
ಜಗತ್ತಿನ ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಫಿನ್‌ಲ್ಯಾಂಡ್ ದೇಶದ ಪ್ರಧಾನಿ ಸನ್ನಾ ಮರಿನ್ ಇತ್ತೀಚೆಗೆ ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ಫಿನ್‌ಲ್ಯಾಂಡ್‌ನ ನೂತನ ಪ್ರಧಾನಿ ಆ ದೇಶದ ನೌಕರರಿಗೊಂದು ಸಿಹಿ ಸುದ್ದಿ ನೀಡಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದೇನೆಂದರೆ ಸನ್ನಾ ಮರಿನ್ ನೌಕರರು ದಿನಕ್ಕೆ 6 ಗಂಟೆ ಮತ್ತು ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ಮಾಡಬೇಕೆಂಬ ಕಾಯ್ದೆ ಜಾರಿ ಮಾಡಿದ್ದಾರೆ.
ಹಲವಾರು ನೆಟ್ಟಿಗರು ಸನ್ನಾ ಮರಿನ್ ಅವರ ಈ ನಿರ್ಧಾರವನ್ನು ಶ್ಲಾಘಿಸಿ ವೈರಲ್ ಆಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆದರೆ ನಿಜಕ್ಕೂ ಫಿನ್‌ಲ್ಯಾಂಡ್‌ನಲ್ಲಿ ಇಂಥದ್ದೊಂದು ಕಾಯ್ದೆ ಜಾರಿ ಮಾಡಲಾಗಿದೆಯೇ ಎಂದು ಇಂಡಿಯಾ ಟು ಡೇ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸಾಬೀತಾಗಿದೆ.
Fact Check: ಆರ್‌ಎಸ್‌ಎಸ್ ಕಚೇರಿಯಲ್ಲಿ ಬಂದೂಕಿಗೆ ಪೂಜೆ ಸಲ್ಲಿಸಿದ್ರಾ ಮೋದಿ?
ಫಿನ್‌ಲ್ಯಾಂಡ್ ಸರ್ಕಾರ ಇಂಥದ್ದೊಂದು ಕಾಯ್ದೆಯನ್ನು ಜಾರಿ ಮಾಡಿಯೇ ಇಲ್ಲ. ಅಲ್ಲದೆ ಈ ವಿಷಯ ಸರ್ಕಾರದ ಅಜೆಂಡಾವೇ ಆಗಿರಲಿಲ್ಲ. ಜನವರಿ 7ರಂದು ಫಿನ್‌ಲ್ಯಾಂಡ್ ಸರ್ಕಾರ ಈ ಬಗ್ಗೆ ಟ್ವೀಟ್ ಮಾಡಿ, ಸರ್ಕಾರದ ಕಾರ‍್ಯಕ್ರಮಗಳ ಪಟ್ಟಿಯಲ್ಲಿ ದಿನಕ್ಕೆ 4 ಗಂಟೆ ಕೆಲಸದ ಬಗ್ಗೆ ಎಲ್ಲೂ ಉಲ್ಲೇಖಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.
Fact Check: ಇರಾನಿನ ವಿಡಿಯೋ ಪೋಸ್ಟ್ ಮಾಡಿ ಸಿಎಎ ಪ್ರತಿಭಟನೆ ಎಂದರು!
ಆದರೆ ಎಸೋಸಿಯೇಟ್ ಪ್ರೆಸ್ ವರದಿ ಪ್ರಕಾರ ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ಯಾನಲ್ ಚರ್ಚೆ ವೇಳೆ ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮತ್ತು ಸಾರಿಗೆ ಸಚಿವರಾಗಿದ್ದ ಸನ್ನಾ ಮರಿನ್ ವಾರಕ್ಕೆ 4 ದಿನ ಕೆಲಸದ ಅವಧಿ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಿದ್ದರು. ಆದರೆ ಇದನ್ನೇ ತಪ್ಪಾಗಿ ಅರ್ಥೈಸಿ ಕಾಯ್ದೆ ಜಾರಿ ಮಾಡಲಾಗಿದೆ ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ