ಹಿಂದೂ ಅರ್ಜಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಜ್ಞಾನವಾಪಿ ಶಿವಲಿಂಗ ಸ್ಥಳದ ಶುಚಿತ್ವ ಕಾಪಡಲು ಸೂಚನೆ!

By Suvarna News  |  First Published Jan 16, 2024, 3:28 PM IST

ಮಥುರಾ ಶ್ರೀಕೃಷ್ಣ ಮಂದಿರ ಆವರಣದಲ್ಲಿರುವ ಮಸೀದಿ ಸರ್ವೆಗೆ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ನಿರಾಸೆಯಲ್ಲಿದ್ದ ಹಿಂದೂಗಳಿಗೆ ಕಾಶಿ ವಿಶ್ವನಾಥ ಮಂದಿರದ ಹೋರಾಟದಲ್ಲಿ ಗೆಲವೊಂದು ಸಿಕ್ಕಿದೆ. ಜ್ಞಾನವಾಪಿ ಮಸೀದಿ ವಝುಖಾನ ಆವರಣದ ಶುಚಿತ್ವ ಕಾಪಾಡಬೇಕು ಅನ್ನೋ ಹಿಂದೂಗಳ ಅರ್ಜಿಯನ್ನು ಸುಪ್ರೀಂ ಮಾನ್ಯ ಮಾಡಿದೆ.
 


ನವದೆಹಲಿ(ಜ.16) ಸುಮಾರು 500 ವರ್ಷಗಳ ವಿವಾದ ಬಗೆಹರಿದು ಆಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮ ಮಂದಿರ ಇದೀಗ ಉದ್ಘಾಟನೆಗೆ ಸಜ್ಜಾಗಿದೆ. ಆದರೆ ಕಾಶಿ ಹಾಗೂ ಮಥುರಾ ವಿವಾದಗಳು ಸದ್ಯಕ್ಕೆ ಬಗೆ ಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಮಥುರಾದ ಈದ್ಗಾ ಮಸೀದಿ ಸರ್ವೆಗೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಇದೇ ವೇಳೆ ಕಾಶೀ ವಿಶ್ವನಾಥ ಹೋರಾಟದಲ್ಲಿ ಹಿಂದೂಗಳಿಗೆ ಗೆಲುವಾಗಿದೆ. ಜ್ಞಾನವಾಪಿ ಮಸೀದಿ ಸಮೀಕ್ಷೆಯಲ್ಲಿ ಪತ್ತೆಯಾದ ಶಿವಲಿಂಗ ಸ್ಥಳವನ್ನು ಮುಸ್ಲಿಮರು ವಝುಖಾನವಾಗಿ ಬಳಕೆ ಮಾಡಿ ಅಪವಿತ್ರ ಮಾಡಿದ್ದಾರೆ. ಇದು ಹಿಂದೂ ಭಕ್ತರ ಭಾವನೆಯನ್ನು ಘಾಸಿಗೊಳಿಸಿದೆ. ಹೀಗಾಗಿ ಈ ಸ್ಥಳದ ಶುಚಿತ್ವ ಕಾಪಾಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ.

ಮಸೀದಿಯ ಸರ್ವೆಯಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಆದರೆ ಈ ಶಿವಲಿಂಗ ಸ್ಥಳವನ್ನು ಮುಸ್ಲಿಮರು ತಮ್ಮ ನಮಾಜ್‌ಗೆ ಮೊದಲು ಕೈಕಾಲು, ಮುಖ ತೊಳೆಯಲು ವಝುಖಾನವಾಗಿ ಬಳಕೆ ಮಾಡುತ್ತಿದ್ದರು. ಇದರಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಅತ್ಯಂತ ಪವಿತ್ರ ಶಿವಲಿಂಗವನ್ನು ಅಪವಿತ್ರಗೊಳಿಸಲಾಗಿದೆ. ಹೀಗಾಗಿ ಸದ್ಯ ಶಿವಲಿಂಗ ಪತ್ತೆಯಾಗಿರುವ ವಝುಖಾನ ಸ್ಥಳದಲ್ಲಿ ಶುಚಿತ್ವ ಹಾಗೂ ಪಾವಿತ್ರ್ಯತೆ ಕಾಪಾಡಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿತ್ತು. ಈ ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್, ಪಾವಿತ್ರ್ಯತೆ ಕಾಪಾಡಲು ಸೂಚನೆ ನೀಡಿದೆ.

Tap to resize

Latest Videos

ಜ್ಞಾನವಾಪಿ ಮಸೀದಿಯೋ ಮಂದಿರವೋ? ಕಾನೂನು ಹೋರಾಟದಲ್ಲಿ ಹಿಂದೂಗಳಿಗೆ ಮಹತ್ವದ ಗೆಲುವು!

ವಾರಣಾಸಿ ಜಿಲ್ಲಾಧಿಕಾರಿಗಳ ಸುಪರ್ಧಿಯಲ್ಲಿ ಶುಚಿತ್ವ ಹಾಗೂ ಪಾವಿತ್ರ್ಯತೆ ಕಾಪಾಡಲು ಎಲ್ಲಾ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಈ ಮೂಲಕ ಶಿವಲಿಂಗ ಪತ್ತೆಯಾಗಿರುವ ಸ್ಥಳದ ಪಾವಿತ್ರ್ಯತೆ ಕುರಿತು ಆತಂಕಗೊಂಡಿದ್ದ ಹಿಂದೂಗಳು ನಿಟ್ಟುಸಿರುಬಿಟ್ಟಿದ್ದಾರೆ.

ಕಾಶಿ ವಿಶ್ವನಾಥ ದೇಗುಲ ಒಡೆದೆ ಜ್ಞಾನವಾಪಿ ಮಸೀದಿ ಕಟ್ಟಲಾಗಿದೆ. ಆದರೆ ಈ ಮಸೀದಿ ಗೊಡೆ ಹಾಗೂ ಒಳಗಿರುವ ಹಿಂದೂ ದೇವರಿಗೆ ಪೂಜೆ ಸಲ್ಲಿಸುವ ಅವಕಾಶನ್ನು ನಿರಾಕರಿಸಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಹಿಂದೂಗಳ ಪೂಜೆ ಮಾಡುವ ಮೂಲಭೂತ ಮತ್ತು ಸಾಂಪ್ರದಾಯಿಕ ಹಕ್ಕಿನ ಉಲ್ಲಂಘನೆಯಾಗಿದೆ. ಈ ಕಾರಣಕ್ಕಾಗಿ ನಿತ್ಯವೂ ಪೂಜೆ ಮಾಡುವ ಹಕ್ಕನ್ನು ಮರಳಿಸಬೇಕು ಎಂದು 5 ಜನ ಹಿಂದೂ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯದ ಮಸೀದಿಯೊಳಗೆ ಏನಿದೆ ಎಂಬುದರ ಪತ್ತೆಗೆ ವಿಡಿಯೋ ಚಿತ್ರೀಕರಣಕ್ಕೆ ಆದೇಶಿಸಿತ್ತು. ಈ ಚಿತ್ರೀಕರಣದ ವೇಳೆ ಮಸೀದಿಯೊಳಗೆ ಹಿಂದೂ ದೇಗುಲದ ಹಲವು ಅವಶೇಷಗಳು ಪತ್ತೆಯಾಗಿದ್ದವು. ಶಿವಲಿಂಗ ಕೂಡ ಪತ್ತೆಯಾಗಿತ್ತು 

Gyanvapi Case: ಪೂಜೆ, ಸಮೀಕ್ಷೆ ವಿರುದ್ಧ ಮುಸ್ಲಿಮರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ!
 

click me!