ಪ್ರಧಾನಿ ಮೋದಿಯನ್ನು ಟೀಕಿಸಿ ಜೈಲುಪಾಲಾಗಿದ್ದ ಜಿಗ್ನೇಶ್ ಮೇವಾನಿಗೆ ಜಾಮೀನು, ಅದರ ಬೆನ್ನಲ್ಲೇ ಮತ್ತೆ ಅರೆಸ್ಟ್!

Published : Apr 25, 2022, 04:41 PM ISTUpdated : Apr 25, 2022, 04:45 PM IST
ಪ್ರಧಾನಿ ಮೋದಿಯನ್ನು ಟೀಕಿಸಿ ಜೈಲುಪಾಲಾಗಿದ್ದ ಜಿಗ್ನೇಶ್ ಮೇವಾನಿಗೆ ಜಾಮೀನು, ಅದರ ಬೆನ್ನಲ್ಲೇ ಮತ್ತೆ ಅರೆಸ್ಟ್!

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಗೆ ಹೋಲಿಸಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, ಬಂಧನಕ್ಕೆ ಒಳಗಾಗಿದ್ದರು. ಸೋಮವಾರ ಈ ಪ್ರಕರಣದಲ್ಲಿ ಮೇವಾನಿ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜಾಮೀನು ಪಡೆದ ಬೆನ್ನಲ್ಲಿಯೇ ಹೊಸ ಕೇಸ್ ನಲ್ಲಿ ಮತ್ತೊಮ್ಮೆ ಅವರನ್ನು ಬಂಧನಕ್ಕೆ ಒಳಪಡಿಸಲಾಗಿದೆ.  

ಗುವಾಹಟಿ (ಏ.25):  ಪ್ರಧಾನಿ ನರೇಂದ್ರ ಮೋದಿ (Prime Minister Narenda Modi) ಅವರ ಕುರಿತಾಗಿ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ (Gujarat MLA Jignesh Mevani) ಅಸ್ಸಾಂ ಕೋರ್ಟ್ (Assam Court) ಸೋಮವಾರ ಜಾಮೀನು ನೀಡಿದೆ. ಆದರೆ, ಜೀಮೀನು ನೀಡಿದ ಬೆನ್ನಲ್ಲಿಯೇ ಅಸ್ಸಾಂ ಪೊಲೀಸ್ ಹೊಸ ಕೇಸ್ ನಲ್ಲಿ ಜಿಗ್ನೇಶ್ ಮೇವಾನಿಯನ್ನು ಬಂಧಿಸಿದೆ.

ಮೇವಾನಿ ಅವರನ್ನು ಬಂಧಿಸಲು ಬಂದಿದ್ದ ಅಸ್ಸಾಂನ ಬರ್ಪೇಟಾ ಪೊಲೀಸರು ಗುಜರಾತ್ ಶಾಸಕನನ್ನು ಯಾವ ಪ್ರಕರಣದಲ್ಲಿ ಮತ್ತೆ ಬಂಧಿಸಲಾಗಿದೆ ಎನ್ನುವ ಮಾಹಿತಿಯನ್ನು ಈವರೆಗೂ ನೀಡಿಲ್ಲ. ಇದಕ್ಕೂ ಮುನ್ನ ಅಸ್ಸಾಂನ ಕೊಕ್ರಾಜ್ ಹರ್ ಬಳಿಯ ಸ್ಥಳೀಯ ಬಿಜೆಪಿ ನಾಯಕ (BJP Leader) ನೀಡಿದ್ದ ದೂರಿನ ಅನ್ವಯ ಕಳೆದ ಗುರುವಾರ ಅಸ್ಸಾಂ ಪೊಲೀಸ್ ಜಿಗ್ನೇಶ್ ಮೇವಾನಿಯನ್ನು ಗುಜರಾತ್ ನ ಪಾಲನ್ ಪುರದಿಂದ (Palanpur) ಬಂಧಿಸಿತ್ತು. ಜಿಗ್ನೇಶ್ ಮೇವಾನಿಯನ್ನು ಬಂಧಿಸಲು ಸಲುವಾಗಿಯೇ ಅಸ್ಸಾಂನ ಪೊಲೀಸ್ ತಂಡ ಪಾಲನ್ ಪುರಕ್ಕೆ ತೆರಳಿತ್ತು. ಪ್ರಧಾನಿ ಮೋದಿಯ ಕಟ್ಟಾ ವಿರೋಧಿಯಾಗಿರುವ ಜಿಗ್ನೇಶ್ ಮೇವಾನಿ, ತಮ್ಮ ಬಂಧನವನ್ನು ಪ್ರಧಾನಮಂತ್ರಿ ಕಚೇರಿಯ ದ್ವೇಷ ರಾಜಕಾರಣ ಎಂದು ಕರೆದಿದ್ದರು.

ಇದು ಬಿಜೆಪಿ ಹಾಗೂ ಆರ್ ಎಸ್ಎಸ್ ನ ಕುತಂತ್ರ. ಇನ್ನ ಇಮೇಜ್ ಗೆ ಧಕ್ಕೆ ತರುವ ದೃಷ್ಟಿಯಿಂದ ಅವರು ಈ ಕೆಲಸವನ್ನು ಮಾಡಿದ್ದಾರೆ. ಇದನ್ನು ವ್ಯವಸ್ಥಿತವಾಗಿ ಅವರು ಮಾಡುತ್ತಾ ಬಂದಿದ್ದಾರೆ. ರೋಹಿತ್ ವೇಮುಲ ವಿಚಾರದಲ್ಲೂ ಇದೇ ರೀತಿ ಮಾಡಿದರು. ಬಳಿಕ ಚಂದ್ರಶೇಖರ್ ಆಜಾದ್ ವಿರುದ್ಧವೂ ಇದೇ ದಾಳ ಪ್ರಯೋಗಿಸಿದರು. ಈ ನನ್ನ ಮೇಲೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಜಿಗ್ನೇಶ್ ಮೇವಾನಿ ಹೇಳಿದ್ದಾರೆ.

41 ವರ್ಷದ ಜಿಗ್ನೇಶ್ ಮೇವಾನಿ ವಿರುದ್ಧ ಕ್ರಿಮಿನಲ್ ಪಿತೂರಿ, ಧಾರ್ಮಿಕ ನಂಬಿಕೆಗಳ ಅವಹೇಳನ, ಶಾಂತಿಗೆ ಧಕ್ಕೆ ತರುವ ಪ್ರಯತ್ನ ಎಂದು ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಈ ಕುರಿತಾಗಿ ದೂರು ನೀಡಿದ್ದ ಬಿಜೆಪಿ ನಾಯಕ ಅರುಪ್ ಕುಮಾರ್ ದೇ (Arup Kumar Dey), ಜಿಗ್ನೇಶ್ ಮೇವಾನಿ ಮಾಡಿರುವ ಟ್ವೀಟ್ ಗಳು, ಕೆಲವೊಂದು ಸಮುದಾಯಗಳನ್ನು ಕೆಣಕುವ ಪ್ರಯತ್ನ ಇದಾಗಿದೆ ಎಂದು ತಮ್ಮ ಟ್ವೀಟ್ ನಲ್ಲಿ ಬರೆದಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅರುಣ್ ಕುಮಾರ್, ಜಿಗ್ನೇಶ್ ಮೇವಾನಿ ತಮ್ಮ ಪೋಸ್ಟ್ ಗಳಿಂದ ಜನರನ್ನು ಡಿವೈಡ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿ ಬಾರಿಯೂ ಅವರು ಪ್ರಧಾನಿ ಮೋದಿ ವಿರುದ್ಧ ನೆಗೆಟಿವ್ ಆಗಿ ಮಾತನಾಡುತ್ತಿರುತ್ತಾರೆ ಎಂದು ಹೇಳಿದ್ದರು.

ಮೋದಿ ಅವರು ನಮ್ಮ ಪ್ರಧಾನಿಯಾಗಿರುವುದು ನಮ್ಮ ಅದೃಷ್ಟ. ಆದರೆ, ಜಿಗ್ನೇಶ್ ಮೇವಾನಿ ಮೋದಿ ಹೆಸರನ್ನು ಇತ್ತೀಚಿನ ಹಿಂಸಾಚಾರಗಳಿಗೆ ಜೋಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದಿರುವ ಹಿಂಸಾಚಾರಗಳಿಗೆ ಪ್ರಧಾನಿ ಮೋದಿ ಕಾರಣವೇ? ಗೋಡ್ಸ್, ಪ್ರಧಾನಿ ನರೇಂದ್ರ ಮೋದಿ ಅವರ ದೇವರು ಎಂದು ಜಿಗ್ನೇಶ್ ಮೇವಾನಿ ಹೇಳ್ತಾರೆ. ಅವರಲ್ಲಿ ಇದನ್ನು ಸಾಬೀತುಪಡಿಸಲು ಯಾವ ದಾಖಲೆ ಇದೆ ಎಂದು ಹೇಳಿದ್ದಾರೆ. ದೂರು ಕೊಟ್ಟ 24 ಗಂಟೆಯ ಒಳಗಾಗಿ ಜಿಗ್ನೇಶ್ ಮೇವಾನಿ ಬಂಧನವಾಗಿದೆ. ಇದು ಮುಂಬರುವ ಗುಜರಾತ್ ಚುನಾವಣೆಯ ದೃಷ್ಟಿಯಿಂದ ಮಾಡಲಾದ ಕ್ರಮ ಎಂದು ಗುಜರಾತ್ ಕಾಂಗ್ರೆಸ್ ಟೀಕೆ ಮಾಡಿದೆ. 1995 ರಿಂದ ಗುಜರಾತ್ ನಲ್ಲಿ ಬಿಜೆಪಿ ಪಕ್ಷ ಆಡಳಿತ ನಡೆಸುತ್ತಿದೆ.

ಮೋದಿ ಯಾರೆಂದೇ ಗೊತ್ತಿಲ್ಲ ಎಂದ ಗುಜರಾತ್ ಶಾಸಕ..!

"ಮೋದಿ ಜೀ, ನೀವು ರಾಜ್ಯ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಪ್ರಯತ್ನಿಸಬಹುದು. ಆದರೆ ನೀವು ಎಂದಿಗೂ ಸತ್ಯವನ್ನು ಬಂಧಿಸಲು ಸಾಧ್ಯವಿಲ್ಲ" ಎಂದು ಕಾಂಗ್ರೆಸ್‌ನ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಬನಸ್ಕಾಂತದ ವಡ್ಗಾಮ್ ಕ್ಷೇತ್ರದಿಂದ ಸ್ವತಂತ್ರ ಶಾಸಕರಾಗಿರುವ ಜಿಗ್ನೇಶ್ ಮೇವಾನಿ ಅವರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಇಲ್ಲದೆ ಭಾರತ ಉಳಿಯುವುದಿಲ್ಲ; ಪಕ್ಷ ಸೇರಿದ ಬೆನ್ನಲ್ಲೇ ಕಾಂಗ್ರೆಸ್ ಹೊಗಳಿದ ಕನ್ಹಯ್ಯ!

ಹಿಂದೊಮ್ಮೆ ಕರ್ನಾಟಕದ ಚಿತ್ರದುರ್ಗದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಜಿಗ್ನೇಶ್ ಮೇವಾನಿ, ನನಗೆ ಮೋದಿ ಯಾರು ಎಂದೇ ಗೊತ್ತಿಲ್ಲ  ಎಂದು ಹೇಳಿದ್ದರು. ಪ್ರಧಾನಿ ಮೋದಿ ಚಹಾ ಮಾರಿದ ಮಾತು ಚೈಲ್ಡಿಶ್, ಜೋಕ್ ಆಫ್ ದಿ ಸಂಚೂರಿ. ಚಹಾ ಮಾರಿದ್ದಾರೋ ಇಲ್ಲವೋ ಈಗ ದೇಶ ಮಾರುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!