ಹಲವು ರೈಲು ರದ್ದುಗೊಳಿಸಿದ ಭಾರತೀಯ ರೈಲ್ವೆ, ಮಾರ್ಗ ಬದಲಿಸಿದ ಕರ್ನಾಟಕ ರೈಲುಗಳ ಪಟ್ಟಿ ವಿವರ ಇಲ್ಲಿದೆ

Published : Mar 28, 2023, 12:04 PM IST
ಹಲವು ರೈಲು ರದ್ದುಗೊಳಿಸಿದ ಭಾರತೀಯ ರೈಲ್ವೆ, ಮಾರ್ಗ ಬದಲಿಸಿದ ಕರ್ನಾಟಕ ರೈಲುಗಳ ಪಟ್ಟಿ ವಿವರ ಇಲ್ಲಿದೆ

ಸಾರಾಂಶ

ಮೂಲಸೌಕರ್ಯ ನಿರ್ವಹಣೆ ಮತ್ತು ಸುರಕ್ಷತಾ  ನಿರ್ವಹಣೆ  ಕಾರಣದಿಂದ ಮಂಗಳವಾರ ಭಾರತೀಯ ರೈಲ್ವೆ ಹಲವಾರು ರೈಲುಗಳನ್ನು ರದ್ದುಗೊಳಿಸಿದೆ ಮತ್ತು ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಿದೆ. ಇದರ ಸಂಪೂರ್ಣ ವೇಳಾ ಪಟ್ಟಿ ಇಲ್ಲಿದೆ.

ನವದೆಹಲಿ (ಮಾ.28): ಮೂಲಸೌಕರ್ಯ ನಿರ್ವಹಣೆ ಮತ್ತು ಸುರಕ್ಷತಾ ಕಾಳಜಿಯ ನಿರ್ವಹಣೆ ಮತ್ತು ಕಾರ್ಯಾಚರಣೆಯ ಕಾರಣದಿಂದ ಮಂಗಳವಾರ ಭಾರತೀಯ ರೈಲ್ವೆ ಹಲವಾರು ರೈಲುಗಳನ್ನು ರದ್ದುಗೊಳಿಸಿದೆ ಮತ್ತು ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಿದೆ. ಇಂದು ಹೊರಡಬೇಕಾಗಿದ್ದ ಹಲವು ರೈಲುಗಳ ವೇಳಾಪಟ್ಟಿಯನ್ನು ಕೂಡ ಭಾರತೀಯ ರೈಲ್ವೆ  ಬದಲಾಯಿಸಿದೆ. ಕೊಯಮತ್ತೂರು, ಬನಾರಸ್, ಭಾಗಲ್ಪುರ್ ಮುಂತಾದ ಹಲವಾರು ನಗರಗಳಿಂದ ಚಲಿಸುವ ರೈಲು ರದ್ದಾದ ರೈಲುಗಳ ಪಟ್ಟಿಯನ್ನು ಒಳಗೊಂಡಿದೆ.

ಅನಧಿಕೃತ ಏಜೆಂಟರು ಅಥವಾ ಸ್ಕ್ರಿಪ್ಟಿಂಗ್ ಮೂಲಕ ಬುಕ್ ಮಾಡಿದ ರೈಲು ಟಿಕೆಟ್‌ಗಳಿಗೆ ಹಣ ಮರುಪಾವತಿಯಿಲ್ಲ ಎಂದು ಭಾರತೀಯ ರೈಲ್ವೆ ಈ ಹಿಂದೆ ಘೋಷಿಸಿತ್ತು. IRCTC ವೆಬ್‌ಸೈಟ್ ಮೂಲಕ ಬುಕ್ ಮಾಡಿದ ಟಿಕೆಟ್‌ಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ ಮತ್ತು ಬಳಕೆದಾರರ ಖಾತೆಗಳಿಗೆ ಹಣವನ್ನು ಮರುಪಾವತಿ ಮಾಡಲಾಗುತ್ತದೆ ಎಂಬುದನ್ನು ರೈಲು ಪ್ರಯಾಣಿಕರು ಗಮನಿಸಬೇಕು. ಕೌಂಟರ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸಿದವರು ಮರುಪಾವತಿಯನ್ನು ಪಡೆಯಲು ಮೀಸಲಾತಿ ಕೌಂಟರ್‌ಗೆ ಭೇಟಿ ನೀಡಿ ಹಣ ವಾಪಸ್ ಪಡೆದುಕೊಳ್ಳಬಹುದು.

ಮಾರ್ಚ್ 28ರ ಇಂದು ಸಂಪೂರ್ಣವಾಗಿ ರದ್ದುಗೊಂಡ ರೈಲುಗಳ ಪಟ್ಟಿ ಇಂತಿದೆ:

  • 03485/03486 (ಗೊಡ್ಡಾ - ಹಂಸ್ದಿಹಾ - ಗೊಡ್ಡಾ)
  • 03457 (ದುಮ್ಕಾ - ಹಂಸ್ದಿಹಾ)
  • 03441 (ಹಂಸ್ದಿಹಾ - ಭಾಗಲ್ಪುರ್)
  • 03444/03443 (ಭಾಗಲ್ಪುರ್ - ಹಂಸ್ದಿಹಾ - ಭಾಗಲ್ಪುರ್)
  • ರೈಲು ಸಂಖ್ಯೆ. 06802 ಕೊಯಮತ್ತೂರು - ಸೇಲಂ ಮೆಮು ಎಕ್ಸ್‌ಪ್ರೆಸ್ ವಿಶೇಷ ಕೊಯಮತ್ತೂರು ಜೂ
  • ರೈಲು ಸಂಖ್ಯೆ. 06803 ಸೇಲಂ - ಕೊಯಮತ್ತೂರು MEMU ಎಕ್ಸ್‌ಪ್ರೆಸ್ ವಿಶೇಷ
  • ರೈಲು ಸಂಖ್ಯೆ. 15104/15103 (ಬನಾರಸ್-ಗೋರಖ್‌ಪುರ-ಬನಾರಸ್)

ಮಂಗಳೂರು- ಯಶವಂತಪುರ ವೀಕ್ಲಿ ರೈಲು ವೇಳಾಪಟ್ಟಿ ಪರಿಷ್ಕರಣೆ

ಸಮಯ ಬದಲಾವಣೆಯಾಗಿ/ತಡವಾಗಿ ಹೊರಡಲಿರುವ ರೈಲುಗಳ ಪಟ್ಟಿ 

  • 03455 (ದುಮ್ಕಾ - ಗೊಡ್ಡಾ) ಎರಡು ಗಂಟೆ ವಿಳಂಬ
  • 03482 (ಭಾಗಲ್ಪುರ್ - ಗೊಡ್ಡಾ)  ಸಮಯ ಬದಲಾವಣೆ ಮಾಡಲಾಗಿದೆ
  • 03456 (ಗೊಡ್ಡಾ - ದುಮ್ಕಾ) ಸಮಯ ಬದಲಾವಣೆ ಮಾಡಲಾಗಿದೆ
  • 18186 ಗೊಡ್ಡಾ - ಟಾಟಾನಗರ ಎಕ್ಸ್‌ಪ್ರೆಸ್, 12349 ಗೊಡ್ಡಾ - ನವದೆಹಲಿ ಎಕ್ಸ್‌ಪ್ರೆಸ್, 18604 ಗೊಡ್ಡಾ - ರಾಂಚಿ ಎಕ್ಸ್‌ಪ್ರೆಸ್ ಗೊಡ್ಡಾದಿಂದ ಸಂಜೆ 4 ಗಂಟೆಗೆ ಸಮಯ ನಿಗಧಿಯಾಗಿದೆ.

ಶಿವಮೊಗ್ಗದಿಂದ ಮತ್ತೆ ಎರಡು ರೈಲುಗಳ ಸೇವೆ ಪುನರಾರಂಭ: ಸಂಸದ ಬಿ.ವೈ.ರಾಘವೆಂದ್ರ

ಇಂದು ಮಾರ್ಗ ಬದಲಿಸಿದ ರೈಲುಗಳ ಪಟ್ಟಿ ಇಲ್ಲಿದೆ:

  • ಮಾರ್ಚ್ 28, 2023 ರಂದು ಕೆಎಸ್‌ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 12627 ಕೆಎಸ್‌ಆರ್ ಬೆಂಗಳೂರು - ನವದೆಹಲಿ ಡೈಲಿ ಕರ್ನಾಟಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು ಪುಣೆ, ಲೋನಾವಾಲಾ, ವಸಾಯಿ ರಸ್ತೆ, ವಡೋದರಾ, ರತ್ಲಂ ಮತ್ತು ಸಂತ ಹಿರ್ದರಾಮ್ ನಗರಗಳ ಮೂಲಕ ಹಾದುಹೋಗಲಿದೆ.
  • ಮಾರ್ಚ್ 28 ರಂದು ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 12629 ಯಶವಂತಪುರ - ಹಜರತ್ ನಿಜಾಮುದ್ದೀನ್ ದ್ವಿ-ವಾರದ ಕರ್ನಾಟಕ ಸಂಪರ್ಕ ಕ್ರಾಂತಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು ಪುಣೆ, ಲೋನಾವಾಲಾ, ಪನ್ವೇಲ್, ಕಲ್ಯಾಣ್ ಮತ್ತು ಮನ್ಮಾಡ್ ನಿಲ್ದಾಣಗಳ ಮೂಲಕ ಹಾದು ಹೋಗಲಿದೆ.
  • ರೈಲು ಸಂಖ್ಯೆ.19038 ಬರೌನಿ - ಬಾಂದ್ರಾ ಟರ್ಮಿನಸ್ ಅವಧ್ ಎಕ್ಸ್‌ಪ್ರೆಸ್  ರೈಲು ಮುಜಫರುಪುರ್ ಜೂ. – ಸೀತಾಮರ್ಹಿ – ರಕ್ಸಾಲ್ ಜೂ.- ಸಾಗೌಲಿ ಜೂ. ಮೂಲಕ ಪ್ರಯಾಣಿಸಲಿದೆ.
  • 12333 ಹೌರಾ - ಪ್ರಯಾಗ್‌ರಾಜ್ ವಿಭೂತಿ ಎಕ್ಸ್‌ಪ್ರೆಸ್ ರೈಲು ಬನಾರಸ್‌ನಲ್ಲಿ ನಿಲ್ಲಲಿದೆ ಮತ್ತು 12334 ಪ್ರಯಾಗ್‌ರಾಜ್ - ಹೌರಾ ವಿಭೂತಿ ಎಕ್ಸ್‌ಪ್ರೆಸ್ ರೈಲು ಪ್ರಯಾಗ್‌ರಾಜ್ ಬದಲಿಗೆ ಬನಾರಸ್‌ನಿಂದ ಮುಂದುವರೆದು ಪ್ರಯಾಣ ಬೆಳೆಸಲಿದೆ.
  • ರೈಲು ನಂ. 15716 (AII-KNE) ಅನ್ನು ಅಯೋಧ್ಯೆ ಕ್ಯಾಂಟ್-ಮಂಕಾಪುರ-ಗೋರಖ್‌ಪುರ-ಛಾಪ್ರಾ ಮೂಲಕ ಹಾದುಹೋಗಲಿದೆ.
  • ರೈಲು ನಂ. 19046 (ಛಪ್ರಾ-ಸೂರತ್) JCO ಅನ್ನು ಅದರ  ಮಾಮೂಲಿ ಮಾರ್ಗವಾದ ಪಹರ್‌ಪುರ-ಇಂದರಾ-ಮೌ-ಶಾಹ್‌ಗಂಜ್-ಜೌನ್‌ಪುರ್ ಬದಲಿಗೆ ಗಾಜಿಪುರ ನಗರ-ಔರ್ನಿಹಾರ್-ಜೌನ್‌ಪುರ್ ಮೂಲಕ ಕಳುಹಿಸಲಾಗುತ್ತದೆ.
  • ರೈಲು ನಂ.15050 ಗೋರಖ್‌ಪುರ - ಕೋಲ್ಕತ್ತಾ ಎಕ್ಸ್‌ಪ್ರೆಸ್  ರೈಲು ಅದರ ವೇಳಾಪಟ್ಟಿ ಮಾರ್ಗದ  ಭಟ್ನಿ - ಮೌ - ಇಂದಾರ - ಬಲ್ಲಿಯಾ - ಛಾಪ್ರಾ ಬದಲಾಗಿ ಭಟ್ನಿ - ಸಿವಾನ್ - ಛಾಪ್ರಾ ಮೂಲಕ ಪ್ರಯಾಣಿಸಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ