'ಗುಜರಾತ್‌ನಲ್ಲಿ ಈ ಪರಿ ಕೊರೋನಾ ಹರಡಲು ಟ್ರಂಪ್ ಕಾರಣ'

Published : May 06, 2020, 09:38 PM ISTUpdated : May 06, 2020, 09:40 PM IST
'ಗುಜರಾತ್‌ನಲ್ಲಿ ಈ ಪರಿ ಕೊರೋನಾ ಹರಡಲು ಟ್ರಂಪ್ ಕಾರಣ'

ಸಾರಾಂಶ

ಗುಜರಾತ್ ನಲ್ಲಿ ಈ ಪರಿ ಕೊರೋನಾ ಹರಡಲು ಕಾರಣ ಪತ್ತೆ ಹಚ್ಚಿದ ಕಾಂಗ್ರೆಸ್/ ನಮಸ್ತೆ ಟ್ರಂಪ್ ಕಾರ್ಯಕ್ರಮವೇ ಕೊರೋನಾ ಹರಡಲು ಮುಖ್ಯ ಕಾರಣ/ ಈ ಬಗ್ಗೆ ವಿಶೇಷ ತನಿಖಾ ದಳದಿಂದ ತನಿಖೆಯಾಗಬೇಕು

ಅಹಮದಾಬಾದ್(ಮೇ 06)  ಗುಜರಾತ್ ನಲ್ಲಿ ಕೊರೋನಾ ವೈರಸ್ ಈ ಪರಿಯಾಗಿ ಹರಡಲು ಏನು ಕಾರಣ ಎಂಬುದನ್ನು ಅಲ್ಲಿನ ಕಾಂಗ್ರಸ್   ಪತ್ತೆ ಹಚ್ಚಿದೆ! ನಿಮಗೆ ಅಚ್ಚರಿಯಾಗಬಹುದು ಕಾಂಗ್ರೆಸ್ ಈ ಸಂಶೋಧನೆ ಹೇಗೆ ಮಾಡಿತು ಅಂಥ. ವಿವರಗಳನ್ನು ನಿಮ್ಮ ಮುಂದೆ ಇಡುತ್ತೇವೆ ಕೇಳಿ.

ಗುಜರಾತ್ ಸರ್ಕಾರ ಆಯೋಜಿಸಿದ್ದ ನಮಸ್ತೆ ಟ್ರಂಪ್ ಕಾರ್ಯಕ್ರಮವೇ ಇದಕ್ಕೆ ಕಾರಣ. ಗುಜರಾತ್ ನಲ್ಲಿ ಕೊರೋನಾ ಹರಡಲು ಬಿಜೆಪಿ ಸರ್ಕಾರವೇ ಕಾರಣವಾಗಿದೆ ಎಂದು ಆರೋಪಿಸಿದೆ.

ಫೆಬ್ರವರಿ 24 ರಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿದ್ದಾಗ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕೇರಳದಲ್ಲಿ ಜನವರಿಯಲ್ಲೇ ಕೊರೋನಾ ಪಾಸಿಟವ್ ಕೇಸ್ ದಾಖಲಾಗಿತ್ತು. ಆದರೆ ಇಲ್ಲಿ ಸೋಶಿಯಲ್ ಡಿಸ್ಟಂಸಿಂಗ್ ಮರೆತು ಕಾರ್ಯಕ್ರಮ ಆಯೋಜನೆ ಮಾಡಿದ್ದೇ ಕೊರೋನಾ ಹರಡಲು ಕಾರಣವಾಯಿತು ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಅದ್ಭುತ,,,ಭಾರತದ ಈ ನಗರದಲ್ಲಿ ಒಂದೇ ಒಂದು ಕೊರೋನಾ ಕೇಸ್ ಇಲ್ಲ

ವಿಶೇಷ ತನಿಖಾ ದಳ ರಚಿಸಿ ಈ ಕಾರ್ಯಕ್ರಮ ಆಯೋಜನೆ ಬಗ್ಗೆ ಸ್ವತಂತ್ರ ತನಿಖೆಯಾಗಬೇಕು. ಈ ಕಾರ್ಯಕ್ರಮದಿಂದ ಕೊರೋನಾ ಹರಡಿದೆಯೇ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದೆ. 

ಅಹಮದಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗವಹಿಸಿದ್ದರು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ವೇದಿಕೆ ಹಂಚಿಕೊಂಡಿದ್ದರು . ಗುಜರಾತ್ ನಲ್ಲಿ ಇಲ್ಲಿಯವರೆಗೆ 5 ಸಾವಿರಕ್ಕೂ ಅಧಿಕ ಕೊರೋನಾ ಪೊಸೀಟಿವ್ ಕೇಸ್ ದಾಖಲಾಗಿ ಮಹಾರಾಷ್ಟ್ರ ನಂತರದ ಸ್ಥಾನದಲ್ಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?
ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು