
ವಡೋದರಾ: ಗುಜರಾತ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ಪ್ರಜೆಗಳ ಪೈಕಿ 250 ಜನರನ್ನು ಗುಜರಾತ್ ಸರ್ಕಾರ ಢಾಕಾಗೆ ಗಡೀಪಾರು ಮಾಡಿದೆ. ಕೇಂದ್ರ ಸರ್ಕಾರದ ಸಹಕಾರದೊಂದಿಗೆ ವಾಯುಪಡೆ ವಿಶೇಷ ವಿಮಾನದ ಮೂಲಕ ವಡೋದರ ವಾಯುನೆಲೆಯಿಂದ ಬಾಂಗ್ಲಾ ವಲಸಿಗರ ಕೈಗಳಿಗೆ ಕೋಳಹಾಕಿ ಢಾಕಾಗೆ ಇಳಿಸಲಾಗಿದೆ.
ಇದು ಅಕ್ರಮ ಬಾಂಗ್ಲಾ ನಿವಾಸಿಗಳ ವಿರುದ್ಧ ಗುಜರಾತ್ ಸರ್ಕಾರದ ಕಾರ್ಯಾಚರಣೆಯ ಭಾಗವಾಗಿದ್ದು, ಕಳೆದ ತಿಂಗಳು ಅಹಮದಾಬಾದ್‌ನಲ್ಲಿ 1200 ಅಕ್ರಮ ಬಾಂಗ್ಲಾ ವಲಸಿಗರ ಮನೆಗಳನ್ನು ಸರ್ಕಾರ ನೆಲೆಸಮ ಮಾಡಿತ್ತು. ಈ ಅದರ ಮುಂದುವರಿದ ಭಾಗವಾಗಿ ಅಕ್ರಮ ವಲಸಿಗರನ್ನು ಅವರ ರಾಷ್ಟ್ರಕ್ಕೆ ಗಡೀಪಾರು ಮಾಡಲಾಗಿದೆ.
ಅಕ್ರಮ ವಲಸಿಗರ ಬಂಧನ, ಗಡೀಪಾರಿಗೆ ಟ್ರಂಪ್ ಸರ್ಕಾರ ಕೈಗೊಂಡಿರುವ ಕ್ರಮಗಳು ಅಮೆರಿಕದಲ್ಲೀಗ ಭಾರೀ ಹಿಂಸಾಚಾರಕ್ಕೆ ಕಾರಣ
ಅಕ್ರಮ ವಲಸಿಗರ ಬಂಧನ, ಗಡೀಪಾರಿಗೆ ಟ್ರಂಪ್ ಸರ್ಕಾರ ಕೈಗೊಂಡಿರುವ ಕ್ರಮಗಳು ಅಮೆರಿಕದಲ್ಲೀಗ ಭಾರೀ ಹಿಂಸಾಚಾರಕ್ಕೆ ಕಾರಣವಾಗಿದೆ. ಇತ್ತೀಚೆಗೆ ಲಾಸ್‌ಏಂಜಲೀಸ್‌ನಲ್ಲಿ 40 ವಲಸಿಗರ ಬಂಧನ ಖಂಡಿಸಿ ಅಕ್ರಮ ವಲಸಿಗರು ಬೀದಿಗಿಳಿದು ಹಿಂಸಾಚಾರ ಆರಂಭಿಸಿದ್ದಾರೆ. ಹಿಂಸೆ ತಡೆವ ಭದ್ರತಾ ಪಡೆಗಳ ಫಲ ಕೊಟ್ಟಿಲ್ಲ. ಹೀಗಾಗಿ ಸೇನೆ ಮತ್ತು ರಾಷ್ಟ್ರೀಯ ಗಾರ್ಡ್‌ಗಳನ್ನು ಅಧ್ಯಕ್ಷ ಟ್ರಂಪ್ ನಿಯೋಜಿಸಿದ್ದಾರೆ. ಇದು ಟ್ರಂಪ್ ಮತ್ತು ಹಲವು ರಾಜ್ಯ ಸರ್ಕಾರಗಳ ನಡುವೆ ತೀಕ್ಷ್ಣ ವಾಕ್ಸಮರಕ್ಕೂ ಕಾರಣವಾಗಿದೆ. ಈ ನಡುವೆ ಹಿಂಸೆ ಇತರೆ ರಾಜ್ಯಗಳಿಗೂ ಹಬ್ಬುವ ಭೀತಿ ಎದುರಾಗಿದ್ದು ಟ್ರಂಪ್ ಸರ್ಕಾರಕ್ಕೆ ಭಾರೀ ದೊಡ್ಡ ಸಮಸ್ಯೆ ಎದುರಾಗುವ ಲಕ್ಷಣ ಕಂಡುಬಂದಿದೆ.
ಲಾಸ್ ಏಂಜಲೀಸ್ ಉದ್ವಿಗ್ನ ಏಕೆ?
ಕಳೆದ ಶುಕ್ರವಾರ ಲಾಸ್ ಏಂಜಲೀಸ್‌ನಲ್ಲಿ ಒಂದೇ ಕಡೆ ಕೆಲಸ ಮಾಡುತ್ತಿದ್ದ ಸುಮಾರು 40 ವಲಸಿಗರ ಬಂಧನವಾಗಿತ್ತು. ಅದನ್ನು ವಿರೋಧಿಸಿ ನಡೆದ ಪ್ರತಿಭಟನೆಯೇ ಗಲಭೆಗೆ ತಿರುಗಿದೆ. ವಾಹನಗಳಿಗೆ ಬೆಂಕಿ, ಹೆದ್ದಾರಿ ತಡೆ ಮೂಲಕ ಹಿಂಸೆಯಾಗಿ ಬದಲಾಗಿದೆ. ಜೊತೆಗೆ ಜನರ ಮೇಲೆ ನಿಗಾ ಇಡುವ ಕಣ್ಗಾವಲು ವಾಹನಗಳಿಗೆ ಜನರು ಬೆಂಕಿ ಹಚ್ಚಿದ್ದಾರೆ. ಗುರುತು ತಡೆಗೆ ಮಾಸ್ಕ್ ಧರಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಹೀಗಾಗಿ ಮಾಸ್ಕ್ ಹಾಕಿ ಪ್ರತಿಭಟಿಸುತ್ತಿದ್ದವರ ಬಂಧನಕ್ಕೆ ಟ್ರಂಪ್ ಆದೇಶಿಸಿದ್ದರಿಂದ ಹಿಂಸೆ ಮತ್ತಷ್ಟು ಕಾವು ಪಡೆದಿದೆ. ಹೀಗಾಗಿ ಬೀದಿ ಬೀದಿಗಳಲ್ಲಿಯೂ ಪೊಲೀಸರು, ಪ್ರತಿಭಟನಾಕಾರರ ನಡುವೆ ಕಿತ್ತಾಟ ನಡೆಯುತ್ತಿದೆ.
ಟ್ರಂಪ್‌ಗೆ ಪ್ರತಿಷ್ಠೆಯ ಪ್ರಶ್ನೆ
ಅಧ್ಯಕ್ಷೀಯ ಚುನಾವಣೆ ವೇಳೆ ದೇಶದಲ್ಲಿ 1.7 ಕೋಟಿಗೂ ಹೆಚ್ಚಿನ ಅಕ್ರಮ ವಲಸಿಗರನ್ನು ದೇಶದಿಂದ ಗಡೀಪಾರು ಮಾಡುವ ಭರವಸೆಯನ್ನು ಟ್ರಂಪ್ ನೀಡಿದ್ದರು. ಅದು ಅಮೆರಿಕನ್ ಪ್ರಜೆಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಅದರನ್ವಯ ನಿತ್ಯವೂ ಕನಿಷ್ಠ ಪ್ರಮಾಣದ ಅಕ್ರಮ ವಲಸಿಗರ ಗಡೀಪಾರಿಗೆ ಟ್ರಂಪ್ ಸೂಚಿಸಿದ್ದಾರೆ. ಇದು ಸರ್ಕಾರದ ವಿರುದ್ಧ ಅಕ್ರಮ ವಲಸಿಗರು ಬೀದಿಗಿಳಿದ ಹೋರಾಟ ಮಾಡಲು ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ