ಇಂಡಿಗೋ ಪೈಲಟ್ ಮೇಲೆ ಹಲ್ಲೆ ಮಾಡಿ ದೇಶಾದ್ಯಂತ ಸುದ್ದಿಯಾಗಿರುವ ಸಾಹಿಲ್ ಕಟಾರಿಯಾಗೆ ಐದು ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಹನಿಮೂನ್‌ಗಾಗಿ ಅತ ಗೋವಾಗೆ ಪ್ರಯಾಣ ಮಾಡುತ್ತಿದ್ದ ಎಂದು ದೆಹಲಿ ಪೊಲೀಸ್ ವಿಚಾರಣೆ ವೇಳೆ ಬಯಲಾಗಿದೆ.
ನವದೆಹಲಿ (ಜ.16): ಇಂಡಿಗೋ ವಿಮಾನದ ಪೈಲಟ್ ಮೇಲೆ ಹಲ್ಲೆ ಮಾಡಿ ಸುದ್ದಿಯಾಗಿರುವ ಆರೋಪಿ ಸಾಹಿಲ್ ಕಟಾರಿಯಾನ ತನಿಖೆಯನ್ನು ದೆಹಲಿ ಪೊಲೀಸ್ ಮಾಡುತ್ತಿದೆ. ತನಿಖೆಯ ಆರಂಭಿಕ ಹಂತದಲ್ಲಿ ತಾನು ಐದು ತಿಂಗಳ ಹಿಂದೆ ವಿವಾಹವಾಗಿದ್ದಾಗಿ ತಿಳಿಸಿರುವ ಆತ, ಗೋವಾಗೆ ಹನಿಮೂನ್‌ಗೆ ಹೋಗುತ್ತಿದ್ದೆ ಎಂದು ತಿಳಿಸಿದ್ದಾರೆ. ಆದರೆ, ನಿರಂತರವಾಗಿ ಆಗುತ್ತಿದ್ದ ವಿಳಂಬ ನನ್ನ ಎಲ್ಲಾ ಯೋಜನೆಗಳ ಮೇಲೆ ಪರಿಣಾಮವನ್ನು ಬೀರಿತು. ಆ ಕಾರಣಕ್ಕಾಗಿ ನಾನು ಸಿಟ್ಟಿನಿಂದ ಈ ಕೃತ್ಯ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ವಿಮಾನ ವಿಳಂಬದ ಕುರಿತು ಪೈಲೈಟ್ ಪ್ರಕರರಣ ನೀಡುತ್ತಿದ್ದ ವೇಳೆ, ಪೈಲಟ್ ಬಳಿ ಓಡಿ ಬಂದಿದ್ದ ಸಾಹಿಲ್ ಕಟಾರಿಯಾ ಆತನ ಕೆನ್ನೆಗೆ ಬಾರಿಸಿದ್ದರು. ತಕ್ಷಣವೇ ಆತನನ್ನು ವಿಮಾನದಿಂದ ಕೆಳಗಿಳಿಸಿದ್ದು ಮಾತ್ರವಲ್ಲದೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್) ಹಸ್ತಾಂತರ ಮಾಡಲಾಗಿತ್ತು. ನಿಗದಿಯಂತೆ ವಿಮಾನ ನವದೆಹಲಿಯಿಂದ ಸಂಜೆ 6 ಗಂಟೆಗೆ ಟೇಕ್‌ಆಫ್ ಆಗಬೇಕಿತ್ತು. ಆದರೆ, ತೀವ್ರ ಮಂಜಿನ ಕಾರಣದಿಂದಾಗಿ ಅಂದಾಜು 10 ಗಂಟೆಗಳ ಕಾಲ ವಿಳಂಬವಾಗಿತ್ತು. ಇದು ಸಾಕಷ್ಟು ಪ್ರಯಾಣಿಕರ ಪ್ರಯಾಣದ ಯೋಜನೆ ವ್ಯತ್ಯಾಸಕ್ಕೆ ಕಾರಣವಾಗಿತ್ತು.
ಸಾಹಿಲ್ ಕಟಾರಿಯಾ ವಿರುದ್ಧ ಸ್ವತಃ ಪೈಲಟ್ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, ಇದು ಜಾಮೀನು ಪಡೆಯಬಹುದಾದ ಪ್ರಕರಣವಾಗಿರುವ ಕಾರಣ, ಕೆಲವು ಗಂಟೆಗಳ ವಿಚಾರಣೆಯ ಬಳಿಕ ಈತನನ್ನು ಬಿಡುಗಡೆ ಮಾಡಲಾಗಿದೆ.
ಬಿಡುಗಡೆಯಾದ ಬಳಿಕ ಸಾಹಿಲ್ ಈ ಪ್ರಕರಣದಲ್ಲಿ ತಮ್ಮ ಪರವಾದ ಅಂಶಗಳನ್ನು ತಿಳಿಸಿದ್ದಾರೆ. ಪೈಲಟ್‌ಗಳು ಟೇಕ್-ಆಫ್ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡದೆ ತನ್ನನ್ನು ಮತ್ತು ಇತರ ಹಲವಾರು ಪ್ರಯಾಣಿಕರನ್ನು ದಾರಿ ತಪ್ಪಿಸಿದ್ದಾರೆ ಎಂದು ಹೇಳಿದ್ದಾರೆ. ಕೊನೆಯಲ್ಲಿ ಇವರು ಮತ್ತದೇ ವಿಚಾರ ಹೇಳಿದಾಗ ನನ್ನ ಆಕ್ರೋಶಕ್ಕೆ ಕಾರಣವಾಗಿತ್ತು, ಮತ್ತು ಪೈಲಟ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದೆ ಎಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಳಕೆದಾರರು ಕಟಾರಿಯಾ ಅವರ ಕೃತ್ಯದ ಬಕ್ಕೆ ಬೇಸರ ವ್ಯಕ್ತಪಡಿಸಿದ್ದು, ಅವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
Video: ಜೈ ಶ್ರೀರಾಮ್ ಘೋಷಣೆಯೊಂದಿಗೆ ದೆಹಲಿಯಿಂದ ಅಯೋಧ್ಯೆಗೆ ಹೊರಟ ಮೊದಲ ವಿಮಾನ
ಹಾಗಿದ್ದರೂ, ಘಟನೆಯನ್ನು ಕಂಡ ಕೆಲವು ವೀಕ್ಷಕರು ಕಟಾರಿಯಾ ಅವರನ್ನು ಬೆಂಬಲಿಸಿದರು, ಪೈಲಟ್ ವ್ಯಕ್ತಿಯನ್ನು ಪ್ರಚೋದಿಸಿದ್ದಲ್ಲದೆ, ಪ್ರಯಾಣಿಕರನ್ನು ವಿಮಾನದೊಳಗೆ ಸುಮಾರು 12 ಗಂಟೆಗಳ ಕಾಲ ಕಾಯುವಂತೆ ಮಾಡಿದರು ಎಂದು ಹೇಳಿದರು. ಮಂಜಿನಿಂದಾಗಿ ಅತೀ ಕಡಿಮೆ ಗೋಚರತೆಯಿಂದಾಗಿ ಜನವರಿ 15 ರಂದು ವಿಳಂಬಗೊಂಡ ಹಲವಾರು ವಿಮಾನಗಳಲ್ಲಿ ದೆಹಲಿ ಗೋವಾ ಇಂಡಿಗೋ 6E2175 ವಿಮಾನ ಕೂಡ ಒಂದಾಗಿದೆ.
ಚಳಿ ಮಂಜಿನಿಂದಾಗಿ ವಿಮಾನ ವಿಳಂಬ: ವಿಚಾರ ತಿಳಿಸಿದ ಪೈಲಟ್ ಮೇಲೆ ಪ್ರಯಾಣಿಕನಿಂದ ಹಲ್ಲೆ