ಹಿಂದೂ ಗೆಳೆಯನೊಂದಿಗೆ ಓಡಿದ ಮುಸ್ಲಿಂ ಯುವತಿ: ಮದ್ವೆ ರಿಜಿಸ್ಟ್ರೇಷನ್ ಕಚೇರಿಯಲ್ಲಿ ಸಂಬಂಧಿಕರ ಗಲಾಟೆ

Published : Apr 13, 2023, 02:30 PM ISTUpdated : Apr 13, 2023, 02:48 PM IST
ಹಿಂದೂ ಗೆಳೆಯನೊಂದಿಗೆ ಓಡಿದ ಮುಸ್ಲಿಂ ಯುವತಿ: ಮದ್ವೆ ರಿಜಿಸ್ಟ್ರೇಷನ್ ಕಚೇರಿಯಲ್ಲಿ ಸಂಬಂಧಿಕರ ಗಲಾಟೆ

ಸಾರಾಂಶ

ಹಿಂದೂ ಗೆಳೆಯನೊಂದಿಗೆ ಮುಸ್ಲಿಂ ಹುಡುಗಿಯೊಬ್ಬಳು ಓಡಿ ಹೋದ ಹಿನ್ನೆಲೆ ಯುವತಿ ಕಡೆಯವರು ವಿವಾಹ ನೋಂದಣಿ ಕಚೇರಿಗೆ ಬಂದು ಗಲಾಟೆ ಮಾಡಿದ ಘಟನೆ ಗುಜರಾತ್‌ನ (Gujarat) ವಡೋದರಾದಲ್ಲಿ (Vadodara) ನಡೆದಿದೆ.

ವಡೋದರ: ಹಿಂದೂ ಗೆಳೆಯನೊಂದಿಗೆ ಮುಸ್ಲಿಂ ಹುಡುಗಿಯೊಬ್ಬಳು ಓಡಿ ಹೋದ ಹಿನ್ನೆಲೆ ಯುವತಿ ಕಡೆಯವರು ವಿವಾಹ ನೋಂದಣಿ ಕಚೇರಿಗೆ ಬಂದು ಗಲಾಟೆ ಮಾಡಿದ ಘಟನೆ ಗುಜರಾತ್‌ನ (Gujarat) ವಡೋದರಾದಲ್ಲಿ (Vadodara) ನಡೆದಿದೆ. ಹಿಂದೂ ಹುಡುಗ ಹಾಗೂ ಮುಸ್ಲಿಂ ಹುಡುಗಿ ಪರಸ್ಪರ ಪ್ರೀತಿಸುತ್ತಿದ್ದು, ಕೆಲ ದಿನಗಳ ಹಿಂದೆ ಓಡಿ ಹೋಗಿದ್ದಾರೆ.  ಅವರು ತಮ್ಮ ವಿವಾಹವನ್ನು ನೋಂದಣಿ ಮಾಡಿಸುವುದಕ್ಕಾಗಿ ವಡೋದರ ನಗರದಲ್ಲಿರುವ ವಿವಾಹ ನೋಂದಣಿ ಕಚೇರಿಗೆ ಆಗಮಿಸಿದ್ದು,  ಈ ವಿಚಾರ ತಿಳಿದ ಹುಡುಗಿ ಕಡೆಯವರು ವಿವಾಹ ನೋಂದಣಿ ಕಚೇರಿಗೆ ಆಗಮಿಸಿ ದಾಂಧಲೆ ನಡೆಸಿದ್ದಾರೆ. 

ಯುವತಿ ಮನೆ ಬಿಟ್ಟು ಹೋದ ನಂತರ ಯುವತಿ ಮನೆಯವರು ಕರ್ಜಾನ್ ಪೊಲೀಸ್ ಠಾಣೆಯಲ್ಲಿ  ಯುವತಿ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು. ಯುವತಿಯ ಕುಟುಂಬಕ್ಕೆ ತಮ್ಮ ಮನೆ ಮಗಳು ಹಿಂದೂ ಯುವಕನನ್ನು ಪ್ರೀತಿಸುತ್ತಿರುವ ವಿಚಾರ ತಿಳಿದಿತ್ತು. ಈ ಮಧ್ಯೆ ಕೆಲ ದಿನಗಳ ಹಿಂದೆ ಇವರಿಬ್ಬರು ಓಡಿ ಹೋಗಿದ್ದರು. ಹೀಗೆ ಓಡಿ ಹೋದ ಅಂತರ್‌ಧರ್ಮಿಯ (Inter religion) ಜೋಡಿ  ವಡೋದರಾದ ಕುಬೇರ ಭವನದ (Kuber Bhavan) ಆರನೇ ಮಹಡಿಯಲ್ಲಿರುವ ವಿವಾಹ ನೋಂದಣಿ ಕಚೇರಿಗೆ ಆಗಮಿಸುವವರಿದ್ದರು.  ಈ ವಿಚಾರ ತಿಳಿದು ಅಲ್ಲಿ ಹುಡುಗಿ ಕುಟುಂಬದವರು ಆಗಮಿಸಿ ಗಲಾಟೆ ಮಾಡಿದ್ದಾರೆ. ಕೂಡಲೇ ಪೊಲೀಸರು ಆಗಮಿಸಿ ಈ ಅಂತರ್‌ಧರ್ಮೀಯ ಜೋಡಿಗೆ ರಕ್ಷಣೆ ನೀಡಿದ್ದಾರೆ.  ಇಬ್ಬರು ವಯಸ್ಕರಾಗಿದ್ದು, ಅವರನ್ನು  ರಾವೋಪುರ ಪೊಲೀಸರು  ರಕ್ಷಣೆಯೊಂದಿಗೆ  ಕಟ್ಟಡದ 9ನೇ ಮಹಡಿಗೆ ಕರೆದೊಯ್ದಿದ್ದಾರೆ. ಈ ವೇಳೆ ಮುಸ್ಲಿಂ ಸಂಘಟನೆಯೊಂದರ ಅನೇಕ ಜನರು ಅವರನ್ನು ಹಿಂಬಾಲಿಸಿ ಬಂದಿದ್ದಾರೆ.

ಹಿಂದೂ- ಮುಸ್ಲಿಂ ವಿವಾಹ : ಪೋಷಕರ ವಿರೋಧಕ್ಕೆ ಹೆದರಿ ನೇಣಿಗೆ ಶರಣಾದ ಪ್ರೇಮಿಗಳು

ನಂತರ ಜಿಲ್ಲಾ ಪೊಲೀಸ್ ಅಧಿಕಾರಿಗಳು ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿ, ಆಕೆಯ ಕುಟುಂಬದವರು ದಾಖಲಿಸಿದ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಮುಸ್ಲಿಂ ಯುವತಿಯ ಹೇಳಿಕೆಯನ್ನು ಪಡೆದಿದ್ದಾರೆ. ಇತ್ತ ಅಲ್ಲಿಗೆ ಬಂದ ಮುಸ್ಲಿಂ ಸಂಘಟನೆಗಳು ಯುವತಿಯ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆಕೆ ಒಪ್ಪದ ಹಿನ್ನೆಲೆಯಲ್ಲಿ ಯುವತಿಯನ್ನು ನಂತರ ನಾರಿ ಸಂರಕ್ಷಣ ಗೃಹಕ್ಕೆ (Nari Sanrakshan Gruh)ಕಳುಹಿಸಲಾಗಿದೆ. 

ಇದಕ್ಕೂ ಮೊದಲು ಜಮಾನಗರ (Jamnagar) ಜಿಲ್ಲೆಯ ಕಲವಾಡ ತಾಲೂಕಿನ ಹಸ್ತಾಲ್ ಗ್ರಾಮದಲ್ಲಿ (Hasthal village) ಇದೇ ರೀತಿಯ ಅಂತರ್‌ಧರ್ಮಿಯ ನಂಬಿಕೆಯೊಂದು ವಿವಾದಕ್ಕೆ  ಕಾರಣವಾಗಿತ್ತು.  ಇಲ್ಲಿ, ಮುಸ್ಲಿಂ ಹುಡುಗಿ ಮುಸ್ಕಾನ್ ಯೂಸುಫ್ ಅವರನ್ನು ಮದುವೆಯಾದ ಹಿಂದೂ ಯುವಕ ಹಿರೇನ್ ಎಂಬಾತನ ತಂದೆ, ಕಿಶೋರ್ ಕರ್ಸರಿಯಾ (Kishore Karsariya) ಮತ್ತು ಸಹೋದರಿ ಮೇಲೆ ಹಲ್ಲೆ ನಡೆಸಿ ಗ್ರಾಮಕ್ಕೆ ಪ್ರವೇಶಿಸುವುದಕ್ಕೆ ನಿಷೇಧ ಹೇರಲಾಯಿತು.  ಈ ಜೋಡಿ ರಾಜ್‌ಕೋಟ್‌ಗೆ ಓಡಿಹೋಗಿ ಅಲ್ಲಿ ಜೀವನ ನಡೆಸಲು ಶುರು ಮಾಡಿದ್ದರು.

ಕಾಶಿ ವಿಶ್ವನಾಥನಿಗೆ ಅಕ್ಬರಿ ಪೇಟ ತಯಾರಿಸಿ ತೊಡಿಸುವ ಘಿಯಾಸುದ್ದೀನ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ