ಬೀದಿಯಲ್ಲಿ ಕಸ ಎಸೆಯುವವರಿಗೆ 'ಹಾಲ್ ಆಫ್ ಶೇಮ್': ವೀಡಿಯೋ ಮಾಡಿ ಎಲ್‌ಇಡಿ ಸ್ಕ್ರೀನ್ ಮೇಲೆ ಪ್ರಸಾರ

Published : Feb 15, 2026, 04:37 PM IST
Assams Tinsukia municipal board has taken a bold step against illegal garbage

ಸಾರಾಂಶ

ವೀಕೆಂಡ್ ವಿತ್ ರಮೇಶ್‌ನಲ್ಲಿ ನೀವು ಕಾರ್ಯಕ್ರಮಕ್ಕೆ ಬಂದ ಅತಿಥಿಗಳ ಫೋಟೋಗಳನ್ನು ಕಾರ್ಯಕ್ರಮದ ಕೊನೆಯಲ್ಲಿ ವಾಲ್ ಆಫ್ ಫೇಮ್‌ಗೆ ಸೇರಿಸುವುದನ್ನು ನೋಡಿರಬಹುದು. ಅದೇ ಬೀದಿ ಬದಿ ಕಸ ಎಸೆಯುವವರಿಗೆ ಬುದ್ಧಿ ಕಲಿಸಲು ಅಸ್ಸಾಂನ ತಿನ್‌ಸುಖಿಯಾ ನಗರ 'ವಾಲ್ ಆಫ್ ಶೇಮ್' ಎಂಬ ವಿನೂತನ ಅಭಿಯಾನ ಆರಂಭಿಸಿದೆ. 

ಬೀದಿಯಲ್ಲಿ ಕಸ ಎಸೆಯುವುದನ್ನು ತಡೆಯಲು ಹೊಸ ಕ್ರಮ:

ಬೆಂಗಳೂರು/ಅಸ್ಸಾಂ ಸರ್ಕಾರ, ಪಾಲಿಕೆಗಳು ಬೀದಿಯನ್ನು ಸ್ವಚ್ಛವಾಗಿಡುವುಕ್ಕೆ ಎಂತೆಂಥಾ ಯೋಜನೆಗಳನ್ನು ಜಾರಿಗೆ ತಂದರೂ ಕೂಡ ಯಾವುದು ಸರಿಯಾಗಿ ಕಾರ್ಯರೂಪಕ್ಕೆ ಬರುವುದಿಲ್ಲ, ಹಲವು ವರ್ಷಗಳ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆ ಜನರಿಗೆ ಒಂದರಲ್ಲಿ ಹಸಿ ಕಸ ಹಾಕಿ ಇಲ್ಲೊಂದರಲ್ಲಿ ಒಣ ಕಸ ಹಾಕಿ ಎಂದು ಎರಡು ಬುಟ್ಟಿಗಳನ್ನು ನೀಡಿತ್ತು. ಆದರೂ ಜನ ಅವುಗಳನ್ನು ಮಿಶ್ರ ಮಾಡಿಯೇ ನೀಡುತ್ತಾರೆಯೇ ಹೊರತು ಇವತ್ತಿನವರೆಗೂ ಹಸಿ ಕಸ ಒಣ ಕಸ ಬೇರ್ಪಡಿಸಿ ನೀಡುವವರು ತೀರಾ ವಿರಳ. ಜನರ ಮನಸ್ಥಿತಿಯಿಂದ ಬೇಸತ್ತ ಬೆಂಗಳೂರು ಮಹಾನಗರ ಪಾಲಿಕೆ ಕೆಲ ತಿಂಗಳ ಹಿಂದೆ ಕಸ ಎಸೆದವರನ್ನು ಸಿಸಿಟಿವಿ ಮೂಲಕ ಸೆರೆ ಹಿಡಿದು ಅವರ ಮನೆ ಮುಂದೆಯೇ ಕಸ ಎಸೆದು ಹೋಗುವಂತಹ ಕಾರ್ಯವನ್ನು ಮಾಡಿತ್ತು. ಆದರೂ ಬೆಂಗಳೂರು ನಗರದ ಹಲವು ಕಡೆಗಳಲ್ಲಿ ಬೀದಿ ಬದಿ ಕಸ ಎಸೆಯುವ ಜನರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ.

ಲಕ್ಷಾಂತರ ಜನರಿರುವ ಮಹಾನಗರಿಯಲ್ಲಿ ಹೀಗೆ ಕಸ ಎಸೆಯುವವರನ್ನು ಹಿಡಿಯುವುದು ಸುಲಭದ ಕೆಲಸ ಅಲ್ಲ, ಹೀಗಿರುವಾಗ ಹೀಗೆ ಕಸ ಎಸೆದು ನಗರದ ಅಂದಗೆಡಿಸುವ ಜನರಿಗೆ ಸರಿಯಾಗಿ ಬುದ್ಧಿ ಕಲಿಸುವುದಕ್ಕೆ ಅಸ್ಸಾಂನ ತಿನ್‌ಸುಖಿಯಾ ನಗರವು ಒಂದು ವೈವಿಧ್ಯಪೂರ್ಣವಾದ ನಿರ್ಧಾರ ಕೈಗೊಂಡಿದೆ. ಹೌದು ವಾಲ್ ಆಫ್ ಫೇಮ್ ಶೇಮ್, ನೀವು ನೀವು ವಾಲ್ ಆಫ್ ಫೇಮ್ ಕೇಳಿರಬಹುದು. ಆದರೆ ಇದು ವಾಲ್ ಅಫ್ ಶೇಮ್. ಎಷ್ಟು ಹೇಳಿದರೂ ಕೇಳದೆ ನಾಗರಿಕ ಪ್ರಜ್ಞೆ ಇಲ್ಲದಂತೆ ನಗರದೆಲ್ಲೆಡೆ ಕಸ ಎಸೆಯುವ ಜನರಿಗೆ ಬುದ್ದಿ ಕಲಿಸುವುದಕ್ಕಾಗಿ ಈ ನಿರ್ಧಾರ ಮಾಡಲಾಗಿದೆ.

ಏನಿದು ವಾಲ್ ಆಫ್ ಶೇಮ್ ಫೇಮ್?

ವೀಕೆಂಡ್ ವಿತ್ ರಮೇಶ್‌ನಲ್ಲಿ ನೀವು ಕಾರ್ಯಕ್ರಮಕ್ಕೆ ಬಂದ ಅತಿಥಿಗಳ ಫೋಟೋಗಳನ್ನು ಕಾರ್ಯಕ್ರಮದ ಕೊನೆಯಲ್ಲಿ ವಾಲ್ ಆಫ್ ಫೇಮ್‌ಗೆ ಸೇರಿಸುವುದನ್ನು ನೋಡಿರಬಹುದು. ಅದೇ ರೀತಿ ಇಲ್ಲಿ ಎಷ್ಟು ಬಾರಿ ಹೇಳಿದರು ಕೇಳದೇ ನಗರದಲ್ಲಿ ಕಸ ಎಸೆಯುವರನ್ನು ಸಿಸಿಟಿವಿಯ ಮೂಲಕವೋ ಅಥವಾ ಮೊಬೈಲ್ ಕ್ಯಾಮರಾಗಳ ಮೂಲಕವೋ ಸೆರೆ ಹಿಡಿದು ಅದನ್ನು ನಗರದ ನಡುವೆ ದೊಡ್ಡ ಎಲ್‌ಇಡಿ ಸ್ಕ್ರೀನ್ ಮೇಲೆ ಪ್ಲೇ ಮಾಡಲಾಗುತ್ತದೆ. ವೀಡಿಯೋಗೆ ಈ ಜನರು ತೀನ್‌ಸುಖಿಯಾ ನಗರಿಯ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಸಬ್‌ಟೈಟಲ್ ನೀಡಿ ಪ್ಲೇ ಮಾಡಲಾಗುತ್ತದೆ. ದಾರಿಯಲ್ಲಿ ಹೋಗುವವರಿಗೆ ಬರುವವರ ಕಣ್ಣಿಗೆ ರಾರಾಜಿಸುವಂತೆ ಕಾಣುವ ಈ ವೀಡಿಯೋವನ್ನು ಎಲ್ಲರೂ ನೋಡಿಯೇ ನೋಡುತ್ತಾರೆ. ಕನಿಷ್ಠ ಈಗಲಾದರೂ ಜನ ಎಚ್ಚೆತ್ತುಕೊಂಡು ಬದಲಾಗಬೇಕು ಎಂಬುದು ಈ ವೀಡಿಯೋದ ಉದ್ದೇಶವಾಗಿದೆ. ಅಸ್ಸಾಂನ ತಿನ್ಸುಖಿಯಾದ ಮುನ್ಸಿಪಲ್ ಬೋರ್ಡ್ ಈ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ: ಮಗಳ ಮದುವೆಗೆಂದು ಬ್ಯಾಂಕ್‌ ಲಾಕರ್‌ನಲ್ಲಿ ಚಿನ್ನ ಇಟ್ಟಿದ್ದ ದಂಪತಿಗೆ ಆಘಾತ: 65 ಲಕ್ಷ ಮೌಲ್ಯದ ಚಿನ್ನ ನಾಪತ್ತೆ

ತಿನ್ಸುಖಿಯಾದಲ್ಲಿ ಎಲ್ಲಾದರು ಕಸ ಎಸೆಯಿರಿ ಹಾಗೂ 15 ನಿಮಿಷಗಳ ನಿಮ್ಮ ವೀಡಿಯೋವನ್ನು ವಾಲ್ ಆಫ್ ಶೇಮ್‌ನ ದೊಡ್ಡ ಪರದೆಯ ಮೇಲೆ ಎಂಜಾಯ್ ಮಾಡಿ. ಇದಕ್ಕೆ ಯಾವುದೇ ಆಡಿಷನ್ ಅಗತ್ಯವಿಲ್ಲ, ನಿಮಗೆ ಯಾವುದೇ ಪ್ರತಿಭೆ ಇಲ್ಲದೇ ಕ್ಷಣದಲ್ಲಿ ಪ್ರಸಿದ್ಧಿ ಸಿಗುತ್ತದೆ ಎಂದು ಬರೆಯಲಾಗಿದೆ. ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದು, ಭಾರತದ ಎಲ್ಲಾ ನಗರಗಳಲ್ಲೂ ಇಂತಹದೊಂದು ಕಾರ್ಯತಂತ್ರದ ಅಗತ್ಯವಿದೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಇಂತಹವರಿಗೆ ಇನ್ನಷ್ಟು ಪ್ರಚಾರ ನೀಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಕಾರ್ಯಗಳಿಂದ ಜನರ ಮನಸ್ಥಿತಿ ಬದಲಾಗುತ್ತಾ? ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ..

ಇದನ್ನೂ ಓದಿ:  ಪತ್ನಿ ತವರು ಮನೆಯಿಂದ ಬಂದಿಲ್ಲ ಅಂತ ಹೆಣ್ಣು ಕೊಟ್ಟ ಮಾವನನ್ನೇ ಕೊಂದ ಅಳಿಯ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

21 ಸೆಕೆಂಡ್ ವಿಡಿಯೋ ಕೋಲಾಹಲ, ಸನ್ಯಾಸಿನಿಗೆ ಕಾಮ ಪ್ರಚೋದನೆ ಯತ್ನಿಸಿದ ವಿದ್ಯಾರ್ಥಿಗಳ ಗುಂಪು
ಮಗಳ ಮದುವೆಗೆಂದು ಬ್ಯಾಂಕ್‌ ಲಾಕರ್‌ನಲ್ಲಿ ಚಿನ್ನ ಇಟ್ಟಿದ್ದ ದಂಪತಿಗೆ ಆಘಾತ: 65 ಲಕ್ಷ ಮೌಲ್ಯದ ಚಿನ್ನ ನಾಪತ್ತೆ