
ನವದೆಹಲಿ (ಜು. 24): ಹರೀಶ ಸಾಳ್ವೆ ದೇಶದ ಅತ್ಯಂತ ಹೆಚ್ಚು ಫೀಸ್ ತೆಗೆದುಕೊಳ್ಳುವ ಸುಪ್ರೀಂಕೋರ್ಟ್ ವಕೀಲ. ಆದರೆ, ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ ಜಾಧವ್ ಪ್ರಕರಣದಲ್ಲಿ ಒಂದು ರುಪಾಯಿ ಸಾಂಕೇತಿಕವಾಗಿ ಪಡೆದು ಹೇಗ್‌ನ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಅವರು ಆ ಒಂದು ರುಪಾಯಿ ಫೀಸ್ ತೆಗೆದುಕೊಂಡು ಹೋಗಲು ಬನ್ನಿ ಎಂದು ಸಾಳ್ವೆಗೆ ಕರೆ ಮಾಡಿ, ನಂತರ ಕೆಲವೇ ಗಂಟೆಯಲ್ಲಿ ತೀರಿಕೊಂಡಿದ್ದರು. ಅದಾದ ಮೇಲೆ ತಾಯಿಯ ಇಚ್ಛೆಯಂತೆ ಮಗಳು ಹೋಗಿ ಸಾಳ್ವೆಗೆ ಒಂದು ರುಪಾಯಿ ಕೊಟ್ಟು ಬಂದಿದ್ದಳು!
ವಿಕಾಸ್ ದುಬೆ ಎನ್ಕೌಂಟರ್ ನಂತರ ಬದಲಾದ ಉ.ಪ್ರ ರಾಜಕೀಯ; ಬ್ರಾಹ್ಮಣರ ಓಲೈಕೆಯಲ್ಲಿ ಪ್ರಿಯಾಂಕ ಗಾಂಧಿ
ಈಗ ಮೋದಿ ಸರ್ಕಾರ ಹರೀಶ ಸಾಳ್ವೆ ಅವರನ್ನು ಭಾರತ ಸರ್ಕಾರದ ಅಟಾರ್ನಿ ಜನರಲ… ಆಗುವಂತೆ ಕೇಳಿಕೊಂಡಿದೆ. ಈಗಿನ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ… ನನ್ನನ್ನು ಜವಾಬ್ದಾರಿಯಿಂದ ಮುಕ್ತ ಮಾಡಿ ಎಂದು ಕೇಳಿಕೊಂಡಿದ್ದಾರೆ. ಆದರೆ ಸಾಳ್ವೆ ಲಂಡನ್‌ನಲ್ಲಿದ್ದು, ತಮಗೆ ಒಂದಷ್ಟುಕೆಲಸಗಳಿವೆ. ಮುಗಿದ ನಂತರ ಬರುತ್ತೇನೆ ಎಂದಿದ್ದಾರೆ. ಅಂದ ಹಾಗೆ ಹರೀಶ ಸಾಳ್ವೆ ಕಾಂಗ್ರೆಸ್ ನಾಯಕರಾಗಿದ್ದ ಎನ್.ಕೆ.ಪಿ. ಸಾಳ್ವೆ ಅವರ ಪುತ್ರ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ