ರಾಹುಲ್‌ ಗಾಂಧಿ ಆಯ್ತು, ಮೋದಿ ಫೋಟೋ ಹರಿದಿದ್ದ ಕಾಂಗ್ರೆಸ್‌ ಶಾಸಕನಿಗೆ ಕೋರ್ಟ್‌ ಶಿಕ್ಷೆ!

By Santosh NaikFirst Published Mar 28, 2023, 12:49 PM IST
Highlights

ಪ್ರಧಾನಿ ವಿರುದ್ಧ ಟೀಕೆ ಮಾಡುವ ಭರದಲ್ಲಿ ಜಾತಿ ನಿಂದನೆ ಮಾಡಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಇದರ ನಡುವೆ ಪ್ರತಿಭಟನೆಯೊಂದರ ವೇಳೆ ಪ್ರಧಾನಿ ಮೋದಿ ಅವರ ಫೋಟೋ ಹರಿದುಹಾಕಿದ್ದ ಕಾರಣಕ್ಕೆ ಗುಜರಾತ್‌ನ ಕಾಂಗ್ರೆಸ್‌ ಶಾಸಕನಿಗೆ ಕೋರ್ಟ್‌ ಶಿಕ್ಷೆ ವಿಧಿಸಿದೆ.

ನವಸಾರಿ (ಮಾ.28): 2017ರಲ್ಲಿ ವಿದ್ಯಾರ್ಥಿ ಹೋರಾಟದ ಸಂದರ್ಭದಲಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಹರಿದುಹಾಕಿದ್ದ ಕಾರಣಕ್ಕೆ ಗುಜರಾತ್‌ನ ನವಸಾರಿಯಲ್ಲಿರುವ ಕೋರ್ಟ್‌ ಕಾಂಗ್ರೆಸ್‌ ಶಾಸಕ ಅನಂತ್‌ ಪಟೇಲ್‌ಗೆ 99 ರೂಪಾಯಿ ದಂಡ ವಿಧಿಸಿದೆ. ಕೃಷಿ ವಿಶ್ವವಿದ್ಯಾಲಯದಲ್ಲಿರುವ ಉಪಕುಲಪತಿಯ ಚೇಂಬರ್‌ಗೆ ನುಗ್ಗಿದ್ದ ಅನಂತ್‌ ಪಟೇಲ್‌, ಅಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಆಕ್ರೋಶದಿಂದ ಹರಿದು ಹಾಕಿದ್ದರು. ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ವಿಎ ಧಾಧಲ್ ಅವರ ನ್ಯಾಯಾಲಯವು, ವಂಸ್ಡಾ (ಪರಿಶಿಷ್ಟ ಜಾತಿ) ಕ್ಷೇತ್ರದ ಶಾಸಕರಾದ ಅನಂತ್‌ ಪಟೇಲ್ ಅವರು ಮಾಡಿದ್ದು, ಕ್ರಿಮಿನಲ್ ಅತಿಕ್ರಮಣಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 447 ರ ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಿ ತೀರ್ಪು ನೀಡಿದೆ. ಯೂತ್ ಕಾಂಗ್ರೆಸ್ ಸದಸ್ಯರು ಸೇರಿದಂತೆ ಅನಂತ್‌ ಪಟೇಲ್ ಮತ್ತು ಇತರ ಆರು ಮಂದಿ ವಿರುದ್ಧ ಮೇ 2017ರಲ್ಲಿ ಜಲಾಲ್‌ಪೋರ್‌ ಪೊಲೀಸರಿಂದ ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ ಸಭೆ), 353 (ಹಲ್ಲೆ), 427 (₹ 50 ಕ್ಕಿಂತ ಹೆಚ್ಚು ನಷ್ಟಕ್ಕೆ ಕಾರಣವಾದ ಕಿಡಿಗೇಡಿತನ), 447 (ಅಪರಾಧದ ಉಲ್ಲಂಘನೆ) ಮತ್ತು 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 

ಅನಂತ್‌ ಪಟೇಲ್ ಮತ್ತು ಇತರರು ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ನವಸಾರಿ ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಕಚೇರಿಗೆ ಅನುಮತಿಯಿಲ್ಲದೆ ನುಗ್ಗಿದ್ದು ಮಾತ್ರವಲ್ಲದೆ ಅಶಿಸ್ತಿನ ವರ್ತನೆ ತೋರಿದ್ದರು. ಇದೇ ವೇಳೆ ಉಪಕುಲಪತಿ ಅವರ ಟೇಬಲ್‌ ಮೇಲಿದ್ದ ಪ್ರಧಾನಿ ಮೋದಿ ಅವರ ಚಿತ್ರವನ್ನು ಹರಿದು ಹಾಕುವ ಮೂಲಕ ಆಕ್ರೋಶ ತೋಡಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಕುದುರೆ ರೇಸ್‌ ಓಡಲು ಕತ್ತೆ ತಂದಿದ್ದೀರಿ: ರಾಹುಲ್‌ ಬಗ್ಗೆ ಸಚಿವ ಪುರಿ ಟೀಕೆ

ಕ್ರಿಮಿನಲ್ ಅತಿಕ್ರಮಣಕ್ಕಾಗಿ ಮೂವರು ಆರೋಪಿಗಳನ್ನು ತಪ್ಪಿತಸ್ಥರೆಂದು ನ್ಯಾಯಾಲಯವು ತೀರ್ಪು ನೀಡಿದೆ. ಇವರಿಗೆ 99 ದಂಡವನ್ನು ಠೇವಣಿ ಮಾಡಲು ಕೋರ್ಟ್‌ ಆದೇಶ ನೀಡಿದ್ದು, ತಪ್ಪಿದಲ್ಲಿ ಅವರು ಏಳು ದಿನಗಳ ಸಾದಾ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ. ಪ್ರಾಸಿಕ್ಯೂಷನ್ ಐಪಿಸಿಯ ಸೆಕ್ಷನ್ 447 ರ ಅಡಿಯಲ್ಲಿ ಅನಂತ್‌ ಪಟೇಲ್‌ಗೆ ಗರಿಷ್ಠ ಶಿಕ್ಷೆಯನ್ನು ಕೋರಿತು. ಮೂರು ತಿಂಗಳ ಜೈಲು ಶಿಕ್ಷೆ ಹಾಗೂ 500  ರೂಪಾಯಿಯ ದಂಡ ವಿಧಿಸುವಂತೆ ಹೇಳಿತ್ತು. ಆದರೆ, ಕೋರ್ಟ್‌ 99 ರೂಪಾಯಿ ದಂಡ ಶಿಕ್ಷೆಯನ್ನು ಮಾತ್ರವೇ ವಿಧಿಸಿದೆ.

ಕಳೆದ ವರ್ಷ ನಮೀಬಿಯಾದಿಂದ ಬಂದಿದ್ದ 5 ವರ್ಷದ ಹೆಣ್ಣು ಚೀತಾ ಸಾವು!

click me!