
ಬೆಂಗಳೂರು (ಜು.04) ಬೆಂಗಳೂರು-ದೆಹಲಿ ಏರ್ ಇಂಡಿಯಾ ವಿಮಾನದ ಪೈಲೆಟ್ ದಿಢೀರ್ ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ನಡೆದಿದೆ. ದೆಹಲಿ ಪ್ರಯಾಣ ಬೆಳೆಸಿದ್ದ ವಿಮಾನ ಇನ್ನೇನು ಟೇಕ್ ಆಫ್‌ಗೆ ಕೆಲವೇ ಕ್ಷಣ ಮುನ್ನ ಪೈಲೆಟ್ ಅಸ್ವಸ್ಥಗೊಂಡ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ತೀವ್ರ ಅಸ್ವಸ್ಥಗೊಂಡ ಪೈಲೆಟನ್ನು ತಕ್ಷಣವೇ ಆಸ್ಪತ್ರೆ ದಾಖಲಿಸಲಾಗಿದೆ. ಇತ್ತ ಪೈಲೆಟ್ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾದ ಕಾರಣ ಏರ್ ಇಂಡಿಯಾ ವಿಮಾನ ಹಾರಾಟ ವಿಳಂಬವಾಗಿದೆ.
ಏರ್ ಇಂಡಿಯಾ ವಿಮಾನ AI2414 ಘಟನೆ
ಏರ್ ಇಂಡಿಯಾ ವಿಮಾನ AI2414 ಬೆಂಗಳೂರಿನಿಂದ ದೆಹಲಿಗೆ ಹೊರಡಲು ಸಜ್ಜಾಗಿತ್ತು. ಪ್ರಯಾಣಿಕರು ಬೋರ್ಡಿಂಗ್ ಆಗಿದ್ದರು. ಇತ್ತ ವಿಮಾನದ ಸಿಬ್ಬಂದಿಗಳು ಪ್ರಯಾಣಿಕರಿಗೆ ಕೆಲ ಮಹ್ವದ ಸೂಚನೆಗಳನ್ನು ತಿಳಿ ಹೇಳಿದ್ದರು. ಇನ್ನೇನು ವಿಮಾನ ಟೇಕ್ ಆಫ್ ಆಗೇಬಕು. ಆದರೆ ಪೈಲೆಟ್ ಅಸ್ವಸ್ಥಗೊಂಡಿದ್ದಾರೆ. ಮುಖ್ಯ ಪೈಲೆಟ್ ಅಸ್ವಸ್ಥಗೊಂಡು ಕುಸಿದು ಬಿದ್ದ ಕಾರಣ ತುರ್ತು ಸನ್ನಿವೇಶ ಸೃಷ್ಟಿಯಾಗಿತ್ತು.
ಪೈಲೆಟ್ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಕಾರಣ ವಿಮಾನ ನಿಲ್ದಾಣದ ಆ್ಯಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಇತ್ತ ಏರ್ ಇಂಡಿಯಾ ವಿಮಾನದಲ್ಲಿ ಪ್ರಮುಖ ಅನೌನ್ಸ್ ಮಾಡಲಾಗಿತ್ತು ಪೈಲೆಟ್ ಆರೋಗ್ಯದ ತುರ್ತು ಪರಿಸ್ಥಿತಿ ಸೃಷ್ಟಿಯಾದ ಕಾರಣ ವಿಮಾನ ಹಾರಾಟ ವಿಳಂಬವಾಗಿದೆ. ಶೀಘ್ರದಲ್ಲೇ ಮತ್ತೊಬ್ಬ ಪೈಲೆಟ್ ಟೇಕ್ ಆಫ್ ಮಾಡಲಿದ್ದಾರೆ ಎಂದು ಸೂಚಿಸಲಾಗಿತ್ತು. ಬಳಿಕ ಕೆಲ ಹೊತ್ತಿನ ಬಳಿಕ ಏರ್ ಇಂಡಿಯಾ ಬದಲಿ ಪೈಲೆಟ್ ಮೂಲಕ ಬೆಂಗಳೂರು-ದೆಹಲಿ ವಿಮಾನ ಪ್ರಯಾಣ ಮುಂದವರಿಸಿತ್ತು.
ಚಿಕಿತ್ಸೆ ಪಡೆಯುತ್ತಿರುವ ಪೈಲೆಟ್
ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾಗಿದ್ದ ಪೈಲೆಟ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪೈಲೆಟ್ ಆರೋಗ್ಯ ಸ್ಥಿರವಾಗಿದೆ. ಆದರೆ ವೈದ್ಯರ ನಿಘಾದಲ್ಲಿರುವ ಪೈಲೆಟ್‌ಗೆ ಚಿಕಿತ್ಸೆ ಮುಂದುವರಿದಿದೆ. ಇತ್ತ ಪೈಲೆಟ್ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಏರ್ ಇಂಡಿಯಾ ಆಶಿಸಿದೆ.
ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಹಲವು ವಿಮಾನಗಳಲ್ಲಿನ ತಾಂತ್ರಿಕ ದೋಷಗಳಿಂದ ವಿಮಾನ ತುರ್ತಾಗಿ ಲ್ಯಾಂಡ್ ಆದ ಹಲವು ಘಟನೆಗಳು ನಡೆದಿದೆ. ಏರ್ ಇಂಡಿಯಾ ವಿಮಾನದ ಫಿಟ್ನೆಸ್ ಹಾಗೂ ತಾಂತ್ರಿಕ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಕೇಂದ್ರ ವಿಮಾನಯಾನ ಸಚಿವಾಲಯ ಸೂಚಿಸಿದೆ. ಇದೇ ವೇಳೆ ಎಲ್ಲಾ ವಿಮಾನಗಳು ಸುರಕ್ಷತೆ, ತಾಂತ್ರಿಕತೆ ಕುರತು ಸೂಕ್ಷ್ಮವಾಗಿ ಪರಿಶೀಲಿಸಿ ವಿಮಾನ ಹಾರಟ ನಡೆಸುವಂತೆ ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ