಡಿದ್ದರು. ಮಹಿಳೆಯ ತೀವ್ರ ವಿಚಾರಣೆ ಕೈಗೊಂಡಿರುವ ಪೊಲೀಸರು, ಅಮೃತ್‌ಪಾಲ್ ಸಿಂಗ್ ಕೊನೆಯ ಟವರ್ ಲೋಕೇಶನ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಶಹಬಾದ್  ಏರಿಯಾ ನಿವಾಸಿಯಾಗಿರುವ ಬಲ್ಜಿತ್ ಕೌರ್ ಅನ್ನೋ ಮಹಿಳೆ ಅಮೃತ್‌ಪಾಲ್ ಸಿಂಗ್‌ಗೆ ಆಶ್ರಯ ನೀಡಿದ್ದರು. ಅಮೃತ್‌ಪಾಲ್ ಸಿಂಗ್ ಜೊತೆಗ ಆತನ ಸಹಚರರಿಗೂ ಆಶ್ರಯ ನೀಡಲಾಗಿತ್ತು. ಮಹಿಳೆ ತಮ್ಮ ಮನೆಯಲ್ಲೇ ಅಮೃತ್‌ಪಾಲ್ ಹಾಗೂ ಆತನ ಆಪ್ತರಿಗೆ ಆಶ್ರಯ ನೀಡಿದ್ದರು. ಬಳಿಕ ಅಲ್ಲಿಂದ ಪರಾರಿಯಾಗಲು ನೆರವು ನೀಡಿದ್ದರು.  ಈ ಕುರಿತು ಮಾಹಿತಿ ಪಡೆದ ಹರ್ಯಾಣ ಪೊಲೀಸರು ಬಲ್ಜಿತ್ ಕೌರ್‌ನನ್ನು ಬಂಧಿಸಿದ್ದಾರೆ. ಇದೀಗ ಹರ್ಯಾಣ ಪೊಲೀಸರು ಬಲ್ಜಿತ್ ಕೌರ್‌ನನ್ನು ಪಂಜಾಬ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Tap to resize

Latest Videos

 

ಇವಳೇ ನೋಡಿ ಖಲಿಸ್ತಾನಿ ಉಗ್ರನ ಎನ್‌ಆರ್‌ಐ ಪತ್ನಿ: ವಿದೇಶಿ ಹಣದ ಮೂಲದ ಬಗ್ಗೆಯೂ ಪಂಜಾಬ್‌ ಪೊಲೀಸರ ವಿಚಾರಣೆ

ಅಮೃತ್‌ಪಾಲ್ ಸಿಂಗ್ ಕೊನೆಯ ಬಾರಿಗೆ ಮೊಬೈಲ್ ಟವರ್ ಲೋಕೇಶನ್ ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಹರ್ಯಾಣ, ರಾಜಸ್ಥಾನ ಗಡಿ ಬಾಗದಲ್ಲಿ ಅಮೃತ್‌ಪಾಲ್ ಸಿಂಗ್ ಕಣ್ತಪ್ಪಿಸಿ ಓಡಾಡುತ್ತಿರುವುದು ಪೊಲೀಸರ ಟವರ್ ಲೋಕೇಶನ್ ಫೈಂಡರ್‌ನಲ್ಲಿ ಪತ್ತೆಯಾಗಿದೆ. ಇತ್ತ ಹರ್ಯಾಣದಲ್ಲಿನ ಅಮೃತ್‌ಪಾಲ್ ಸಿಂಗ್‌ಗೆ ಆಶ್ರಯ ನೀಡಿದ್ದ ಮಹಿಳೆಯನ್ನು ಬಂಧಿಸಿರುವ ಬೆನ್ನಲ್ಲೇ ಪಂಜಾಬ್, ಹರ್ಯಾಣ ಹಾಗೂ ರಾಜಸ್ಥಾನದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಇತ್ತ ಅಮೃತ್‌ಪಾಲ್ ಸಿಂಗ್‌ ನೇಮಿಸಿಕೊಂಡಿದ್ದ ಖಾಸಗಿ ಭದ್ರತಾ ಪಡೆಯ ಒಬ್ಬೊಬ್ಬ ಸದಸ್ಯರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಇದೀಗ ಲುಧಿಯಾನ ಜಿಲ್ಲೆಯ ಮಂಗೇವಾಲ ಗ್ರಾಮದಲ್ಲಿ ಅಮೃತ್‌ಪಾಲ್ ಸಿಂಗ್‌ಗೆ ಭದ್ರತೆ ನೀಡಿದ್ದ ತಜಿಂದರ್ ಸಿಂಗ್ ಗಿಲ್‌ನನ್ನು ಬಂಧಿಸಲಾಗಿದೆ. ಲೈಸೆನ್ಸ್ ರಹಿತಿ ಶಸ್ತ್ರಾಸ್ತ್ರಗಳ ಪೋಟೋವನ್ನು ಸಾಮಾಜಿಕ ಜಾಲಾತಣದಲ್ಲಿ ಹಾಕಿದ್ದ. ಈ ಕುರಿತ ತನಿಖೆ ನಡೆಸಿದ ಪೊಲೀಸರು ಗಿಲ್‌ನನ್ನು ಬಂಧಿಸಿದ್ದಾರೆ. ಈತನ ಅಂಜಾಲಾ ಪೊಲೀಸ್ ಠಾಣೆ ಮೇಲೆ ಮುತ್ತಿಗೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ.

ಅಫೇರ್‌, ಬ್ಲ್ಯಾಕ್‌ಮೇಲ್‌: ಹನಿಮೂನ್‌ಗೆ ಹೋಗೋಣ ಎಂದು ಚಾಟ್‌ ಮಾಡಿದ್ದ ವಿವಾಹಿತ ಅಮೃತ್‌ಪಾಲ್‌ ಸಿಂಗ್..!

ಪೊಲೀಸರು ವಾರಿಸ್ ಪಂಜಾಬ್ ದೇ ಸಂಘಟನೆ ಮುಖ್ಯಸ್ಥ, ಖಲಿಸ್ತಾನಿ ಉಗ್ರ ಸಂಘಟನೆ ನಾಯಕ ಅಮೃತ್‌ಪಾಲ್ ಸಿಂಗ್ ಬಂಧನಕ್ಕೆ ಹರಸಾಹಸ ಮಾಡುತ್ತಿದೆ. ಆದರೆ ಅಮೃತ್‌ಪಾಲ್ ಸಿಂಗ್ ರಾಜ್ಯದಿಂದ ರಾಜ್ಯಕ್ಕೆ ಓಡಾಡುತ್ತಾ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾನೆ. 

click me!