Morbi bridge Tragedy ಘಟನಾ ಸ್ಥಳಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ!

By Suvarna News  |  First Published Oct 31, 2022, 4:12 PM IST

ಗುಜಾರಾತ್ ತೂಗು ಸೇತುವೆ ದುರಂತಕ್ಕೆ ವಿಶ್ವ ನಾಯಕರು ಮರುಗಿದ್ದಾರೆ. ಘಟನೆಯಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದ್ದರೆ, ಗಾಯಗೊಂಡವರು ಶೀಘ್ರದಲ್ಲೇ ಗುಣಮುಖರಾಗಲು ಪ್ರಾರ್ಥಿಸಿದ್ದಾರೆ. ಇದೀಗ 170 ಮಂದಿಯನ್ನು ರಕ್ಷಿಸಲಾಗಿದೆ. ಇದೀಗ ಪ್ರಧಾನಿ ಮೋದಿ ನಾಳಿನ ಕಾರ್ಯಕ್ರಮ ರದ್ದು ಮಾಡಿ ಘಟನಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.


ನವದೆಹಲಿ(ಅ.31): ಗುಜರಾತ್‌ನ ಮೊರ್ಬಿಯಲ್ಲಿ ನಡೆದ ತೂಗು ಸೇತುವ ದುರಂತದಲ್ಲಿ 133 ಮಂದಿ ಮೃತಪಟ್ಟಿದ್ದಾರೆ. ನಿನ್ನೆ(ಅ.29) ಸಂಜೆ ವೇಳೆ ಈ ಅವಘಡ ಸಂಭವಿಸಿದೆ. ತೂಗು ಸೇತುವೆ ಮೇಲೆ 500 ಮಂದಿ ಇದ್ದ ಸಂದರ್ಭದಲ್ಲಿ ಸೇತುವೆ ಕುಸಿದಿದಿದೆ. ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆದರೆ ಈ ದುರಂತದಲ್ಲಿ 133 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸಿಲುಕಿದ 170 ಮಂದಿನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯ ಮುಂದುವರಿದಿದೆ. ಘಟನಾ ಸ್ಥಳಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಘಟನೆಯಲ್ಲಿ ಮಡಿದವರಿಗೆ ಅಮೆರಿಕ ಮಿಶನ್, ರಷ್ಯಾ ಅಧ್ಯಕ್ಷ ವ್ಲಾದಮಿರ್ ಪುಟಿನ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಪ್ರಧಾನಿ ನಾಳೆನ ಕೆಲ ಕಾರ್ಯಕ್ರಮಗಳನ್ನು ರದ್ದು ಮಾಡಿ ಘಟನಾ ಸ್ಥಳಕ್ಕೆ ಬೇಟಿ ನೀಡುತ್ತಿದ್ದಾರೆ. ಮೋದಿ ತವರು ರಾಜ್ಯದಲ್ಲಿ ಈ ಘಟನೆ ನಡೆದಿದೆ. ಹೀಗಾಗಿ ಪ್ರಕರಣಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಘಟನೆ ನಡೆದ ಬೆನ್ನಲ್ಲೇ ತುರ್ತು ರಕ್ಷಣಾ ಕಾರ್ಯಕ್ಕೆ ಪ್ರಧಾನಿ ಮೋದಿ ಆದೇಶಿಸಿದ್ದರು. ಇತ್ತೀಚಿನ ದಿನಗಳಲ್ಲಿ ನಡೆದ ಅತೀ ದೊಡ್ಡ ದುರಂತ ಇದಾಗಿದೆ. ಇದೀಗ ಸೇತುವ ನಿರ್ವಹಣೆ ಮಾಡುತ್ತಿದ್ದ ಸಂಸ್ಥೆ ವಿರುದ್ಧ ದೂರು ದಾಖಲಾಗಿದೆ. 

Tap to resize

Latest Videos

ಗುಜರಾತ್ ತೂಗು ಸೇತುವೆ ಕುಸಿತ 130 ಮೀರಿದ ಮೃತರ ಸಂಖ್ಯೆ! ಕುಸಿತಕ್ಕೆ ಕಾರಣ ಏನು?

ಪ್ರವಾಸಿ ತಾಣಗಳಲ್ಲಿ ಇತ್ತೀಚೆಗೆ ಹೆಚ್ಚಿನ ದುರ್ಘಟನೆಗಳು ನಡೆಯುತ್ತಿದೆ. ನಿರ್ವಹಣೆ ಕೊರತೆ, ಕಳಪೆ ಕಾಮಾಗಾರಿಗಳಿಂದ ಮತ್ತೆ ಮತ್ತೆ ದುರಂತಗಳು ಮರುಕಳಿಸುತ್ತಿದೆ. ಇದೀಗ ಮೊರ್ಬಿ ತೂಗು ಸೇತುವೆ ಕುಸಿತ ಘಟನೆಯೂ ಇದಕ್ಕೆ ಸೇರಿಕೊಂಡಿದೆ.  ಮೊರ್ಬಿ ಘಟನೆಯನ್ನು ಸಿಬಿಐಗೆ ತನಿಖೆಗೆ ಒಪ್ಪಿಸಿ ಎಂದು ಆಗ್ರಹಗಳು ಕೇಳಿಬರುತ್ತಿದೆ. ಪ್ರಕರಣ ಸಿಬಿಐ ತನಿಖೆ ನಡೆಸಿದರೆ ಫಲಿತಾಂಶ ಕಾಣುವುದಿಲ್ಲ. ಕಾರಣ ಸಿಬಿಐ ಕೇಂದ್ರ ಸರ್ಕಾರದ ವಶದಲ್ಲಿದೆ ಎಂದು ಟಿಎಂಸಿ ನಾಯಕ ಶಂತನು ಸೇನ್ ಆರೋಪಿಸಿದ್ದಾರೆ. ಇತ್ತ ಬಿಹಾರ ಸಿಎಂ ನಿತೀಶ್ ಕುಮಾರ್, ಘಟನೆಯಲ್ಲಿ ಹಲವುಲೋಪಗಳು ಎದ್ದುಕಾಣುತ್ತಿದೆ. ಹೀಗಾಗಿ ತನಿಖೆ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ.

ಮೊರ್ಬಿ ನಗರದಲ್ಲಿ ಮಚ್ಛೂ ನದಿಗೆ 140 ವರ್ಷಗಳ ಹಿಂದೆ 762 ಅಡಿ ಉದ್ದದ ಸುಂದರವಾದ ತೂಗು ಸೇತುವೆಯೊಂದನ್ನು ನಿರ್ಮಿಸಲಾಗಿತ್ತು. ಪ್ರವಾಸಿಗರ ನೆಚ್ಚಿನ ತಾಣಗಳ ಪೈಕಿ ಒಂದಾದ ಈ ಸೇತುವೆಯನ್ನು 6 ತಿಂಗಳ ಕಾಲ ದುರಸ್ತಿಗೊಳಿಸಿ ಕೇವಲ 4 ದಿನಗಳ ಹಿಂದಷ್ಟೇ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಲಾಗಿತ್ತು. ದೀಪಾವಳಿ ರಜೆ ಮತ್ತು ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಭಾನುವಾರ ಸೇತುವೆ ವೀಕ್ಷಣೆಗೆ ಸಾವಿರಾರು ಜನರು ಆಗಮಿಸಿದ್ದರು.

Gujarat ಸೇತುವೆ ಕುಸಿತ: ರಾಜ್‌ಕೋಟ್‌ ಬಿಜೆಪಿ ಸಂಸದನ ಕುಟುಂಬದ 12 ಜನ ದುರ್ಮರಣ..!

ಭಾನುವಾರ ಹೀಗೆ 300-400 ಜನರು ನಿಂತಿದ್ದ ವೇಳೆ ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿಯೇ ಸೇತುವೆ ಕಬ್ಬಿಣದ ರಾಡ್‌ಗಳನ್ನು ಒದ್ದು, ಬಲವಂತವಾಗಿ ಎಳೆದಾಡಿದ್ದಾರೆ. ಈ ವೇಳೆ ಸಂಜೆ 6.30ರ ಹೊತ್ತಿಗೆ ಸೇತುವೆ ಏಕಾಏಕಿ ಕುಸಿದು ಬಿದ್ದಿದೆ. ಈ ವೇಳೆ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರು ಕ್ಷಣಾರ್ಧದಲ್ಲಿ ನದಿ ಪಾಲಾಗಿದ್ದಾರೆ. ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ನದಿಗೆ ಬಿದ್ದವರನ್ನು ರಕ್ಷಿಸುವ ವೇಳೆಗಾಗಲೇ 75 ಜನರು ಸಾವನ್ನಪ್ಪಿದ್ದಾರೆ. ಉಳಿದ ಕೆಲವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

click me!