ಹರ್ಯಾಣ ಫಲಿತಾಂಶ ನಿರೀಕ್ಷೆ ಬೇಸ್ತು ಬಿದ್ದಿದ್ದೆಲ್ಲಿ?

By Kannadaprabha NewsFirst Published Oct 25, 2019, 10:52 AM IST
Highlights

ಬಿಜೆಪಿ ಭರ್ಜರಿ ಬಹುಮತ ಪಡೆಯುತ್ತದೆ ಎಂಬ ಅಂದಾಜು, ಸಮೀಕ್ಷೆಗಳು ಹುಸಿ | ಲೋಕಸಭಾ ಚುನಾವಣೆ ಸಾಧನೆಯನ್ನು ಮಾನದಂಡವಾಗಿ ಇರಿಸಿದ್ದು ತಪ್ಪು |  ಬಿಜೆಪಿ ಮೇಲೆ ಜಾಟರ ಕೋಪ ಗುಪ್ತಗಾಮಿನಿಯಾಗಿದ್ದು ಯಾರಿಗೂ ಗೊತ್ತಾಗಲೇ ಇಲ್ಲ

ಚಂಡೀಗಢ (ಅ.25): ಬಹುತೇಕ ಚುನಾವಣಾಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳು ಹರ್ಯಾಣದಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಪುನಃ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಿದ್ದವು. ಈ ಅಂದಾಜು ಈಗ ತಪ್ಪಾಗಿದೆ.

ಹರ್ಯಾಣದಲ್ಲಿ ಫಲ ಕೊಟ್ಟ ಸೋನಿಯಾ ತಂತ್ರ

ಈ ತಪ್ಪು ಏಕಾಯಿತು ಎಂದು ವಿಶ್ಲೇಷಿಸಲು ಹೊರಟರೆ ಬಹುತೇಕ ಸಮೀಕ್ಷೆಗಳು 2019ರ ಲೋಕಸಭೆ ಚುನಾವಣೆಯನ್ನು ಮಾನದಂಡವಾಗಿ ಇರಿಸಿಕೊಂಡು ಅಂದಾಜು ಮಾಡಿದ್ದವು ಎಂದು ಹೇಳಲಾಗಿದೆ. 2019ರಲ್ಲಿ ಬಿಜೆಪಿ ಶೇ.58ರಷ್ಟುಮತ ಪಡೆದಿದ್ದರೆ, ಈ ಚುನಾವಣೆಯಲ್ಲಿ ಸುಮಾರು ಶೇ.36ರಷ್ಟುಮತ ಮಾತ್ರ ಪಡೆದಿದೆ. 2014ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಶೇ.2-3ರಷ್ಟುಹೆಚ್ಚು ಮತ ಪಡೆದಿದೆಯಾದರೂ, ಲೋಕಸಭೆ ಚುನಾವಣೆಯನ್ನು ವಿಧಾನಸಭೆ ಚುನಾವಣೆಗೆ ಮಾನದಂಡವಾಗಿ ಇರಿಸಿಕೊಳ್ಳುವುದು ಸರಿಯಲ್ಲ ಎಂದು ಈಗ ಸಾಬೀತಾಗಿದೆ.

ಇನ್ನು ಹರ್ಯಾಣದ ಪ್ರಬಲ ಜಾಟ್‌ ಸಮುದಾಯದವರನ್ನು ಬಿಜೆಪಿ ನಿರ್ಲಕ್ಷಿಸಿ, ಅನ್ಯ ಸಮುದಾಯದ ಮನೋಹರಲಾಲ್‌ ಖಟ್ಟರ್‌ ಅವರನ್ನು ಸಿಎಂ ಮಾಡಿತ್ತು. ಇದು ಜಾಟ್‌ ಸಮುದಾಯದ ಕೋಪಕ್ಕೆ ಕಾರಣವಾಗಿದೆ. 2014ರ ವಿಧಾನಸಭೆ ಚುನಾವಣೆಯಲ್ಲಿ ಶೇ.20 ಮತ ಪಡೆದಿದ್ದ ಕಾಂಗ್ರೆಸ್‌ ತನ್ನ ಮತದ ಪಾಲನ್ನು ಶೇ.29ಕ್ಕೆ ಹೆಚ್ಚಿಸಿಕೊಂಡಿದೆ. ಜೆಜೆಪಿ ಕೂಡ ಗಮನಾರ್ಹ ಮತ ಹಾಗೂ ಸ್ಥಾನ ಪಡೆದಿದೆ.

ಎಲ್ಲಾ ಮುಗಿಯಿತು ಎನ್ನುವಾಗಲೇ ಮತ್ತೆ ಪುಟಿದೆದ್ದ ಶರದ್ ಪವಾರ್!

ಚುನಾವಣೆಗಳನ್ನು ಬರೀ ಮೋದಿ ಅವರ ಪ್ರಚಾರದ ದೃಷ್ಟಿಯಲ್ಲಿ ನೋಡದೇ, ಸ್ಥಳೀಯ ಸರ್ಕಾರದ ದೃಷ್ಟಿಯಲ್ಲಿ ನೋಡಬೇಕು. ಸ್ಥಳೀಯ ಆಡಳಿತ ವಿರೋಧಿ ಅಲೆಯನ್ನು ಗಮನದಲ್ಲಿ ಇರಿಸಿಕೊಂಡು ಅಂದಾಜು ಮಾಡಬೇಕು ಎಂದು ಹರ್ಯಾಣ ಫಲಿತಾಂಶ ತೋರ್ಪಡಿಸಿದೆ.

click me!