
ನಾಗ್ಪುರ[ಜ.18]: ಹೊಸ ಸಂವಿಧಾನ ಶೀರ್ಷಿಕೆ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾವಚಿತ್ರ ಇರುವ ಕಡತವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಈ ಪೋಸ್ಟ್‌ಗೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಆರ್‌ಎಸ್‌ಎಸ್ ಶುಕ್ರವಾರ ಸ್ಪಷ್ಟನೆ ನೀಡಿದೆ.
'ಹಿಂದೆಯೂ RSS ಇತ್ತು, ಆದರೆ ಈ ಥರ ಇರ್ಲಿಲ್ಲ, ಈಗ ಫುಲ್ ರೌಡಿಸಂ'..!
ಭಾರತದ ಸಂವಿಧಾನದಲ್ಲಿ ಆರ್‌ಎಸ್‌ಎಸ್ ಸಂಪೂರ್ಣ ನಂಬಿಕೆ ಇಟ್ಟಿದೆ. ಹೊಸ ಸಂವಿಧಾನದ ಪ್ರಸ್ತಾವನೆಯನ್ನು ಆರ್‌ಎಸ್‌ಎಸ್ ಮುಂದಿಟ್ಟಿಲ್ಲ. ಇದೊಂದು ಸಂಘಟನೆಯ ಹೆಸರು ಕೆಡಿಸುವ ಯತ್ನ ಎಂದು ಆರ್‌ಎಸ್‌ಎಸ್ ಮುಖಂಡ ಶ್ರೀಧರ್ ಗಡ್ಗೆ ಹೇಳಿದ್ದಾರೆ.
ನಯಾ ಭಾರತ್ ಸಂವಿಧಾನ್ ಎಂಬ ಶೀರ್ಷಿಕೆ ಇರುವ 15 ಪುಟಗಳ ಕಡತ ಮತ್ತು ಮುಖ ಪುಟದ ಮೇಲೆ ಮೋಹನ್ ಭಾಗವತ್ ಅವರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ