ಕೇವಲ 30 ಸಾವಿರ ರೂಗೆ ಸೋಲಾರ್ ಚಾಲಿತ ಕಾರು ತಯಾರಿಸಿದ ಕುಗ್ರಾಮದ ವ್ಯಕ್ತಿ

Published : Apr 25, 2026, 05:57 PM IST
Solar car

ಸಾರಾಂಶ

ಗುಜುರಿ ಸೇರಿದ್ದ ವಸ್ತುಗಳನ್ನು ಬಳಸಿ ಈ ಕಾರು ತಯಾರಿಸಲಾಗಿದೆ. ಸಂಪೂರ್ಣವಾಗಿ ಸೋಲಾರ್‌ನಿಂದ ಕಾರು ಓಡುತ್ತಿದೆ. ಕೇವಲ 30 ಸಾವಿರ ರೂಗೆ ಸೋಲಾರ್ ಚಾಲಿತ ಕಾರು ತಯಾರಿಸಿದ ಕುಗ್ರಾಮದ ವ್ಯಕ್ತಿಗೆ ಈಗ ಹಲವು ಕಂಪನಿಗಳಿಂದ ಬೇಡಿಕೆ

ಅಹಮ್ಮದಾಬಾದ್ (ಏ.25) ಭಾರದದಲ್ಲಿ ಸೋಲಾರ್ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಇತ್ತ ಇಂಧನ ವಾಹನಗಳ ಬಬದಲು ಎಲೆಕ್ಟ್ರಿಕ್ ವಾಹನಗಳಿಗೆ ಒತ್ತು ನೀಡಲಾಗಿದೆ. ಇವಿ ವಾಹನಗಳಿಗೆ ಚಾರ್ಜಿಂಗ್ ಮಾಡುವುದೇ ದೊಡ್ಡ ಸಮಸ್ಯೆಯಾಗುತ್ತಿದೆ. ಇದ್ಯಾವುದರ ಸಮಸ್ಯೆ ಇಲ್ಲದ ಸೋಲಾರ್ ಚಾಲಿತ ಕಾರನ್ನು ಕುಗ್ರಾಮದ ವ್ಯಕ್ತಿ ಅಭಿವೃದ್ಧಿಪಡಿಸಿದ್ದಾರೆ. ಗುಜುರಿಯಿಂದ ಕೆಲ ವಸ್ತುಗಳನ್ನು ಹೆಕ್ಕಿ ತಂದು ಸಂಪೂರ್ಣ ಸೋಲಾರ್ ಚಾಲಿತ ಕಾರು ಅಭಿವೃದ್ಧಿಪಡಿಸಲಾಗಿದೆ. ಕೇವಲ 30,000 ರೂಪಾಯಿಯಲ್ಲಿ ಈ ಕಾರು ತಯಾರಾಗಿದೆ.

ಗುಜರಿಯಿಂದ ಸೋಲಾರ್ ಕಾರು

ಗುಜರಾತ್‌ನ ಸಣ್ಣ ಹಳ್ಳಿಯ ಸಾಧುಲ್‌ಬಾಯ್ ಚಾವ್ಡ ಈ ಸೋಲಾರ್ ಕಾರು ತಯಾರಿಸಿದ್ದಾರೆ. ತಮಗೆ ವಯಸ್ಸಾಗುತ್ತಿದೆ ಎಂದು ಚಾವ್ಡಾ ವಿಶ್ರಾಂತಿಯ ಜೀವನಕ್ಕೆ ಜಾರಿಲ್ಲ. ಬದಲಾಗಿ ದುಬಾರಿ ಇಂಧನ, ಕೈಗೆಟುಕದ ಎಲೆಕ್ಟ್ರಿಕ್ ವಾಹನಗಳ ಬದಲು ತಾವೇ ಖುದ್ದಾಗಿ ಸೋಲಾರು ಕಾರು ಅಭಿವೃದ್ಧಿಪಡಿಸಿದ್ದಾರೆ. ಈ ಕಾರನ್ನು ಗುಜುರಿಯಲ್ಲಿ ಯಾರಿಗೂ ಬೇಡವಾಗಿ ಬಿದ್ದಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನ ಕೆಲ ವಸ್ತುಗಳು, ಗುಜರಿಯಲ್ಲಿದ್ದ ಕಬ್ಬಿಣ, ಇತರ ಸ್ಕೂಟರ್‌ಗಳ ಚಕ್ರಗಳನ್ನು ಬಳಸಿಕೊಂಡು ಈ ಕಾರು ತಯಾರಿಸಿದ್ದಾರೆ.

50 ರಿಂದ 60 ಕಿಲೋಮೀಟರ್ ಮೈಲೇಜ್

100 ವ್ಯಾಟ್ ಸೋಲಾರ್ ಪ್ಯಾನಲ್ ಬಳಕೆ ಮಾಡಲಾಗಿದೆ. ಈ ಪ್ಯಾನಲ್ ಮೂಲಕ ಬ್ಯಾಟರಿ ಚಾರ್ಜ್ ಆಗಲಿದೆ. ವಿಶೇಷ ಅಂದರೆ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಿದ್ದರೆ 50 ರಿಂದ 60 ಕಿಲೋಮೀಟರ್ ಮೈಲೇಜ್ ನೀಡಲಿದೆ. ಹಾಗಂತ ಈ ಕಾರು ಚಾರ್ಜ್ ಮಾಡಲು ಒಂದು ರೂಪಾಯಿ ನೀಡಬೇಕಿಲ್ಲ. ಕಾರಣ ಇದು ಸಂಪೂರ್ಣ ಸೋಲಾರ್ ಚಾಲಿತ ವಾಹನ. ಕಾರು ಬಿಸಿಲಿನಲ್ಲಿದ್ದರೆ ಸಾಕು ಚಾರ್ಜ್ ಆಗಲಿದೆ. ಹೀಗಾಗಿ ಸೂರ್ಯನ ಬೆಳಕಿನಲ್ಲಿ ಈ ಕಾರು ಚಲಿಸುತ್ತಲೇ ಚಾರ್ಜ್ ಆಗಲಿದೆ. ಇನ್ನು ಕತ್ತಲಲ್ಲಿ ಪ್ರಯಾಣಕ್ಕೆ ಬ್ಯಾಟರಿ ಮೂಲಕ ಚಾಲಿತಗೊಳ್ಳಲಿದೆ.

ಈ ಕಾರಿನ ಗರಿಷ್ಠ ವೇಗ 30 ರಿಂದ 40 ಕಿಲೋಮೀಟರ್ ಗಂಟೆಗೆ. ಈ ಕಾರಿನಲ್ಲಿ ಉರಿ ಬಿಸಿಲಿನ ಬೇಗೆ ತಡೆಯಲು ಸಣ್ಣ ಫ್ಯಾನ್ ಅಳವಡಿಸಲಾಗಿದೆ. ಇನ್ನು ಮ್ಯೂಸಿಕ್ ಸಿಸ್ಟಮ್ ಕೂಡ ಅಳವಡಿಸಲಾಗಿದೆ. ಕೇವಲ 25,000 ರೂಪಾಯಿಯಿಂದ 30,000 ರೂಪಾಯಿಗೆ ಈ ಕಾರು ನಿರ್ಮಾಣವಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಘವ್ ಚಡ್ಡಾ ಬಿಜೆಪಿ ಸೇರಿದ ಬೆನ್ನಲ್ಲೇ ಮದುವೆಯ ಬಗ್ಗೆ ಪರಿಣಿತಿ ಚೋಪ್ರಾ ಹಳೆಯ ಹೇಳಿಕೆ ಈಗ ವೈರಲ್
ಭಾರತದಲ್ಲಿ ಸರ್ಕಾರಿ ಅಧಿಕಾರಿಗಳ ಕುರ್ಚಿ ಮೇಲೆ ಬಿಳಿ ಟವೆಲ್ ಯಾಕಿರುತ್ತೆ? ಬ್ರಿಟಿಷರ ಪದ್ಧತಿ ಹಿಂದಿದೆ ಬಲವಾದ ಕಾರಣ